Advertisement

ಶಿಕ್ಷಕರಿಗೆ ಗ್ರಾಮಸ್ಥರಿಂದ ನಿರ್ಬಂಧ

10:34 AM Jul 14, 2020 | Suhan S |

ಯಳಂದೂರು: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದು, ಕೆಲ ಶಾಲೆಗಳಿಗೆ ಶಿಕ್ಷಕರನ್ನೂ ಸೇರಿಸುತ್ತಿಲ್ಲ. ಈ ಬಗ್ಗೆ ಮಾರ್ಗದರ್ಶನಕ್ಕಾಗಿ ಆಯುಕ್ತರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಿಇಒ ತಿರುಮಲಾಚಾರಿ ತಿಳಿಸಿದರು.

Advertisement

ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆಯ ಆನ್‌ಲೈನ್‌ ಶಿಕ್ಷಣಕ್ಕೆ ಮುಂದಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಡ್ರಾಯ್ಡ ಫೋನ್‌ ಬಳಕೆ ಗೊತ್ತಿಲ್ಲ. ಬಡವರ ಬಳಿ ಮೊಬೈಲ್‌ ಇರುವುದಿಲ್ಲ. ಇದೊಂದು ವ್ಯರ್ಥ ಪ್ರಯತ್ನ ಎಂದು ಎಲ್ಲಾ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಾಲ ನೀಡುತ್ತಿಲ್ಲ: ವಿವಿಧ ಇಲಾಖೆಗಳ ವತಿಯಿಂದ ಬ್ಯಾಂಕುಗಳಲ್ಲಿ ಸಬ್ಸಿಡಿ ಹಣ ಹಾಕಲಾಗಿದೆ. ಆದರೂ ಪಟ್ಟಣದ ಎಸ್‌ಬಿಐ, ಕೆನರಾ, ಯೂನಿಯನ್‌ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಸಾಲ ನೀಡುತ್ತಿಲ್ಲ. ಬೆಳೆ ವಿಮೆ ಹಣ ಪಾವತಿಗೂ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ವೆಂಕಟೇಶ್‌ ದೂರಿದರು. ಈ ಬಗ್ಗೆ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ಕರೆದು ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಾಲಿನ ದರ ಕಡಿತ ಬೇಡ: ಹಾಲಿನ ಬೆಲೆ ಕಡಿಮೆಗೊಳಿಸಿರುವ ಚಾಮುಲ್‌ ಕ್ರಮವನ್ನು ಸದಸ್ಯರು ವಿರೋಧಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಪಶುಸಂಗೋಪನೆ ಹೆಚ್ಚಿದ್ದು, ಹಾಲಿನ ಉತ್ಪಾದನೆಯೂ ಹೆಚ್ಚಾಗಿದೆ. ಹಾಗಾಗಿ ಬೆಲೆ ಇಳಿಸಿರುವುದಾಗಿ ಒಕ್ಕೂಟ ಸ್ಪಷ್ಟನೆ ನೀಡಿದೆ. ಆದರೆ ಪಶುಗಳಿಗೆ ನೀಡುವ ಆಹಾರದ ಬೆಲೆಗಳು ಗಗನಕ್ಕೇರಿದೆ. ಹಾಗಾಗಿ ಹಾಲಿನ ಬೆಲೆ ಕಡಿತಗೊಳಿಸಬಾರದು. ಈ ಬಗ್ಗೆ ಚಾಮುಲ್‌ಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.  ಸಭೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.

ತಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ವೆಂಕಟೇಶ್‌, ನಾಗರಾಜು, ಶಾರದಾಂಬ, ಮಲ್ಲಾಜಮ್ಮ, ಪದ್ಮಾವತಿ, ಪಲ್ಲವಿ, ಇಒ ರಾಜು ಜಿಪಂ ಎಇಇ ಹರೀಶ್‌, ಜೆಇ ನಂದೀಶ್‌, ಮೀನುಗಾರಿಕೆ ಇಲಾಖೆ ನಟರಾಜು, ಕೃಷಿ ಇಲಾಖೆ ಕೃಷ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next