Advertisement

ಸುಪ್ರೀಂ ತೀರ್ಪನ್ನು ಗೌರವಿಸಿ

07:00 AM Mar 25, 2018 | Team Udayavani |

ಜೈಪುರ: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿಯಂಥ ಸೂಕ್ಷ್ಮ ವಿವಾದಗಳಿಗೆ ಪರಿಹಾರ ಒದಗಿಸುವುದು ಸುಪ್ರೀಂ ಕೋರ್ಟ್‌ಗೆ ಬಿಟ್ಟಿದ್ದು. ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲ ಧಾರ್ಮಿಕ ನಾಯಕರೂ ಗೌರವಿಸಬೇಕು ಎಂದು ರಾಜಸ್ಥಾನದ ಅಜ್ಮಿರ್‌ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥರಾಗಿರುವ ಜೈನುಲ್‌ ಆಬಿದೀನ್‌ ಅಲಿ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಹಿಂದೂ ಆಗಲಿ, ಮುಸ್ಲಿಮರೇ ಆಗಲಿ, ಮತಾಂಧತೆ ಎನ್ನುವುದು ಯಾವತ್ತೂ ಯಾವುದಕ್ಕೂ ಪರಿಹಾರ ಒದಗಿಸಲಾರದು. ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಯತ್ನವೂ ವಿಫ‌ಲವಾಗಿದೆ. ಹಾಗಾಗಿ, ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಸುಪ್ರೀಂ ಕೋರ್ಟ್‌ ನೀಡುವ ತೀರ್ಪನ್ನು ಗೌರವಿಸಬೇಕು ಎಂದೂ ಖಾನ್‌ ಹೇಳಿದ್ದಾರೆ. 

ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ ಅವರ ಉರೂಸ್‌ ಹಿನ್ನೆಲೆಯಲ್ಲಿ ವಿವಿಧ ಮಸೀದಿಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿಗಳೂ ಭಾಗಿಯಾಗಿದ್ದರು.

ಯುವಕರಿಗೆ ಬೆಳೆಯಲು ಹಾಗೂ ಏಳಿಗೆಯಾಗುವಂಥ ಅವಕಾಶಗಳನ್ನು ನೀಡಬೇಕು. ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳು ಇಂಥ ವಿಚಾರದಲ್ಲಿ ರಾಜಕೀಯ ಮಾಡಬಾರದು. ಯುವಕರ ಮನಸ್ಸಲ್ಲಿ ಮತಾಂಧತೆ ತುಂಬಬಾರದು. ಏಕೆಂದರೆ, ಇಂಥ ರಾಜಕೀಯವು ಸಮಾಜದಲ್ಲಿ ದ್ವೇಷಕ್ಕೆ ದಾರಿ ಮಾಡಿಕೊಡುತ್ತದೆ ಎಂದೂ ಖಾನ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next