ಹತ್ತು ಹದಿನೈದು ವರ್ಷಗಳ ಹಿಂದೆ ಬ್ರಿಸ್ಟಲ…ನ ರಸ್ತೆಗಳಲ್ಲಿ ನಡೆಯುವಾಗ ಕನ್ನಡದ ಮಾತು, ನಗೆ ಕೇಳಿದರೆ ನಿಂತು ತಿರುಗಿ ನೋಡಿ, ಇನ್ನೊಬ್ಬರು ಕನ್ನಡದವರು ಸಿಕ್ಕಿದರಲ್ಲ ಎನ್ನುತ್ತಿದ್ದ ಕಾಲವಾಗಿತ್ತು. ಕನ್ನಡಿಗರ ಸಂಖ್ಯೆ ಬ್ರಿಸ್ಟಲ…ನಲ್ಲಿ ಅತಿ ಕಡಿಮೆ ಇದ್ದ ಸಮಯ ಅದು ಅಥವಾ ಇದ್ದ ಕನ್ನಡಿಗರಿಗೂ ಭೇಟಿಗೆ ಸರಿಯಾದ ಸಾಮಾಜಿಕ ವೇದಿಕೆ ಇಲ್ಲದ ಕಾಲಘಟ್ಟ ಅದು. ಈಗ ಹಾಗಲ್ಲ, ಕನ್ನಡ ಮಾತುಗಳು ಆಸುಪಾಸಿನಲ್ಲಿ ಕೇಳಿಸಿದರೆ ಇದು ನಮ್ಮ ಪರಿಚಯದವರ ಕನ್ನಡ ಧ್ವನಿಯೋ ಅಥವಾ ಅಪರಿಚಿತ ಕನ್ನಡಿಗರದೋ ಎಂದು ಯೋಚಿಸುವಷ್ಟು ಕನ್ನಡ ಇಲ್ಲಿ ಸಾಮಾನ್ಯ ಆಗಿದೆ. ಬ್ರಿಟನ್‌ನ ಮುಖ್ಯ ಪಟ್ಟಣಗಳೆಂದು ಕರೆಸಿಕೊಳ್ಳುವÇÉೆಲ್ಲ ತಂತ್ರಜ್ಞಾನ, ವೈದ್ಯಕೀಯ, ಬ್ಯಾಂಕ್, ಹೊಟೇಲ್ ಹೀಗೆ ಹಲವು ಉದ್ಯಮಗಳಿವೆ ಮತ್ತು ಉದ್ಯೋಗ ಅವಕಾಶ ಇರುವÇÉೆಲ್ಲ ಕನ್ನಡಿಗರಿದ್ದಾರೆ. ಕರ್ನಾಟಕದ ಜಿÇÉೆ ಜಿÇÉೆಗಳ ಊರೂರಿನ ಜೊತೆಗೆ ಇಂದು ಬ್ರಿಟನ್ ಸಂಬಂಧ ಹೊಂದಿದೆ. ಬ್ರಿಸ್ಟಲ…ನಲ್ಲಿ ಕನ್ನಡಿಗರು ಆಚರಿಸುವ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿವೆ. ಅಲ್ಲಿನ ಕನ್ನಡ ಮತ್ತು ಇಲ್ಲಿನ ಕನ್ನಡಿಗರ ನಡುವಿನ ಹೊಸ ಸ್ನೇಹದ ಸೇತುವೆಯಾಗಿ ಇತ್ತೀಚೆಗೆ ಕನ್ನಡ ಚಲನಚಿತ್ರಗಳೂ ಬ್ರಿಸ್ಟಲ…ನ ಬದುಕನ್ನು ಸೇರಿಕೊಂಡಿವೆ.
ಹನ್ನೊಂದು ವರ್ಷಗಳ ಹಿಂದೆ ಯಾರೋ ಬ್ರಿಸ್ಟಲ…ನಲ್ಲಿ ಮುಂಗಾರು ಮಳೆ ಸಿನೆಮಾದ ಒಂದು ಪ್ರದರ್ಶನ ವ್ಯವಸ್ಥೆ ಮಾಡಿದ್ದರು. ಹಿಂದಿಯ ಸಿನೆಮಾಗಳನ್ನು ಬಿಟ್ಟರೆ ಇತರ ಭಾರತೀಯ ಭಾಷೆಯ ಚಲನಚಿತ್ರಗಳು ಬ್ರಿಸ್ಟಲ…ಗೆ ಪ್ರವೇಶ ಪಡೆಯದ ಆ ಕಾಲದಲ್ಲಿ , ಇಲ್ಲಿದ್ದ ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾರತೀಯ ರಾಜ್ಯದವರೂ ಬಂದು ಆ ಸಿನೆಮಾವನ್ನು ನೋಡಿದ್ದರು. ಕನ್ನಡ ಸಿನೆಮಾವನ್ನು ಇಲ್ಲಿನ ಸಿನೆಮಾ ಮಂದಿರದಲ್ಲಿ ಕುಳಿತು ನೋಡುವ ಒಂದು ಸಾಧ್ಯತೆ ರೋಮಾಂಚಕ ಅನುಭವವನ್ನು ಅಂದು ಕೊಟ್ಟಿತ್ತು. ಬ್ರಿಸ್ಟಲ…ನಲ್ಲಿ ಎಷ್ಟು ಕನ್ನಡದವರಿ¨ªಾರೆ ಎಂದೂ ನಮಗೆ ತೋರಿಸಿತ್ತು. ನಾವು ಕಾಣದ ಕೇಳದ ಕನ್ನಡಿಗರು ಸಿನೆಮಾ ನೆಪದಲ್ಲಿ ಅಲ್ಲಿ ಅಂದು ಪರಿಚಯ ಆಗಿದ್ದರು.
