Advertisement

ಒಮ್ಮೆ ಮಾತ್ರ ಮೀಸಲಾತಿ ಅವಕಾಶ ಪಡೆಯಲು ಸಲಹೆ 

02:16 PM Feb 21, 2017 | |

ಧಾರವಾಡ: ಡಾ|ಅಂಬೇಡ್ಕರ್‌ ಅವರ ಆಶಯದಂತೆ ಒಮ್ಮೆ ಮೀಸಲಾತಿ ಪಡೆದವರು ಮತ್ತೂಮ್ಮೆ ಪಡೆಯದೆ ಇತರರಿಗೆ ಅವಕಾಶ ಬಿಟ್ಟು ಕೊಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ಹೇಳಿದರು. ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ|ಬಾಬಾಸಾಹೇಬ ಅಂಬೇಡ್ಕರ್‌ ಅವರ 125ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಬದುಕು-ಬರಹ ಉಪನ್ಯಾಸ, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅಂಬೇಡ್ಕರ್‌ ಕೇವಲ ಸಿಮೀತ ವರ್ಗಕ್ಕೆ ಮಾತ್ರ ಮೀಸಲಾಗದೇ ಅವರ ಎಲ್ಲ ತತ್ವಗಳನ್ನು ಮತ್ತು ಅವರು ಕೊಟ್ಟಂತಹ ಸಂದೇಶಗಳನ್ನು ಎಲ್ಲ ಸಮುದಾಯಗಳಿಗೆ ತಿಳಿಸಬೇಕಾದ ಅವಶ್ಯಕತೆ ಇದೆ ಎಂದರು. ಅಂಬೇಡ್ಕರ್‌ ಅವರು ಅನೇಕ ಕಷ್ಟದಿಂದ, ಪ್ರಾಮಾಣಿಕತೆಯಿಂದ ದಮನಿತರಿಗೆ ಧ್ವನಿಯಾಗಿ ನಿಂತವರು. ಅವರ ಹಾಕಿಕೊಟ್ಟ ಸಂದೇಶವನ್ನು ಮುಂದಿನ ಪೀಳಿಗೆ ಅನುಸರಿಸಬೇಕು ಎಂದರು.

ಇಂದು ಹಳ್ಳಿಗಳಲ್ಲಿ ಅಸ್ಪೃಶ್ಯತೆ, ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿರುವುದು ವಿಪರ್ಯಾಸ ಎಂದು ವಿಷಾದಿಸಿದರು. ಪ್ರಾಸ್ತಾವಿಕ ಮಾತನಾಡಿದ ಅಂಬೇಡ್ಕರ ಜ್ಞಾನದರ್ಶನ ಅಭಿಯಾನದ ವಲಯ ಸಂಯೋಜಕ ಬಸವರಾಜ ಸೂಳಿಭಾವಿ ಮಾತನಾಡಿ, ಇಂದು ರಾಜ್ಯದ ಎಲ್ಲ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‌ ಅವರ ಚಿಂತನೆಗಳನ್ನು ತಲುಪಿಸುವ ಒಂದು ಉದ್ದೇಶವಾಗಿದೆ ಎಂದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಎಸ್‌.ಎಸ್‌ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಡಾ|ಶಿವರುದ್ರ ಕಲ್ಲೋಳಕರ ಅವರು ಜಾತಿ ವಿನಾಶ ಹಾಗೂ ರಾಜ್ಯಗಳು ಮತ್ತು ಅಲ್ಪಸಂಖ್ಯಾತರು ವಿಷಯ ಕುರಿತು ಉಪನ್ಯಾಸ ನೀಡಿದರು. ಕವಿವಿಯ ಮಾನವ ಶಾಸ್ತ್ರ ವಿಭಾಗದ ಡಾ|ಎಸ್‌.ಬಿ.ಸುಗಂದಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಕುರಿತು, ಸರಕಾರಿ ಪ್ರಥಮ ದರ್ಜೆಯ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ|ಎಸ್‌.ಬಿ ಜೋಗೂರ್‌ ಹಿಂದು ಕೊಡ್‌ ಬಿಲ್‌ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಿದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ|ರಾಜೇಶ್ವರಿ ಮಹೇಶ್ವರಯ್ಯ, ಡಾ|ಎಂ.ಬಿ.ದಳಪತಿ, ಡಾ|ಮಹದೇವಯ್ಯ, ಡಾ| ಮಹೇಶ ಪಾಟೀಲ, ಡಾ|ಕೆ ಜಗದೀಶ್‌, ಡಾ|ತಾಯಪ್ಪ, ಡಾ|ಸೋಮು ದೊಡಮನಿ, ಡಾ|ಹೊನ್ನೇಶ್‌ ಕಡೆನಾಯಕನಹಳ್ಳಿ, ಡಾ|ಸುಣಗಾರ, ಡಾ ಸಿರಿಗೇರಿ, ಡಾ|ಎಸ್‌. ಎಸ್‌. ಹುಲ್ಲನ್ನವರ್‌, ಡಾ|ಎಸ್‌.ಬಿ. ಜಾಧವ್‌ ಹಾಜರಿದ್ದರು. ಜಿಲ್ಲಾ ಅಂಬೇಡ್ಕರ ಜ್ಞಾನದರ್ಶನ ಅಭಿಯಾನದ ಜಿಲ್ಲಾ ಸಂಯೋಜಕ ವೆಂಕನಗೌಡ್‌ ಪಾಟೀಲ ನಿರೂಪಿಸಿದರು. ಡಾ| ಪ್ರಭಾಕರ ಕಾಂಬಳೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next