Advertisement

ವಿದೇಶಿ ನೆಲದ ಮುಗಿಲೆತ್ತರದಲ್ಲಿ ಹಾರಿದ ರಾಷ್ಟ್ರ ಧ್ವಜ

02:12 PM Jan 26, 2021 | Team Udayavani |

ಬೀಜಿಂಗ್ / ಸಿಂಗಾಪುರ್: ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಚೀನಾ ಮತ್ತು ಸಿಂಗಾಪುರದ ಅನಿವಾಸಿ ಭಾರತೀಯರು ಮಂಗಳವಾರ(ಜ.26) 72 ನೇ ಗಣರಾಜ್ಯೋತ್ಸವವನ್ನು ಸರ್ಕಾರದ ಕೋವಿಡ್ ನಿರ್ಬಂಧಗಳೊಂದಿಗೆ ಆಚರಿಸಿದರು.

Advertisement

ಬೀಜಿಂಗ್‌ನಲ್ಲಿ, ಚೀನಾದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಿಷನ್ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸೀಮಿತಗೊಳಿಸಲಾಗಿದೆ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು. ರಾಯಭಾರಿ ವಿಕ್ರಮ್ ಮಿಸ್ರಿ ಅವರು ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದರು.

ಓದಿ :  ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಚೈತಿ ಆರ್ಟ್ಸ್ ಫೌಂಡೇಶನ್ ನಿರ್ಮಿಸಿದ ”ವಂದೇ ಮಾತರಂ” ನ ವಿಶೇಷ ವಾದ್ಯ ಸಂಗೀತದಿಂದ ಸಂಯೋಜಿಸಲಾದ ಗೀತೆಯನ್ನು ಬಿಡುಗಡೆಗೊಳಿಸಿ,ಮಿಸ್ರಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣವನ್ನು ಓದಿದರು.

ಬೀಜಿಂಗ್ ಮತ್ತು ಹಲವಾರು ನಗರಗಳು ಪ್ರಸ್ತುತ ಕೋವಿಡ್ ಪ್ರಕರಣಗಳ ಮರುಕಳಿಕೆಯನ್ನು ಅನುಭವಿಸುತ್ತಿವೆ. ಇದರ ಪರಿಣಾಮವಾಗಿ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಅಲ್ಲಿನ ಸರ್ಕಾರ ವಿಧಿಸಿದೆ. ಇನ್ನು, ಸಿಂಗಾಪುರದಲ್ಲಿ ಕೋವಿಡ್ 19 ಸುರಕ್ಷತಾ ಕ್ರಮಗಳಿಂದಾಗಿ ಸಮಾರಂಭವನ್ನು ಹೈಕಮಿಷನ್‌ನ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

Advertisement

ಭಾರತದ ಹೈಕಮಿಷನರ್ ಪಿ.ಕುಮಾರನ್ ಅವರು ರಾಷ್ಟ್ರದ ಧ್ವಜಾರೋಹಣಗೈದರು, ರಾಷ್ಟ್ರಪತಿ ಕೋವಿಂದ್ ಅವರ ಸಂದೇಶವನ್ನು ಫೇಸ್‌ ಬುಕ್‌ ನ ಲೈವ್ ಸ್ಟ್ರೀಮಿಂಗ್ ನಲ್ಲಿ ಓದಿದರು.  .

ಓದಿ :  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ

 

Advertisement

Udayavani is now on Telegram. Click here to join our channel and stay updated with the latest news.

Next