Advertisement

‘ವೈಯಕ್ತಿಕ ಕಲಹಗಳನ್ನು ಬಿಟ್ಟು ಪಂಚಾಯತ್‌ ಸಮಸ್ಯೆ ಪರಿಹರಿಸಿ’

11:53 PM Jul 02, 2019 | Team Udayavani |

ಗೋಣಿಕೊಪ್ಪಲು: ಪಂಚಾಯತ್‌ ಸದಸ್ಯರು ವೈಯಕ್ತಿಕ ಕಲಹಗಳನ್ನು ಬಿಟ್ಟು ಪಂಚಾಯತ್‌ಗೆ ಅಂಟಿರುವ ಕಸದ ಸಮಸ್ಯೆಗಳನ್ನು ಪರಿಹರಿಸಲು ಒಂದಾಗು ವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ದಿ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ಪೊನ್ನಂಪೇಟೆ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ನಡೆದ ಗೋಣಿಕೊಪ್ಪಲು, ಪೊನ್ನಂಪೇಟೆ, ಅರುವತ್ತೂಕ್ಲು ಮೂರು ಗ್ರಾ.ಪಂ.ಗಳ ಕಸ ಸಮಸ್ಯೆ ಪರಿಹಾರದ ಸಭೆಯಲ್ಲಿ ಒಗ್ಗಟ್ಟಿನಿಂದ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು ಎಂದು ಶಾಸಕರು ಸೂಚಿಸಿದರು.

ಅಭಿವೃದ್ಧಿ ಅಧಿಕಾರಿಗಳು ಸದಸ್ಯ ರೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಾಳ್ಮೆಯಿಂದ ವರ್ತಿಸಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅಭಿವೃದ್ದಿಗೆ ಸ್ಪಂದಿಸಬೇಕು ಎಂದು ಹೇಳಿದರು. ಗೋಣಿಕೊಪ್ಪಲು ಪಟ್ಟಣದಲ್ಲಿ ಕಸದ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿ ಸದಸ್ಯರು ಆಸಕ್ತರಾಗಬೇಕು. ಈ ಹಿಂದೆ ಸೂಚಿಸಿರುವ ಕಸ ವಿಲೇವಾರಿಗೆ ಮೀಸಲಾಗಿರುವ ಸೀತಾ ಕಾಲೋನಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಮಾಡುವ ಘಟಕಕ್ಕೆ ವ್ಯವಸ್ಥಿತ ಸೌಕರ್ಯಗಳನ್ನು ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಹೇಳಿದರು.

ಕಸವಿಲೇವಾರಿಗೆಂದು ಗುರುತಿಸಿರುವ ಸ್ಥಳದಲ್ಲಿ ಕಸ ಹಾಕಲು ಬಿಡದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಿ. ಪೊಲೀಸರ ಭದ್ರತೆಯೊಂದಿಗೆ ಕಸ ವಿಲೇವಾರಿ ಮಾಡಲು ಪ್ರಯತ್ನಿಸಿ ಎಂದು ಪಿ.ಡಿ.ಒ ಚಂದ್ರಮೌಳಿ ಅವರಿಗೆ ತಿಳಿಸಿದರು.

ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂದ ಮೇಲೆ ಬೇರೆಡೆಗೆ ಅವರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ಸೂಚಿಸಿದರು. ಸದಸ್ಯರಾದ ಜೆ.ಕೆ. ಸೋಮಣ್ಣ, ರಾಮಕೃಷ್ಣ, ಪ್ರಮೋದ್‌ ಗಣಪತಿ, ಮುರುಗ, ಕೆ.ಪಿ. ಬೋಪಣ್ಣ ಸಲಹೆ, ಸೂಚನೆಗಳನ್ನು ನೀಡಿದರು.

Advertisement

ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಂಡು ಕಸದ ಸಮಸ್ಯೆ ಉದ್ಭಬಿಸದಂತೆ ಸದಸ್ಯರು ಚಿಂತನೆ ಹರಿಸಿ ಮುಂದಿನ ವರ್ಷದಲ್ಲಿ ಉತ್ತಮ ಗ್ರಾಮ ಎಂದು ಪುರಸ್ಕಾರ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದರು.

ಗೋಣಿಕೊಪ್ಪಲುವಿನ ಬೈಪಾಸಿನ ರಸ್ತೆ ಬದಿಗಳಲ್ಲಿ ರಾಶಿ ರಾಶಿಯಾಗಿ ಕಾಣುವ ಕಸಗಳು ಅರುವತ್ತೂಕ್ಲು ಗ್ರಾ.ಪಂ. ವ್ಯಾಪ್ತಿಯ ಮೈಸೂರಮ್ಮ ನಗರದ ನಿವಾಸಿಗಳು ಹಾಕುವ ಕಸವಾಗಿದೆ. ಈ ಬಗ್ಗೆ ಅರುವತ್ತೂಕ್ಲು ಗ್ರಾ.ಪಂ. ಕ್ರಮ ಕೈಗೊಂಡು ಮನೆ ಮನೆಗಳಿಗೆ ಕಸದ ವಾಹನವನ್ನು ಕಳುಹಿಸಿ ಕಸ ಸಂಗ್ರಹಿಸುವ ಮೂಲಕ ಸ್ವಚ್ಚತೆ ಕಾಪಾಡಬೇಕು ಎಂದು ಪಿ.ಡಿ.ಒ ಶಂಕರ ನಾರಯಣ ಅವರಿಗೆ ತಿಳಿಸಿದರು.

ತಾಲೂಕು ದಂಡಾಧಿಕಾರಿ ಗೋವಿಂ ದರಾಜು, ತಾ.ಪಂ. ಕಾರ್ಯ ನಿರ್ವಹ ಣಾಧಿಕಾರಿ ಜಯಣ್ಣ, ಕಂದಾಯ ಪರಿವೀಕ್ಷಕ ರಾಧಾಕೃಷ್ಣ, ತಾ.ಪಂ. ಅಧಕ್ಷ ಬೊಳ್ಳಚಂಡ ಸ್ಮಿತಾ ಪ್ರಕಾಶ್‌, ಉಪಾಧ್ಯಕ್ಷ ನೆಲ್ಲಿರ ಚಲನ್‌, ಗೋಣಕೊಪ್ಪಲು ಗ್ರಾ.ಪಂ. ಸೆಲ್ವಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ಉಪಾಧ್ಯಕ್ಷ ಮಂಜುಳಾ, ಪಿ.ಡಿ.ಒ ಪುಟ್ಟರಾಜು, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರಾದ ಮಂಜುಳ, ರತಿ ಅಚ್ಚಪ್ಪ, ಯಾಸ್ಮಿನ್‌, ರಾಜಶೇಖರ್‌, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಮೂಕಳೇರ ಲಕ್ಷ್ಮಣ್‌, ಕಾವ್ಯಾ, ಅಮ್ಮತ್ತಿರ ಸುರೇಶ್‌, ಅನೀಸ್‌, ಅರುವತ್ತೂಕ್ಲು ಗ್ರಾ.ಪಂ. ಸದಸ್ಯೆ ರೇವತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next