Advertisement

ಅಮರಿಂದರ್‌ ಸಂಪುಟಕ್ಕೆ ಸಿಧು ರಾಜೀನಾಮೆ

01:09 AM Jul 15, 2019 | Sriram |

ಚಂಡಿಗಢ: ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಜತೆಗೆ ಮುನಿಸಿಕೊಂಡಿರುವ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಜು. 10 ದಿನಾಂಕ ಇರುವ ರಾಜೀನಾಮೆ ಪತ್ರವನ್ನು ಸಿಧು ರವಿವಾರ ಟ್ವೀಟ್‌ ಮಾಡಿದ್ದಾರೆ. ಕೈ ಬರಹದಲ್ಲಿ ಇರುವ ಈ ತ್ಯಾಗಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಸಲ್ಲಿಸಲಾಗಿದೆ. ಕಳೆದ ತಿಂಗಳ 10ರಂದೇ ಸಿಧು ಹೊಂದಿದ್ದ ಸ್ಥಳೀಯಾಡಳಿತ, ಪ್ರವಾಸೋದ್ಯಮ, ಸಾಂಸ್ಕೃತಿಕ ವ್ಯವಹಾರ ಗಳು ಮತ್ತು ವಸ್ತುಸಂಗ್ರಹಾಲಯ ಖಾತೆಯ ಬದಲಿಗೆ ಅವರಿಗೆ ಇಂಧನ ಖಾತೆ ನೀಡಲಾಗಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ಸಿಧು “ಪಂಜಾಬ್‌ ಸಂಪುಟದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಒಂದು ಸಾಲಿನಲ್ಲಿ ಬರೆದಿದ್ದಾರೆ. ಆರಂಭದ ಟ್ವೀಟ್‌ನಲ್ಲಿ ಸಿಧು ನೇರವಾಗಿಯೇ ರಾಹುಲ್‌ಗೆ ರಾಜೀನಾಮೆ ರವಾನಿಸಿದ್ದಾಗಿ ಹೇಳಿಕೊಂಡಿದ್ದರು. ಅಮೃತಸರ ಪೂರ್ವ ಕ್ಷೇತ್ರದ ಶಾಸಕರೂ ಆಗಿರುವ ಅವರು ಮತ್ತೂಂದು ಟ್ವೀಟ್‌ ಮಾಡಿ ರಾಜೀನಾಮೆ ಯನ್ನು ಮುಖ್ಯಮಂತ್ರಿಗೂ ಕಳುಹಿಸುವುದಾಗಿ ಬರೆದಿದ್ದಾರೆ. ರಾಹುಲ್‌ಗೆ ತ್ಯಾಗಪತ್ರ ಕಳುಹಿಸಿ ಕೊಟ್ಟ ಅವರ ಕ್ರಮ ಟ್ವಿಟರ್‌ನಲ್ಲಿ ಸಾಕಷ್ಟು ಟ್ರೋಲ್‌ಗ‌ೂ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next