Advertisement

ಪರಸ್ಪರ ಗೌರವಿಸುವಿಕೆಯೇ ಆತ್ಮೀಯತೆಯ ಹೂರಣ

05:25 PM Jun 16, 2022 | Team Udayavani |

ಒಬ್ಬ ವ್ಯಕ್ತಿಯು ತನ್ನ ಜೀವಿತಾ ವಧಿಯಲ್ಲಿ ಹಲವು ಆಯಾಮಗಳಲ್ಲಿ ಗುರುತಿಸಲ್ಪಡುತ್ತಾನೆ. ಶೈಶವಾವಸ್ಥೆಯಿಂದ ವೃದ್ದಾಪ್ಯದವರೆಗಿನ ಜೀವನದ ಪ್ರತಿ ಯೊಂದೂ ಹಂತಗಳಲ್ಲಿ ವಿವಿಧ ಸ್ತರಗಳಲ್ಲಿ ಕಾರ್ಯವೆಸಗುತ್ತಾನೆ. ಶಿಶುವಾಗಿರುವಾಗ ಮನೆಮಂದಿಯ ಕಣ್ಮಣಿಯಾಗಿ, ಬಾಲ್ಯಾವಸ್ಥೆಯಲ್ಲಿ ಶಾಲಾ ವಠಾರಕ್ಕೆ ಹೊಂದಿಕೊಳ್ಳುತ್ತಾ ಅಲ್ಲಿಯ ಸೋಜಿಗತೆಗೆ ವಿಸ್ಮಯಗೊಳ್ಳುತ್ತಾ ಇನ್ನು ಯೌವನಾ ವಸ್ಥೆಯಲ್ಲಿ ತನ್ನ ಭವಿಷ್ಯಕ್ಕೆ ತನ್ನನ್ನು ಸಜ್ಜು ಗೊಳಿಸುತ್ತಾ ವೃದ್ಧಾಪ್ಯದಲ್ಲಿ ಚಟುವಟಿಕೆ ಯುಕ್ತರಾಗಿ ಉತ್ತಮ ರೀತಿಯಲ್ಲಿ ಕಿರಿಯ ರಿಗೆ ಮಾರ್ಗದರ್ಶನ ಮಾಡುತ್ತಾ ಹೀಗೆ ಹತ್ತು ಹಲವು ಮುಖಗಳನ್ನು ಹೊತ್ತು ಮಾನವ ಜೀವನವು ಸಾಗುತ್ತಿರುತ್ತದೆ.

Advertisement

ಒಟ್ಟಾರೆಯಾಗಿ ನಮ್ಮ ಬದುಕಿನ ಪಯಣದಲ್ಲಿ ನಾವು ಭೇಟಿ ಮಾಡುವ ಮುಖಗಳು ಹಲವಾರು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಹಲವು ವ್ಯಕ್ತಿಗಳ ಜತೆಯಲ್ಲಿ ವ್ಯವಹರಿಸುತ್ತಿರುತ್ತೇವೆ. ಹತ್ತಾರು ಮುಖಗಳನ್ನು ಕಾಣುತ್ತಿದ್ದರೂ ಕೆಲವರ ಜತೆಯಲ್ಲಿ ಮಾತ್ರವೇ ನಮಗೆ ಆತ್ಮೀಯತೆಯಿಂದ ವರ್ತಿಸಲು ಸಾಧ್ಯ ವಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳ ಒಡನಾಟವು ಮನಸ್ಸಿಗೆ ಹಿತಕರವೆನಿಸಿ ಬಾಂಧವ್ಯವನ್ನು ಮತ್ತಷ್ಟು ಅಪ್ಯಾಯ ಮಾನವನ್ನಾಗಿಸುತ್ತದೆ. ಅಂ ದರೆ ಕೆಲವೊಂದು ವ್ಯಕ್ತಿಗಳ ಒಡನಾಟ ಮಾತ್ರವೇ ನಮಗೆ ಹಿತವೆನ್ನಿಸುವುದು.

