ಕೆ.ಆರ್.ಪೇಟೆ: ಬಡಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಸಕಲ ಸೌಲಭ್ಯಗಳೊಂದಿಗೆ ವಸತಿ ಶಾಲೆಗಳನ್ನು ತೆರೆದಿದೆ. ಈ ಶಾಲೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿಯೇ ವಿದ್ಯಾರ್ಥಿಗಳನ್ನೂ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೂ ತಾಲೂಕಿನಲ್ಲಿ ಮೂರು ವಸತಿ ಶಾಲೆಗಳ ಪೈಕಿ ಒಂದಾದರೂ ಶೇ. 100 ಫಲಿತಾಂಶ ಪಡೆದಿಲ್ಲ. ಕೆಲವ ಮಕ್ಕಳು ಅನುತ್ತೀರ್ಣಗೊಂಡಿರುವ ಬಗ್ಗೆ ಶೈಕ್ಷಣಿಕ ಗುಣಮಟ್ಟ ಪ್ರಶ್ನಿಸುವಂತಾಗಿದೆ.
ಪ್ರತಿಭಾವಂತ ಮಕ್ಕಳ ಆಯ್ಕೆ: ವಸತಿ ಶಾಲೆಗಳಿಗೆ ಎಲ್ಲಾ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರನ್ನು ಮಾತ್ರ ವಸತಿ ಶಾಲೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ವಸತಿ ಶಾಲೆಯ ಮಕ್ಕಳಿಗೆ ಬೇರೆ ಮಕ್ಕಳಂತೆ ಮನೆ ಕೆಲಸ, ಹೊಲಗದ್ದೆ ಕೆಲಸ, ಇತರೆ ತೊಂದರೆಗಳು ಇರುವುದಿಲ್ಲ. ಸುಸಜ್ಜಿತ ವಸತಿ ನಿಲಯ, ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ, ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಮಕ್ಕಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಬೇಕು. ಆದರೆ ಉನ್ನತ ದರ್ಜೆ ಅಲ್ಲ, ಅನುತ್ತೀರ್ಣರಾದರೆ ಇದಕ್ಕೆ ಯಾರು ಹೊಣೆ? ಇಲ್ಲಿನ ಸಮಸ್ಯೆಗಳೇನು ಎಂಬುದು ಪ್ರಶ್ನಾರ್ಥಕವಾಗಿದೆ.
ನಿರ್ವಹಣೆ ಕೊರತೆಯೇ: ತಾಲೂಕಿನಲ್ಲಿರುವ ವಸತಿ ಶಾಲೆಗಳ ನಿರ್ವಹಣೆ ತಾಲೂಕಿನ ಶಿಕ್ಷಣ ಇಲಾಖೆಗಾಗಲಿ ಅಥವಾ ಜಿಲ್ಲಾ ಶಿಕ್ಷಣ ಇಲಾಖೆಗಾಗಲಿ ವಹಿಸಿಲ್ಲ. ಬೆಂಗಳೂರಿನಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ವಸತಿ ಶಾಲೆಗಳನ್ನು ನಿರ್ವಹಿಸುತ್ತಿದೆ. ನಿರ್ವಹಣೆ ಕೊರತೆಯಿಂದಲೇ ರಾಜ್ಯದ ಕೆಲ ವಸತಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ, ಫಲಿತಾಂಶ ಕುಸಿಯಲು ಕಾರಣವಾಗಿದೆ. ಬೆಂಗಳೂರಿನಿಂದ ಸದರಿ ಸಂಸ್ಥೆಯವರು ಗ್ರಾಮೀಣ ಭಾಗದ ವಸತಿ ಶಾಲೆಗಳಿಗೆ ಬಂದು ಪರಿಶೀಲನೆ ಮಾಡುವುದಿಲ್ಲ. ಇದು ಕೆಲ ಸ್ಥಳೀಯ ಶಿಕ್ಷಕರು ರಾಜಕೀಯ ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳಿಕೊಡದೆ ಕಾಲಹರಣ ಮಾಡುವುದಕ್ಕೆ ಮತ್ತು ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡುವುದಕ್ಕೆ ಪೂರಕ ವಾತಾವರಣ ಕಲ್ಪಿಸಿದೆ ಎಂಬುದು ಪೋಷಕರ ಆರೋಪವಾಗಿದೆ.
ವಿಠಲಾಪುರ ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ:
Advertisement
ಗವೀಮಠ ಮೊರಾರ್ಜಿ ದೇಸಾಯಿ ವಸತಿ ಶಾಳೆ ಶೇ. 98, ಮಾರ್ಗೋನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.88.22 ಮತ್ತು ಶೆಟ್ಟನಾಯಕನಕೊಪ್ಪಲು ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶೇ.95 ಫಲಿತಾಂಶ ಪಡೆದಿವೆ. ವಸತಿ ಶಾಲೆಯಲ್ಲಿ ನುರಿತು ಶಿಕ್ಷಕರು, ಪ್ರತಿಭಾವಂತ ಮಕ್ಕಳು ಸಕಲ ಸರ್ಕಾರಿ ಸೌಲಭ್ಯಗಳು ಕಲ್ಪಿಸಿದ್ದರೂ ಶೇ.100 ಫಲಿತಾಂಶ ಬಾರದೆ ಕೆಲ ಮಕ್ಕಳ ಅನುತ್ತೀರ್ಣಕ್ಕೆ ಕಾರಣವೇನು? ಯಾರು ಹೊಣೆ?
Related Articles
ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿರುವ ಏಕೈಕ ಶಾಲೆಯಾಗಿದೆ. ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 23 ಮಕ್ಕಳ ಪೈಕಿ ಇಬ್ಬರು ಉನ್ನತ ಶ್ರೇಣಿ, 14 ಮಕ್ಕಳು ಪ್ರಥಮ ದರ್ಜೆ, 6 ಮಕ್ಕಳು ದ್ವಿತೀಯ ದರ್ಜೆ ಮತ್ತು ಓರ್ವ ಮಾತ್ರ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ಐಶ್ವರ್ಯ ವಿ.ಜಿ 625ಕ್ಕೆ 572, ಸಿಂಚನಾ 560, ಸಿಂಚನಾ ವಿ.ಜಿ, ರಾಧಿಕಾ ಕೆ.ಜೆ 509 ಅಂಕಗಳನ್ನು ಪಡೆದಿದ್ದಾರೆ. ಸರ್ಕಾರಿ ಶಾಲೆ ಯಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಗಾಣಿಗಾ, ಶಿಕ್ಷಕವೃಂದಕ್ಕೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ಬಿಆರ್‌ಸಿ ರಾಮಪ್ಪ ಮತ್ತಿತರರು ಅಭಿನಂದನೆ ತಿಳಿಸಿದ್ದಾರೆ.
•ಎಚ್.ಬಿ.ಮಂಜುನಾಥ
Advertisement