Advertisement

PMC ಬ್ಯಾಂಕ್ ವಿದ್ ಡ್ರಾವಲ್ ಮಿತಿ 40 ಸಾವಿರಕ್ಕೇರಿಸಿದ ಆರ್.ಬಿ.ಐ.

09:51 AM Oct 16, 2019 | |

ಮುಂಬಯಿ: ಆಡಳಿತ ಮಂಡಳಿ ಸದಸ್ಯರ ಹಣಕಾಸು ಅವ್ಯವಹಾರ ವಿಚಾರಕ್ಕೆಸಂಬಂಧಿಸಿ ಆರ್.ಬಿ.ಐ. ನಿರ್ಬಂಧನೆಗೊಳಗಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೊ ಅಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಅಲ್ಪ ನಿರಾಳತೆ ಒದಗಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹಣ ಹಿಂಪಡೆಯುವ ಮಿತಿಯನ್ನು 40,000ಕ್ಕೇರಿಸಿದೆ.

Advertisement

ಇದುವರೆಗೆ ಇದ್ದ ಗರಿಷ್ಠ ನಗದು ಹಿಂಪಡೆಯುವಿಕೆ ಮಿತಿ 25,000 ರೂ. ಅಗಿತ್ತು ಅದನ್ನೀಗ 40,000ಕ್ಕೆ ಏರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಬ್ಯಾಂಕಿನ ಗುಣಮಟ್ಟ ಸ್ಥಿತಿ ಹಾಗೂ ತನ್ನ ಠೇವಣಿದಾರರಿಗೆ ಬ್ಯಾಂಕಿನ ನಗದು ಪೂರೈಕೆ ಸಾಮರ್ಥ್ಯವನ್ನು ಪರಿಶೀಲಿಸಿದ ಬಳಿಕ ರಿಸರ್ವ್ ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ನಗದು ಹಿಂಪಡೆಯುವಿಕೆ ಮಿತಿಯನ್ನು ಇದೀಗ 77%ಕ್ಕೆ ಹೆಚ್ಚಿಸಿದ ಬಳಿಕ ಪಿ.ಎಂ.ಸಿ. ಬ್ಯಾಂಕಿನ ಠೇವಣಿದಾರರು ತಮ್ಮ ಅಕೌಂಟಿನಲ್ಲಿರುವ ಪೂರ್ತಿ ಹಣವನ್ನು ತೆಗೆಯಲು ಸಾಧ್ಯವಾಗಲಿದೆ ಎಂದು ಆರ್.ಬಿ.ಐ. ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್ 3ರಂದು ಆರ್.ಬಿ.ಐ. ಪಿಎಂಸಿ ಬ್ಯಾಂಕಿನ ಠೇವಣಿದಾರರಿಗೆ ತಮ್ಮ ಖಾತೆಯಲ್ಲಿರುವ ಒಟ್ಟು ಮೊತ್ತದಲ್ಲಿ 25,000 ರೂಪಾಯಿಗಳನ್ನು ಮಾತ್ರವೇ ಹಿಂಪಡೆಯಲು ಅನುಮತಿ ನೀಡಿತ್ತು.

ಪಿ.ಎಂ.ಸಿ. ಬ್ಯಾಂಕಿನ ಗ್ರಾಹಕರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ ಬೆನ್ನಲ್ಲೇ ಆರ್.ಬಿ.ಐ. ಪತ್ರಿಕಾ ಪ್ರಕಟನೆ ಮೂಲಕ ಈ ಹೊಸ ನಗದು ಹಿಂಪಡೆಯುವಿಕೆ ಮಿತಿಯನ್ನು ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next