Advertisement

ಪ್ರಶಸ್ತಿಗಳಿಂದ ಜವಾಬ್ದಾರಿ ಜಾಸ್ತಿ

04:55 PM Dec 11, 2017 | |

ಸುರಪುರ: ಹೈ.ಕ ಭಾಗದ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹರ್ಷದ ಸಂಗತಿಯಾಗಿದ್ದು, ಪ್ರಶಸ್ತಿ ಪಡೆದರೆ ಸಾಲದು ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚುತ್ತವೆ ಎಂದು ನಾಡೊಜ ಡಾ| ಮಹೇಶ ಜೋಶಿ ಹೇಳಿದರು.

Advertisement

ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಶ್ರೀ ಗುರು ಸೇವಾ ಸಂಸ್ಥೆಯ 5ನೇ ವಾರ್ಷಿಕೋತ್ಸವ ಹಾಗೂ ಸಗರನಾಡು ಸಾಂಸ್ಕೃತಿಕ ಉತ್ಸವ ಶ್ರೀಗುರು ರತ್ನ ಪ್ರಶಸ್ತಿ ಪ್ರದಾನ ಮತ್ತು ನಾಡ ಪ್ರಭು ಕೆಂಪೆಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಇಲ್ಲಿಯ ಜನರ ಸಾಹಿತ್ಯಾಸಕ್ತಿ ಹೆಚ್ಚುತ್ತದೆ. ಯುವ ಸಾಹಿತಿಗಳು ಹೆಚ್ಚುತ್ತಾರೆ ಮತ್ತು ನಮ್ಮ ಕನ್ನಡ ಸಂಸ್ಕೃತಿಯು ಬೆಳೆಯುತ್ತದೆ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ| ರಂಗರಾಜ ವನದುರ್ಗ ಮಾತನಾಡಿ, ಸಾಹಿತ್ಯ, ಶಿಕ್ಷಣ, ಕಲೆಗಳಲ್ಲಿ ನಮ್ಮ ಭಾಗದ ಯುವಕರು ಸಾಧನೆ ಸ್ಮರಣೀಯವಾಗಿದೆ. ಗ್ರಾಮೀಣ ಭಾಗದಿಂದ ಹೋಗಿ ದೂರದ ಶಹರಗಳಲ್ಲಿರುವ ಎಲೆ ಮರೆಯ ಕಾಯಿಯಂತ್ತಿರುವ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟುತ್ತಿರುವುದು ಪ್ರಶಂಸನೀಯ.

ಸಾಹಿತಿ, ಸಂಗೀತಗಾರನ್ನು, ಕಲಾವಿದರನ್ನು, ಕವಿಗಳನ್ನು ಲೇಖಕರು ಸೇರಿದಂತೆ ವಿವಿಧ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಸಂಘ ಸಂಸ್ಥೆಗಳು ಸಮಾಜಮುಖೀ ಕಾರ್ಯದಲ್ಲಿ ತೊಡಿಗಿಸಿಕೊಂಡು ನವ ಸಮಾಜದ ನಿರ್ಮಾಣಕ್ಕೆ ದುಡಿಯಬೇಕು.

ಇಂದಿನ ಯವ ಸಮುದಾಯ ಕಂಪ್ಯೂಟರ್‌ ಯುಗದಲ್ಲಿ ಪುಸ್ತಕಗಳನ್ನು ಓದುವುದನ್ನೆ ಕಡಿಮೆ ಮಾಡಿದೆ. ಪುಸ್ತಕಗಳನ್ನ ಓದುವುದರಿಂದ ಅನೇಕ ರೀತಿ ಲಾಭವುಗಳಿವೆ. ಇದನ್ನರಿತು ಯುವಕರು ಪುಸ್ತಕಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

Advertisement

ಸುರಪುರ ಸಂಸ್ಥಾನದ ಯುವರಾಜ ಲಕ್ಷ್ಮೀನಾರಾಯಣ ನಾಯಕ ಸಮಾರಂಭ ಉದ್ಘಾಟಿಸಿದರು. ಹಂದಿಗುಂದಿ ಸಿದ್ದೇಶ್ವರಮಠದ ಶಿವಾನಂದ ಮಹಾಸ್ವಾಮಿಗಳು, ಕೆಂಭಾವಿ ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು, ಮುದನೂರ ಕೋರಿಸಿದ್ದೇಶ್ವರ ಶಾಖಾ ಮಠದ ಮಲ್ಲಕಾರ್ಜುನ ದೇವರು ಸಾನಿಧ್ಯ ವಹಿಸಿದ್ದರು. ಶಹಜಹಾನ್‌ ಹೆಚ್‌ ಮುದ್ದೆಕವಿ, ವೀಣಾ ಹೂಗಾರ, ಕನಕತಾರಾ, ಮಹದೇವ ಗಂವ್ಹಾರ ವೇದಿಕೆಯಲಿದ್ದರು. 

ಕೆ.ಟಿ. ಚೆಂದ್ರು, ಕನ್ನಡ ಜನಪದ ಪರಿಷತ್‌ ರಾಜ್ಯ ಕಾರ್ಯದರ್ಶಿ ಡಾ| ಎಸ್‌. ಬಾಲಾಜಿ, ಡಿ. ಶಿವಲಿಂಗಯ್ಯ, ಚುಟುಕು ಸಾಹಿತಿ ಬೀರಣ್ಣ ಬಿ.ಕೆ, ಕವಿತಾರೆಡ್ಡಿ, ಎನ್‌. ಕೃಷ್ಣಪ್ಪ ಕೋಡಿಪಾಳ್ಯ, ಶಿವಶರಣಪ್ಪ ಶಿರೂರು, ಗ್ರಾಮದ ಮುಖಂಡರಾದ ದೊಡ್ಡಕೊತ್ಲೆಪ್ಪ ಹಾವಿನ, ಸಕ್ರೆಪ್ಪ ಕವಲದಾರ, ಕೃಷ್ಣ ಹಾವಿನ, ಮಲ್ಲಿಕಾರ್ಜುನಗೌಡ, ಶರಣುನಾಯಕ, ಚೌಡಪ್ಪ ಕೋಳೂರು ನಿಂಗನಗೌಡ ಮಾಲಿಪಾಟೀಲ್‌ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next