Advertisement
ಆದರೆ ವೈದ್ಯರು ಯಾವತ್ತೂ “ತಾವೇ ದೇವರು’ ಎಂಬುದಾಗಿ ಎಲ್ಲಿಯೂ ಹೇಳಿಲ್ಲ, ಹೇಳುವುದು ಇಲ್ಲ! ಯಾವುದೇ ಆಪರೇಶನ್ ಇರಲಿ, ಯಾವುದೇ ಗಂಭೀರ ಸಮಸ್ಯೆಗಳಿರಲಿ ವೈದ್ಯರ ಮೊದಲ ಮಾತು ದೇವರ ಮೇಲೆ ಭಾರ ಹಾಕಿ ಎಂಬುದಾಗಿದೆ. ಕಾಣದ ಶಕ್ತಿಯೊಂದು ನಮ್ಮ ಸಹಾಯಕ್ಕೆ ಬರಲಿ ಎಂಬುದು ಅವರ ಮನದಿಚ್ಛೆ! ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಮುಂದಿನದು ದೇವರದ್ದು ಎನ್ನುವ ಅವರ ಮಾತುಗಳು ಅವರ ವೃತ್ತಿಧರ್ಮಕ್ಕೆ ಹಿಡಿದ ಕೈಗನ್ನಡಿ.
ವೈದ್ಯರು ಆತಂಕರಹಿತವಾಗಿ, ಒತ್ತಡ ರಹಿತವಾಗಿ, ಕೆಲಸ ಮಾಡಲು ಅವಕಾಶ ಮಾಡಿಕೊಡೋಣ. ಈಗಿನ ಕೊರೊನಾ ಸ್ಥಿತಿಯಲ್ಲಿ ವೈದ್ಯಲೋಕ, ಕೊರೊನಾ ವಾರಿ ಯರ್ಸ್ ಹಾಗೂ ಕೊರೊನಾದ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬರೂ ವಿಪರೀತ ಒತ್ತಡ, ಆತಂಕದಲ್ಲಿ¨ªಾರೆ. ದಿನದ 24 ಗಂಟೆಯೂ ಆಕ್ಸಿಜನ್ ಕೊರತೆ, ಔಷಧ, ಬೆಡ್‌ಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸದಾ ಒತ್ತಡದಲ್ಲಿ ಮುಳುಗುತ್ತಿ¨ªಾರೆ. ಮಾನಸಿಕ ನೆಮ್ಮದಿ ಯನ್ನು ಕಳೆದುಕೊಳ್ಳುತ್ತಿ¨ªಾರೆ! ಸುನಾ ಮಿಯ ರೀತಿಯಲ್ಲಿ ತೀವ್ರತರವಾಗಿ ಕೈಮೀ ರುವ ಸ್ಥಿತಿಯಲ್ಲಿ ಕೊರೊನಾದ ಗಂಭೀರತೆ ಅರಿವಿಗೆ ಬರುತ್ತಿದೆ. ಈ ಹಂತದಲ್ಲಿ ವೈದ್ಯರ ಮೇಲೆ ದೋಷಾರೋಪಣೆ ಹೊರಿಸುವ ಬದಲು ಅವರ ಒತ್ತಡ ಕಡಿಮೆ ಮಾಡುವತ್ತ¤ ಪ್ರಾಮಾಣಿಕ ಪ್ರಯತ್ನ ಮಾಡೋಣ.
Related Articles
ಕೊರೊನಾ ಹಿಮ್ಮೆಟ್ಟಿಸಲು, ನಿಯಂತ್ರ ಣಕ್ಕೆ ತರಲು ಪ್ರಯತ್ನಿಸುತ್ತಿರುವ ಅದಕ್ಕಾಗಿ ಹಗಲಿರುಳು ದುಡಿಯುತ್ತಿರುವ ವೈದ್ಯರು, ಕೊರೊನಾ ವಾರಿಯರ್ಸ್ ಎಲ್ಲರೂ ತಮ್ಮ ಸ್ವಂತ ಜೀವನ ಮರೆತು ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಸಂಸಾರ, ಕುಟುಂಬ ಎಂಬ ಪುಟ್ಟ ಗೂಡಿದೆ. ಹಾಗಿದ್ದರೂ ಕೂಡ ನಿರ್ವಂಚನೆಯಿಂದ, ಪ್ರಾಮಾಣಿಕವಾಗಿ ತಮ್ಮ “ವೃತ್ತಿಧರ್ಮ’ಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿರುವ ವೈದ್ಯರ ಸೇವೆಗೆ ಸರಿಸಾಟಿ ಯಾವುದೂ ಇಲ್ಲ. ಅಂತಹ ವೈದ್ಯರನ್ನು ಗೌರವಿಸೋಣ. ಕೆಲವು ಸಂದರ್ಭಗಳಲ್ಲಿ ಅಚಾನಕ್ಕಾಗಿ ತಪ್ಪುಗಳು ಸಂಭವಿಸಬಹುದು. ಅದೂ ಕೂಡ ಕೆಲಸದ ಒತ್ತಡ, ವಿಪರೀತ ಮಾನಸಿಕ ಸಂಘರ್ಷಗಳು ಇವುಗಳ ಪರಿಣಾಮ ತಪ್ಪುಗಳು ಆಗಿರಬಹುದು. ಈ ತಪ್ಪುಗಳನ್ನು ನಾವು ಕ್ಷಮಿಸಲೇಬೇಕಿದೆ.
Advertisement
ನಮ್ಮ ಜಾಗ್ರತೆಯಲ್ಲಿ ನಾವಿರೋಣನಾವು ಸಾಮಾಜಿಕ ಅಂತರ ಕಾಪಾಡಿ ಕೊಂಡು, ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡೋಣ. ಆ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳೋಣ. ಕೊರೊನಾ ಓಡಿಸಲು ಪ್ರತಿಯೊಬ್ಬ ನಾಗರಿಕನು ಪ್ರಯತ್ನಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿ ಕೂಡ ಹೌದು. ಕೊರೊನಾದಂತಹ ಮಹಾಮಾರಿಯ ನಿರ್ಮೂಲನೆ ಕೇವಲ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಸರಕಾರ ಇವರಿಂದ ಸಾಧ್ಯವಾ ಗದ ಮಾತು. ಪ್ರತಿಯೊಬ್ಬ ನಾಗರಿಕನು ಪ್ರಯತ್ನ ಪಟ್ಟಾಗ ಕೊರೊನಾವನ್ನು ಬುಡ ಸಮೇತ ಕಿತ್ತೂಗೆಯಬಹುದು. ಗುಂಪು ಸೇರದೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇರೋಣ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರನ್ನು ಭೇಟಿ ಮಾಡೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ನಮ್ಮ ಜಾಗ್ರತೆಯಲ್ಲಿ ನಾವಿರೋಣ. ರಾಜಕೀಯ ನಾಯಕರು ರಾಜಕೀಯ ಕೆಸರಾಟಗಳಿಗೆ ಎಡೆಮಾಡಿ ಕೊಡದೆ ಪ್ರಾಮಾಣಿಕ ಜವಾಬ್ದಾರಿಯನ್ನು ಮೆರೆ ಯಲಿ. ಆಗ ಮಾತ್ರ ವೈದ್ಯರು ಆತಂಕ ರಹಿತವಾಗಿ, ಒತ್ತಡ ರಹಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ವೈದ್ಯರನ್ನು ಗೌರವಿಸುವ ಜತೆಗೆ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆಯದಿರೋಣ. – ಭಾಗ್ಯಶ್ರೀ ಹಾಲಾಡಿ