Advertisement

ಗೋವಾದಲ್ಲಿ ಗಣಿ ಉತ್ಖನನಕ್ಕೆ ನಿರ್ಬಂಧ;ಕಂಪನಿಗಳಿಗೆ ಭಾರಿ ಹೊಡೆತ

07:24 PM May 05, 2022 | Team Udayavani |

ಪಣಜಿ: ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಅನುಸಾರ ಗೋವಾ ರಾಜ್ಯದಲ್ಲಿ ಗಣಿ ಉತ್ಖನನಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಟ್ಟಿನಲ್ಲಿ ಇದೀಗ ಗೋವಾ ಸರ್ಕಾರ ನಿರ್ಧಾರ ಕೈಗೊಂಡಿದ್ದು ಜೂನ್ 7 ರ ಒಳಗೆ ಗಣಿಗಳ ಮಾಲೀಕತ್ವ ಬಿಟ್ಟುಕೊಡುವಂತೆ ಆದೇಶಿಸಲಾಗಿದೆ.

Advertisement

ಗೋವಾ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಗಣಿಗಳಿಂದ ಅದಿರು ಉತ್ಖನನ ಸಂಪೂರ್ಣ ಬಂದ್ ಆಗಿದೆ. ಈ ವಿಷಯದಲ್ಲಿ ಸದ್ಯ ರಾಜ್ಯದಲ್ಲಿ ರಾಜಕೀಯವಲಯದಲ್ಲಿ ಆರೋಪ ಪ್ರತ್ಯಾರೋಪ ಕೇಳಿಬರುತ್ತಿದೆ. ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿದ್ದು ಗೋವಾದಲ್ಲಿನ ಗಣಿ ಮಾಲೀಕರಿಗೆ ಗಣಿಗಳ ಮಾಲೀಕತ್ವವನ್ನು ಬಿಟ್ಟುಕೊಡುವಂತೆ ಆದೇಶ ನೀಡಿದೆ.

ಮಯೆಮ್ ನಿಂದ ಅದಿರು ಸಾಗಾಟಕ್ಕೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ನಿರ್ಬಂಧ ಹೇರಿದೆ. ಮುಂಬಯಿ ಹೈಕೋರ್ಟ್ ನ ಗೋವಾ ಪೀಠವು ಮಯೆಮ್ ಗ್ರಾಮದಿಂದ ಅಕ್ರಮ ಅದಿರು ಸಾಗಿಸುವುದನ್ನು ತಡೆಯಲು ಮಧ್ಯಂತರ ಆದೇಶವನ್ನು ಹೊರಡಿಸಿದೆ. ಮಯೆಮ್ ಗ್ರಾಮದಿಂದ ಅದಿರು ಸಾಗಾಟ ಸ್ಥಗಿತಗೊಂಡಿರುವುದರಿಂದ ಗಣಿ ಕಂಪನಿಗಳಿಗೆ ಇದೀಗ ಭಾರಿ ಹೊಡೆತ ಬಿದ್ದಂತಾಗಿದೆ. ಈ ಖನಿಜ ಟ್ರಕ್‍ಗಳ ಮೇಲ್ವಿಚಾರಣೆ ಮಾಡಲು ಗ್ರಾಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯವಿಧಾನವನ್ನು ಸ್ಥಾಪಿಸುವ ವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ಆದೇಶ ಹೊರಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next