ಸಿನೆಮಾ ಗೀಳನ್ನು ತೀರಾ ಹಚ್ಚಿಕೊಳ್ಳದ ಕನ್ನಡದವರು ಇನ್ನೊಂದು ಸಿನೆಮಾ ಪ್ರದರ್ಶಿಸಿದರೆ ಒಟ್ಟಾಗುತ್ತಾರೋ ಇಲ್ಲವೋ ಎನ್ನುವ ಸಂಶಯವೋ ಅಥವಾ ಕರ್ನಾಟಕದಲ್ಲಿ ಬಿಡುಗಡೆ ಆದ ಸಿನೆಮಾವನ್ನು ಬ್ರಿಟನ್ನಿಗೆ ತರುವ ಉದ್ಯಮಶೀಲತೆಯ ಕೊರತೆಯೋ ಗೊತ್ತಿಲ್ಲ, ಹನ್ನೊಂದು ವರ್ಷಗಳ ಹಿಂದೆ ಮುಂಗಾರು ಮಳೆ ಪ್ರದರ್ಶನ ಆದ ನಂತರದ ಸುಮಾರು ವರ್ಷಗಳು ಬ್ರಿಸ್ಟಲ…ಗೆ ಕನ್ನಡ ಸಿನೆಮಾದ ಪ್ರವೇಶ ಆಗಲಿಲ್ಲ . ಪರಿಸ್ಥಿತಿ ಈಗ ಬದಲಾಗಿದೆ.
ಕನ್ನಡಿಗರು ಹೆಚ್ಚಿ¨ªಾರೆ, ಕನ್ನಡದ ಉಪಸ್ಥಿತಿಯೂ ಹೆಚ್ಚಿದೆ. ಬ್ರಿಸ್ಟಲ… ಮಾತ್ರವಲ್ಲದೆ ಬ್ರಿಟನ್‌ನ ಹಲವು ಪಟ್ಟಣಗಳಲ್ಲಿ ನಿರಂತರವಾಗಿ ಕನ್ನಡ ಸಿನೆಮಾಗಳೂ ಬರುತ್ತವೆ. ಕನ್ನಡ ಸಿನೆಮಾವನ್ನು ಇಲ್ಲಿ ನಿರಂತರವಾಗಿ ಹಂಚುವವರೂ ಈಗ ತಯಾರಾಗಿ¨ªಾರೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡದ ಚಿತ್ರರಂಗದಲ್ಲಿ ಹೆಸರು ಮಾಡಿದ ಅಥವಾ ತಾರಾಮೌಲ್ಯ ಇರುವ ನಟರ ಎಲ್ಲ ಸಿನೆಮಾಗಳೂ ಬ್ರಿಟನ್ನಿನ ಹಲವು ನಗರಗಳಲ್ಲಿ ಕನಿಷ್ಠ ಒಂದೊಂದು ಪ್ರದರ್ಶನವನ್ನಾದರೂ ಕಂಡಿವೆ.
