Advertisement

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

08:21 PM Sep 22, 2021 | Team Udayavani |

ನವದೆಹಲಿ: ಸೀರೆ ಭಾರತದ ವಿಶೇಷ ಉಡುಗೆ. ಆದರೆ ಅದೇ ಸೀರೆ ಧರಿಸಿ ಹೋಗಿದ್ದಕ್ಕೆ ರೆಸ್ಟಾರೆಂಟ್‌ ಒಂದರಲ್ಲಿ ಮಹಿಳೆಯೊಬ್ಬರಿಗೆ ಪ್ರವೇಶ ನಿರಾಕರಿಸಲಾಗಿದೆ.

Advertisement

ನವದೆಹಲಿಯ ದಕ್ಷಿಣ ಭಾಗದ ಅನ್ಸಲ್‌ ಪ್ಲಾಜಾದಲ್ಲಿರುವ ರೆಸ್ಟಾರೆಂಟ್‌ ಒಂದರಲ್ಲಿ ಈ ಘಟನೆ ನಡೆದಿದೆ.

ಪತ್ರಕರ್ತೆ ಅನಿತಾ ಚೌಧರಿ ಸೀರೆಯನ್ನಟ್ಟು ರೆಸ್ಟಾರೆಂಟ್‌ ಒಳಗೆ ಪ್ರವೇಶಿಸಲು ಮುಂದಾದಾಗ ಅಲ್ಲಿನ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ.

ನೀವು “ಸ್ಮಾರ್ಟ್‌ ಕ್ಯಾಶ್ಯುಯಲ್‌’ ಧರಿಸಿಲ್ಲ. ಹಾಗಾಗಿ ನಿಮ್ಮನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

Advertisement

ಈ ವಿಡಿಯೋವನ್ನು ಅನಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ದೇಶದಲ್ಲಿ ಈ ಸ್ಮಾರ್ಟ್‌ ಕ್ಯಾಶ್ಯುಯಲ್‌  ಎಂದರೇನು’ ಎಂದು ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next