Advertisement
ಕೋವಿಡ್‌ಗೆ ಸರಿಯಾದ ಔಷಧ ಸಿಗುವಲ್ಲಿವರೆಗೆ ಪ್ರತಿರೋಧಕಗಳನ್ನು ತಾತ್ಕಾಲಿಕ ಔಷಧವಾಗಿ ಉಪಯೋಗಿಸಬಹುದು. ಇದು ವೈದ್ಯಕೀಯ ಸಿಬಂದಿ, ವೃದ್ಧರಿಗೆ ಪ್ರಯೋಜವಾಗುತ್ತದೆ. ಅಲ್ಲದೇ ಸಾಮಾನ್ಯ ಔಷಧಗಳಿಗೆ ಅಷ್ಟೊಂದು ಪ್ರತಿಕ್ರಿಯೆ ನೀಡದ ರೋಗಿಗಳಿಗೆ ಪ್ರಯೋಜವಾಗುತ್ತದೆ ಎಂದು ಹೇಳಲಾಗಿದೆ. ಸಂಶೋಧನೆ ಕುರಿತ ವರದಿಯನ್ನು “ಸೈನ್ಸ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ರಕ್ತದ ಪ್ರತಿರೋಧಕಗಳ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಯಬೇಕಿದೆ. ದೊಡ್ಡ ಮಟ್ಟದಲ್ಲಿ ಪ್ರತಿರೋಧಕಗಳನ್ನು ಜನರಿಗೆ ನೀಡಿದಾಗ ಕೋವಿಡ್ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ ಸೋಂಕಿನಿಂದ ಚೇತರಿಸಿಕೊಂಡವರ ರಕ್ತದಿಂದ ಪ್ರತಿರೋಧಕಗಳನ್ನು ತೆಗೆದು ನೀಡಿದಾಗ ಅದು ವೈರಸ್ ಜೀವಕೋಶಗಳ ಮೇಲೆ ಹಾನಿ ಮಾಡುವುದನ್ನು ತಡೆಯುತ್ತದೆ. ಇದು ರಕ್ತದಲ್ಲಿ ಸಂಚರಿಸುತ್ತ, ಹಲವು ವಾರಗಳ ಕಾಲ ವೈರಸ್ ಹಾನಿಮಾಡುವುದನ್ನು ತಪ್ಪಿಸುತ್ತದೆ ಎಂದು ಸಂಶೋಧನ ಲೇಖನದಲ್ಲಿ ಹೇಳಲಾಗಿದೆ. Advertisement
ರಕ್ತದಲ್ಲಿರುವ ಪ್ರತಿರೋಧಕಗಳೇ ಕೋವಿಡ್‌ಗೆ ಮದ್ದು
02:39 PM Jun 17, 2020 | mahesh |
Advertisement
Udayavani is now on Telegram. Click here to join our channel and stay updated with the latest news.