ಗಂಗಾವತಿ : ಹಂಪಿ ಭಾಗದ ರೆಸಾರ್ಟ್ ಗಳಲ್ಲಿ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಆನೆಗೊಂದಿ ಭಾಗದಲ್ಲಿರುವ ರೆಸಾರ್ಟ್ ಗಳನ್ನು ನ್ಯಾಯಾಂಗ ನಿಂದನೆ ನೆಪದಲ್ಲಿ ಸೀಜ್ ಮಾಡಿಸಲಾಗಿದೆ.
ಇದು ಮಲತಾಯಿ ಧೋರಣೆಯಾಗಿದ್ದು ಕೂಡಲೇ ಆನೆಗೊಂದಿ ಭಾಗದ ರೆಸಾರ್ಟ್ ಗಳನ್ನು ಆರಂಭಿಸಲು ಕ್ರಮಕೈಗೊಳ್ಳುವಂತೆ ರೆಸಾರ್ಟ್ ಮಾಲೀಕರು ಸೋಮವಾರ ಅಂಜನಾದ್ರಿಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಸಚಿವ ಮಧ್ಯೆ ವಾಗ್ವಾದ ನಡೆಯಿತು. ಕಳೆದ 8 ತಿಂಗಳಿಂದ ಆನೆಗೊಂದಿ ಸಣಾಪುರ ಭಾಗದಲ್ಲಿ ನ್ಯಾಯಾಂಗ ನಿಂದನೆ ನೆಪದಲ್ಲಿ ಎಲ್ಲಾ ಹೋಟೆಲ್ ರೆಸಾರ್ಟ್ ಗಳನ್ನು ಸೀಜ್ ಮಾಡಲಾಗಿದೆ ಆದರೆ ಹಂಪಿ ಭಾಗದಲ್ಲಿ 83 ಕ್ಕೂ ಹೆಚ್ಚು ರೆಸಾರ್ಟ್ ಗಳು ಈಗಲೂ ಭರ್ಜರಿ ವ್ಯಾಪಾರ ನಡೆಸುತ್ತಿವೆ ಇದು ಸಚಿವರ ಮಲತಾಯಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಸಚಿವರ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆಯಿತು .
ಇದನ್ನೂ ಓದಿ : ಉಡುಪಿಯ ಸಮಗ್ರ ಅಭಿವೃದ್ಧಿ ಕುರಿತ ‘ ಪ್ಲಾನ್’ ಬಿಚ್ಚಿಟ್ಟ MLA ರಘುಪತಿ ಭಟ್ |
Related Articles
ಹಂಪಿ ಭಾಗದಲ್ಲಿ ಒಂದೇ ಒಂದು ರೆಸಾರ್ಟ್ ಓಪನ್ ಆಗಿಲ್ಲ ಆನೆಗೊಂದಿ ಭಾಗದವರು ತೋರಿಸಿದ್ದಲ್ಲಿ ಕೂಡಲೇ ಬಂದ್ ಮಾಡಿಸಲಾಗುತ್ತದೆ. ಈಗಲೇ ಎಲ್ಲರೂ ಆಯುಕ್ತರ ಜತೆಗೂಡಿ ಹಂಪಿಗೆ ತೆರಳಿ ಸುತ್ತಲಿರುವ ರೆಸಾರ್ಟ್ ಗಳನ್ನು ತೋರಿಸುವಂತೆ ತಾಕೀತು ಮಾಡಿದರು.
ಆನೆಗೊಂದಿ ಭಾಗದ 25ಕ್ಕೂ ಹೆಚ್ಚು ರೆಸಾರ್ಟ್ ಮಾಲೀಕರು ಹವಾಮಾ ಆಯುಕ್ತ ಸಿದ್ದರಾಮೇಶ ಜತೆಗೂಡಿ ಕಮಲಾಪೂರ, ಕಡ್ಡಿರಾಂಪೂರ ಹಾಗೂ ಹಂಪಿ ಸುತ್ತಲು ಇರುವ ರೆಸಾರ್ಟ್ ಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಸಚಿವ ಆನಂದ್ ಸಿಂಗ್ ಸಂಬಂಧಿಕರ ರೆಸಾರ್ಟ್ ಸೇರಿ ಹಂಪಿ ಭಾಗದ 50 ರೆಸಾರ್ಟ್ ಗಳಲ್ಲಿ ರೂಂ ಬುಕ್ ಮಾಡಿದ ದಾಖಲೆಗಳನ್ನು ತೋರಿಸಿದರು. ಈ ಸಂದರ್ಭದಲ್ಲಿ ಹಂಪಿಗೆ ತೆರಳಿದ್ದ ಆನೆಗೊಂದಿ ಹಾಗೂ ಹಂಪಿ ಸುತ್ತಲಿನ ರೆಸಾರ್ಟ್ ಮಾಲೀಕರ ಮಧ್ಯೆ ಮಾತಿನ ಚಕಮಕಿ ಜರುಗಿತು. ಹವಾಮಾ ಆಯುಕ್ತ ಸಿದ್ದರಾಮೇಶ ಮಧ್ಯೆ ಪ್ರವೇಶ ಮಾಡಿ ನ್ಯಾಯಾಂಗ ನಿಂದನೆ ಇರುವ ಕಾರಣ ಹಂಪಿ-ಆನೆಗೊಂದಿ ಭಾಗದ ರೆಸಾರ್ಟ್ ಗಳನ್ನು ಸೀಜ್ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ ಸೀಜ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.