Advertisement
ಗಡಿಯಾಚೆಗಿನ ಭಯೋತ್ಪಾದನೆ ಸಹಿತ ಎಲ್ಲ ತೆರನಾದ ಭಯೋ ತ್ಪಾದ ನೆಯನ್ನು ದಮನ ಮಾಡಬೇಕಿದೆ. ಈ ಗಂಭೀರ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ದೇಶಕ್ಕೆ ಅಪಾಯಕಾರಿಯಾಗಿ ಪರಿ ಣಮಿ ಸಲಿದೆ ಎಂದವರು ಎಚ್ಚರಿಕೆ ನೀಡಿದರು. ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ಚೀನದ ಕ್ವಿನ್ ಗ್ಯಾಂಗ್ ಮತ್ತು ರಷ್ಯಾದ ಸರ್ಗೆ ಲಾವ್ರೊವ್ ಅವರ ಸಮ್ಮುಖದಲ್ಲಿಯೇ ಸಚಿವ ಜೈಶಂಕರ್ ಈ ಮಾತುಗಳನ್ನು ಹೇಳುವ ಮೂಲಕ ನೇರವಾಗಿ ಪಾಕಿಸ್ಥಾನ ಮತ್ತು ಚೀನಕ್ಕೆ ಚಾಟಿ ಬೀಸಿದರು.
Related Articles
ಅಭಿವೃದ್ಧಿ ವಿಚಾರಗಳಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸಹಯೋಗ, ಶಾಂತಿ, ಸ್ಥಿರತೆ ಮತ್ತು ಜನರ ನಡುವೆ ನಿಕಟ ಸಂವಹನ ವೃದ್ಧಿಯ ದಿಸೆಯಲ್ಲಿ ಈ ಸಮಾವೇಶ ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ಭೌಗೋಳಿಕ ಮತ್ತು ಜಾಗತಿಕ ಮಟ್ಟದಲ್ಲಿನ ರಾಜಕೀಯ ವಿಪ್ಲವಗಳ ಪರಿಣಾಮ ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವ ಅತೀಮುಖ್ಯವಾಗಿದೆ. ಅಫ್ಘಾನಿಸ್ಥಾನದಲ್ಲಿನ ಬೆಳವಣಿಗೆಗಳ ಮೇಲೆ ಭಾರತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಅಫ್ಘಾನ್ ಜನರ ಹಿತ ನಮ್ಮ ಮೊದಲ ಆದ್ಯತೆಯಾಗಿದೆ. ಮಾನವೀಯ ಸಹಕಾರ, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾಕರ ಹಕ್ಕುಗಳ ರಕ್ಷಣೆಗೆ ಭಾರತ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಎಸ್.ಜೈಶಂಕರ್ ತಿಳಿಸಿದರು.
Advertisement