ಹಾಗಾದರೆ ಆತ್ಮೀಯತೆ ಎಂದರೇನು? ಹಲವು ವರ್ಷಗಳಿಂದ ಒಡನಾಡಿಗಳಾಗಿದ್ದ ಮಾತ್ರಕ್ಕೆ ಅಲ್ಲಿ ಆತ್ಮೀಯತೆ ಸೃಜಿಸಲಾರದು, ಇದು ರಕ್ತಸಂಬಂಧಗಳಿಗೆ ಮಾತ್ರವೇ ಸೀಮಿತವಾಗಿರುವ ಬಂಧವಂತೂ ಖಂಡಿತಾ ಅಲ್ಲ. ಅದು ಜಾತಿಯೊಳಗಡೆ ಯಷ್ಟೇ ಮೀಸಲಾಗಿರುವ ಪದವೂ ಅಲ್ಲ. ಹಿರಿಯರು-ಕಿರಿಯರು ಎನ್ನುವ ತಾರ ತಮ್ಯವೂ ಅಲ್ಲಿ ಕಾಣಸಿಗದು. ಸ್ತ್ರೀ- ಪುರುಷ ಎನ್ನುವ ಭೇದವೂ ಅದಕ್ಕಿಲ್ಲ. ಇದು ಒಂದು ಸಮಾಜದ ವಿಶದಪಡಿಸುವ ವೈಶಿಷ್ಟತೆಯನ್ನು ಹೊಂದಿರುವ ಬಾಂಧವ್ಯ.

ಗೌರವ ಹಾಗೂ ಆತ್ಮೀಯತೆ ಒಂದ ಕ್ಕೊಂದು ಪೂರಕವಾಗಿರುವ ಅಂಶಗಳು. ನಾವು ಯಾರನ್ನು ಗೌರವದಿಂದ ಕಾಣು ತ್ತೇವೆಯೋ ಅಲ್ಲಿ ಆತ್ಮೀಯತೆಯು ತನ್ನಿಂತಾನೇ ಮೊಳಕೆಯೊಡೆಯುತ್ತದೆ. ಅದೆಷ್ಟೋ ಜನ ಗೌರವ ಶಬ್ದವನ್ನೇ ಅಪಾರ್ಥ ಮಾಡಿಕೊಳ್ಳುತ್ತಾರೆ. ಆದೇಶ ವನ್ನು ಅನುಸರಿಸುವುದು, ಅನಿಸಿಕೆಯನ್ನು ಅನುಮೋದಿಸುವುದು, ಶಿರಬಾಗಿ ವಂದಿ ಸುವುದು ಇವುಗಳೆಲ್ಲ ಸಾಂಕೇತಿಕವಾಗಿ ಗೌರವವನ್ನು ಸೂಚಿಸುವ ವಿಧಗಳಷ್ಟೆ. ಆದರೆ ವಾಸ್ತವವಾಗಿ ಗೌರವವು ನಂಬಿಕೆ- ವಿಶ್ವಾಸ ಹಾಗೂ ವ್ಯಕ್ತಿಯ ಮೌಲ್ಯಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ. ಪರಸ್ಪರ ನಂಬಿಕೆ-ವಿಶ್ವಾಸದ ವ್ಯವಹರಿಸುವಿಕೆ, ಮೌಲ್ಯಯುತ ನಡವಳಿಕೆ ಇವು ಗೌರವ ವನ್ನು ಉತ್ಕೃಷ್ಟತೆಗೆ ಏರಿಸಬಲ್ಲವು. ಇಂಥ ನಿಷ್ಕಪಟ ಗೌರವವು ವ್ಯಕ್ತಿಗಳ ನಡುವೆ ಆತ್ಮೀಯತೆಯನ್ನು ಹುಟ್ಟು ಹಾಕಬಲ್ಲುದು. ಒಂದು ಸಮಾಜದ ಉನ್ನತಿಗೆ ಅಲ್ಲಿಯ ಜನತೆ ತಮ್ಮ ನಡೆ-ನುಡಿಗಳಲ್ಲಿ ಆರೋಗ್ಯ ಕರವಾಗಿ ವ್ಯವಹರಿಸುವುದು ಅತೀ ಮುಖ್ಯ. ಪರಸ್ಪರ ಗೌರವ ಭಾವನೆಯನ್ನು ಹೊಂದಿ ಒಗ್ಗಟ್ಟಿ ನಿಂದ ಬಾಳುವುದು ಸಾಮಾಜಿಕ ಮೌಲ್ಯವನ್ನು ವರ್ಧಿ ಸುವುದಲ್ಲದೆ ಸಮಾಜ ವನ್ನು ಉತ್ಕೃಷ್ಟತೆ ಯೆಡೆಗೆ ಕೊಂಡೊಯ್ಯುತ್ತದೆ.

