Advertisement

ಸವಿತಾ ಸಮಾಜದ ಏಳಿಗೆಗೆ ಮೀಸಲಾತಿ ಅಗತ್ಯ

05:07 PM Jun 13, 2022 | Team Udayavani |

ಕೆ.ಆರ್‌.ನಗರ: ಸವಿತಾ ಸಮಾಜದ ಜನತೆ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರ ಏಳಿಗೆಗೆ ಸರ್ಕಾರ ಪ್ರವರ್ಗ-2ಎ ಅಡಿಯಲ್ಲಿ ಅಗತ್ಯ ಮೀಸಲಾತಿ ನೀಡಬೇಕು ಎಂದು ಚಿತ್ರನಟ ಡಾ.ಎಂ.ಎಸ್‌.ಮುತ್ತುರಾಜು ಹೇಳಿದರು.

Advertisement

ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀರಾಮ ದೇವಾ ಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮಗೆ ಸಾಂವಿಧಾನಿಕವಾಗಿ ದೊರಕಬೇಕಿರುವ ಮೀಸಲಾತಿ ಮತ್ತು ಸವಲತ್ತುಗಳನ್ನು ಪಡೆಯಲು ಅಗತ್ಯವಿದ್ದಲ್ಲಿ ಹೋರಾಟಕ್ಕೂ ಸಿದ್ಧರಾಗಬೇಕು ಎಂದರು. ಹೋರಾಟದ ವಿಚಾರದಲ್ಲಿ ಸಮಾಜದ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಾವು ಗುರಿ ತಲುಪಲು ಸಾಧ್ಯವಾಗಲಿದ್ದು, ನಾನು ಸದಾ ಹೋರಾಟಕ್ಕೆ ಸಿದ್ಧನಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಮೀಸಲಾತಿ ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಿ.ರವಿಶಂಕರ್‌ ಮಾತನಾಡಿ, ಸವಿತಾ ಸಮಾಜದ ವತಿಯಿಂದ ಸಮುದಾ ಯ ಭವನ ಮತ್ತು ದೇವಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯವಾದ ಕಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಇನ್ನೂ ಹೆಚ್ಚಿನ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಖ್ಯಾತ ಮೂಳೆತಜ್ಞ ಡಾ.ಮೆಹಬೂಬ್‌ಖಾನ್‌ ಮಾತನಾಡಿ, ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರೂ ಪರಸ್ಪರ ಸಹಕಾರ ಮನೋಭಾವನೆ ಯಿಂದ ಕೆಲಸ ಮಾಡಬೇಕು. ಆದ್ದರಿಂದ ನಿಮ್ಮ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ. ಆ ನಿಟ್ಟಿನಲ್ಲಿ ಸವಿತಾ ಸಮಾಜದ ಜನತೆ ಕಾರ್ಯೋನ್ಮುಖ ರಾಗಬೇಕು ಎಂದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಪುರಸಭೆ ಸದಸ್ಯರಾದ ಮಂಜುಳಚಿಕ್ಕವೀರು, ವೀಣಾವೃಷಭೇಂದ್ರ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌, ಜಿಲ್ಲಾ ಸವಿತಾ ಸಮಾಜ ಸಂಘದ ಕಾರ್ಯಾಧ್ಯಕ್ಷ ವಿ.ಸುರೇಶ್‌, ಮುಖಂಡರಾದ ಕೆ.ವಿ.ಅರುಣ್‌ಕುಮಾರ್‌, ತಿಮ್ಮಶೆಟ್ಟಿ, ಪ್ರಶಾಂತ್‌, ಮಾದಣ್ಣ, ರಾಜಪ್ಪ, ಮಣಿಕಂಠ, ಮಹದೇವ, ಕುಮಾರ್‌, ಮಂಜುನಾಥ್‌, ರಾಜೇಶ್‌, ಅಶೋಕ್‌, ವೃಷಭೇಂದ್ರ, ಸತೀಶ್‌ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next