Advertisement
ಪೂರ್ವಜರ ಕಾಲದಿಂದಲೂ ನಡೆಯುತ್ತಿತ್ತು: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಯಡಿಯಾಲ ವನ್ಯಜೀವಿ ಸಂರಕ್ಷಿತ ಪ್ರದೇಶದ ಅರಣ್ಯದೊಳಗಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ತಾಲೂಕಿನಲ್ಲಿಯೇ ಹೆಸರುವಾಸಿ. ಪ್ರತಿವರ್ಷ 3-4ದಿನ ದೇವರಿಗೆ ಅಭಿಷೇಕ, ಹೋಮ, ಹಾಲರವಿಸೇವೆ, ಕೊಂಡೋತ್ಸವ, ರಾಸುಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂರ್ವಜರ ಕಾಲದಿಂದಲೂ ವಿಜೃಂಭಣೆಯಿಂದ ಆಚರಣೆ ಕಾಣುತ್ತಿತ್ತು.
Related Articles
Advertisement
ಭಕ್ತ ಸಮೂಹಕ್ಕೆ ನಿರಾಸೆ
ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನಲ್ಲಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಬೇಲದ ಕುಪ್ಪೆ ಜಾತ್ರೆಗೆ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಅಗತ್ಯ ಇರುವ ಅಧಿಕಾರಿಗಳಿಗಷ್ಟೇ ಪ್ರವೇಶ ನೀಡಿ ಇನ್ನುಳಿದ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಆದೇಶದಿಂದ ತಲೆ ಮಾರುಗಳಿಂದ ದೇವರ ಜಾತ್ರಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಟೆ ಮೆರೆಯುತ್ತಿದ್ದ ಭಕ್ತ ಸಮೂಹಕ್ಕೆ ನೋವಾಗಿದೆ.
“ನಾವು ಪಾರಂಪರಿಕವಾಗಿ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದೇವೆ. ಈಗ, ಧಾರ್ಮಿಕ ಆಚರಣೆಗೆ ತಡೆ ನೀಡುವ ಮೂಲಕ ಸಂಪ್ರದಾಯಕ್ಕೆ ಆಚರಣೆಗೆ ಉಲ್ಲಂಘನೆ ಸರಿಯಲ್ಲ.” – ಪ್ರಕಾಶ, ಸ್ಥಳೀಯ ನಿವಾಸಿ
“ಇಡೀ ವರ್ಷ ಧಾರ್ಮಿಕ ಆಚರಣೆಗೆ ಅವಕಾಶ ನೀಡದೇ ಇದ್ದರೂ ಸರಿ. ಆದರೆ, ಜಾತ್ರೆಯ ದಿನಗಳಲ್ಲಾದರೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಾತ್ರೆಗೆ ಅವಕಾಶ ನೀಡುವುದು ಒಳಿತು.” – ಮೋಹನ್, ಗ್ರಾಮಸ್ಥರು