ಪುರಾಣದಲ್ಲಿ ಬರುವ ಕೃಷ್ಣ-ಕುಚೇಲರ ದೃಷ್ಟಾಂತವನ್ನು ಪರಿಗಣಿಸಿದಾಗ, ಅಲ್ಲಿ ಕುಚೇಲನು ಕೃಷ್ಣನ ಮೇಲಿನ ನಂಬಿಕೆ-ವಿಶ್ವಾಸದಿಂದ ತನ್ನ ಅಳಲನ್ನು ಹೇಳಿಕೊಳ್ಳಲೆಂದು ಅರಮನೆಗೆ ಹೋಗು ತ್ತಾನೆ. ಆತ್ಮೀಯತೆಯಿಂದ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯನ್ನು ಜತೆಯಲ್ಲಿ ಕೊಂಡೊಯ್ಯುತ್ತಾನೆ. ಕೃಷ್ಣನ ವಿವೇ ಚನೆಯ ಸಿರಿತನವು ಹಿಡಿ ಅವಲಕ್ಕಿ ಯನ್ನು ಮೌಲ್ಯಯುತವಾಗಿಸುತ್ತದೆ. ಗೆಳೆಯರ ನಡುವಿನ ಅಪ್ಯಾಯಮಾನತೆ, ಪರಸ್ಪರ ಗೌರವಿಸುವಿಕೆ ಅವರನ್ನು ಮತ್ತಷ್ಟು ಆತ್ಮೀ ಯರನ್ನಾಗಿಸುತ್ತದೆ. ಇತಿಹಾಸದಲ್ಲಿ ಬರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಥನದತ್ತ ದೃಷ್ಟಿ ಹರಿಸಿದಾಗ ಝಾನ್ಸಿà ರಾಣಿಗೆ ಬೆನ್ನೆಲುಬಾಗಿ ನಿಂತಿದ್ದ ಯುದ್ಧ ಗುರು ತಾಂತ್ಯಾ ಟೋಪೆಯ ವ್ಯಕ್ತಿತ್ವವು ಆತನನ್ನು ಮೇರು ಸ್ಥಾನಕ್ಕೊಯ್ಯುತ್ತದೆ. ಝಾನ್ಸಿà ರಾಣಿಯ ಶಕ್ತಿಯ ಅರಿವಿದ್ದ ತಾಂತ್ಯಾ ಟೋಪೆ, ನಾನಾ ಸಾಹೇಬರು ಆಕೆಯ ಸ್ವಾತಂತ್ರ್ಯದ ಕಹಳೆಗೆ ದನಿಯಾಗಿ ಆಕೆಯ ಛಲವನ್ನು ಇಮ್ಮಡಿಗೊಳಿಸಿ ಹೋರಾಡಲು ಅಚಲ ವಾದ ಧೈರ್ಯವನ್ನು ತುಂಬಿ ದವರು. ಇದಕ್ಕೆ ಪ್ರತಿಯಾಗಿ ಝಾನ್ಸಿà ರಾಣಿಯು ತನ್ನ ಮಾರ್ಗದರ್ಶಕರಿಗೆ ಉಪಕೃತಳಾಗಿ ವೀರ ವನಿತೆಯಂದು ಭಾರತೀಯರ ಮನದಲ್ಲಿ ಚಿರಸ್ಥಾಯಿ ಯಾಗಿ ನೆಲೆ ನಿಂತಳು. ಈ ರೀತಿಯಲ್ಲಿ ಹಲವು ನಿದರ್ಶನಗಳನ್ನು ಅವಲೋಕನ ಮಾಡಿದಾಗ ಆತ್ಮೀಯತೆಯ ಮೂಲಬೇರು “ಪರಸ್ಪರ ಗೌರವಿಸುವಿಕೆ’ ಎನ್ನುವುದು ಮನದಟ್ಟಾಗುವುದು.

Advertisement

– ಕೆ. ಉಷಾ. ಮುರಳೀಧರ್ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next