Advertisement
ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಆಲ್ ಕಾರ್ಗೋ ಆಪರೇಷನ್ ಹಾಗೂ ಡಿಜಿಸಿಎ ಅನುಮತಿಸಿದ ವಿಶೇಷ ವಿಮಾನಗಳ ಹಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ಸಹ ತಿಳಿಸಿದೆ.
Related Articles
Advertisement
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೋವಿಡ್ ನಿರ್ವಹಣೆಯ ಕಾರಣಕ್ಕಾಗಿ ನಿರ್ಬಂಧವನ್ನು ಹೇರಲಾಗಿತ್ತು. ಸರ್ಕಾರ, ಈಗ ಆರ್ಥಿಕ ಕ್ಷೇತ್ರಗಳನ್ನು ಕಾರ್ಯಾರಂಭಿಸಲು ಅನುಮತಿಸಿದೆಯಾದರೂ, ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟಕ್ಕೆ ಇನ್ನೂ ಅನುಮತಿಸಿಲ್ಲ.
ದೇಶಿಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಕಳೆದ ವರ್ಷವೇ ಅನುಮತಿಯನ್ನು ನೀಡಿತ್ತು, ಆದರೇ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ.
ಇನ್ನು, ಕಳೆದ ಡಿಸೆಂಬರ್ ನಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಕೋವಿಡ್ ಸೋಂಕು ಹೆಚ್ಚಾದ ಕಾರಣ, ಅಲ್ಲಿಂದ ಭಾರತಕ್ಕೆ ಹಾಗೂ ಭಾರತದಿಂದ ಯುಕೆ ಗೆ ಹಾರಾಟ ನಡೆಸುತ್ತಿದ್ದ ವಿಮಾನಗಳಿಗೆ ನಿಷೇಧ ಹೇರಿತ್ತಾದರೂ, ಕೆಲವು ದಿನಗಳ ನಂತರ ನಿಷೇಧವನ್ನು ಹಿಂಪಡೆದಿತ್ತು.
ಓದಿ : ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್