ಹೆಚ್ಚಾಗಿ ಕಮರ್ಷಿಯಲ… ಸಿನೆಮಾಗಳೇ ಬಂದು ಹೋಗುವ ಬ್ರಿಸ್ಟಲ…ನಲ್ಲಿ ಸೆಪ್ಟಂಬರ್ 24 ಅಂದರೆ ಕಳೆದ ರವಿವಾರ ರಿಸರ್ವೇಶನ್ ಚಿತ್ರ ಪ್ರದರ್ಶನ ಗೊಂಡಿತು. ಇದು 2016ನೆಯ ಸಾಲಿನಲ್ಲಿ ಭಾರತದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಪ್ರಾದೇಶಿಕ ಚಲನಚಿತ್ರ. ಮೀಸಲಾತಿಯ ಪರ-ವಿರೋಧಗಳ ಕಡೆಗೆ ವಾಲದೆ, ಒಂದು ಮೇಲ್ಜಾತಿಯ ಕುಟುಂಬ ಮೀಸಲಾತಿಯಿಂದ ಪಡುವ ಸಂಕಷ್ಟಗಳು ಮತ್ತು ಅದೇ ಕುಟುಂಬದ ಸದಸ್ಯರ ಮೀಸಲಾತಿಯ ಕುರಿತಂತೆ ಬೇರೆ ಬೇರೆ ನಿಲುವುಗಳು ಈ ಚಲನಚಿತ್ರದಲ್ಲಿ ಚರ್ಚೆಗೊಂಡಿವೆ. “ಬ್ರಿಸ್ಟಲ… ಕನ್ನಡ ಬಳಗ’ ಎನ್ನುವ ಕನ್ನಡ ಸ್ನೇಹಿತರ ಅನೌಪಚಾರಿಕ ಕೂಟ ಈ ಪ್ರದರ್ಶನದ ಹೊಣೆ ಹೊತ್ತಿತ್ತು. ಸಿನೆಮಾದ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿಯವರೂ ಚಿತ್ರ ಪ್ರದರ್ಶನಕ್ಕೆ ಬ್ರಿಸ್ಟಲ…ಗೆ ಬಂದಿದ್ದರು. ಸಿನೆಮಾ ಪ್ರದರ್ಶನದ ನಂತರ ತಮ್ಮ ಬದುಕಿನ ಅನುಭವಗಳನ್ನು ಯಾಕುಬ… ಖಾದರ್ ಹಂಚಿಕೊಂಡರು. ಬಡತನದ ಬಾಲ್ಯದಲ್ಲಿ ಶಾಲೆ ಬಿಟ್ಟು ಹಳೆ ಕಬ್ಬಿಣ ಕಾಗದ ಖಾಲಿ ಬಾಟಲಿಯಂತಹ ಗುಜರಿ ಹೆಕ್ಕಿ ಬದುಕುವ ಅನಿವಾರ್ಯತೆ; ಗುಜರಿ ವ್ಯಾಪಾರದÇÉೇ ಬದುಕಿಗೆ ಒಂದು ಸ್ಥಿರತೆ ಬಂದಿದ್ದು; ಸುನಾಮಿ ದುರಂತ ಸಂಭವಿಸಿದಾಗ ಅಂಡಮಾನಿನ ಭಾರತೀಯರ ನೆರವಿಗೆ ಅಕ್ಕಿ ಚೀಲಗಳನ್ನು ತಮ್ಮ ಬೆನ್ನ ಮೇಲಿಟ್ಟು ಲಾರಿಗೆ ಏರಿಸಿದ್ದು ; ಅಂಡಮಾನಿಗೆ ಹೋಗಿ ಅಲ್ಲಿ ನಿರಾಶ್ರಿತರ ಮನೆಕಟ್ಟಿ ನಿಲ್ಲಿಸುವಲ್ಲಿ, ಊಟ ಹಂಚುವಲ್ಲಿ ಸಹಾಯ ಮಾಡಿದ್ದು; ಒಂದು ದಿನ ತಲ್ಲೂರಿನ ಗುಜರಿ ಅಂಗಡಿಯಲ್ಲಿ ಬಾಟಲಿ ಹೆಕ್ಕಿ ಜೋಡಿಸುತ್ತಿರುವಾಗ ತಮ್ಮ ಮೊಬೈಲ್‌ಗೆ ಗಿರೀಶ್ ಕಾಸರವಳ್ಳಿಯವರ ಕರೆ ಬಂದದ್ದು ; ಗುಲಾಬಿ ಟಾಕೀಸ್ ಸಿನೆಮಾದಲ್ಲಿ ಕಥಾನಾಯಕಿಯ ವಸ್ತ್ರವಿನ್ಯಾಸಕಾರರಾಗಿ ಕೆಲಸ ಮಾಡಿದ್ದು; ಅಲ್ಲಿಂದ ಸಿನೆಮಾ ನಂಟು ಗಟ್ಟಿಯಾಗಿದ್ದು, ಹೆಂಡತಿಯ ಒಡವೆ ಅಡ ಇಟ್ಟು ತಮ್ಮ ಮೊದಲ ನಿರ್ಮಾಣದ ರಿಸರ್ವೇಶನ್ ಚಿತ್ರ ತಯಾರಾದದ್ದು ; ತಮ್ಮ ಸಿನೆಮಾಗೆ ರಾಷ್ಟ್ರೀಯ ಪ್ರಶಸ್ತಿ ಬಂದದ್ದನ್ನು ಟಿವಿ ನೋಡುತ್ತ ತಿಳಿದಾಗ ಅನಿರೀಕ್ಷಿತ ಹಿಗ್ಗಿನ ಪರಾಕಾಷ್ಠೆಯಲ್ಲಿ ಕಿರುಚಿದ್ದು, ಟಿವಿ ರಿಮೋಟ್ ಅನ್ನು ಕುಟ್ಟಿ ಒಡೆದದ್ದು; ಗಾಂಧಿನಗರದ ಸಿನೆಮಾ ಲೋಕದ ಮನಕಲುಕುವ ಕಥೆಗಳು-ಲಾಬಿಗಳು… ಹೀಗೆ ತಮ್ಮ ಬದುಕಿನ ಹಲವು ಮುಖಗಳನ್ನು ಮತ್ತು ಯಾನವನ್ನು ಯಾಕೂಬ… ಅವರು ಬ್ರಿಸ್ಟಲ… ಕನ್ನಡಿಗರ ಎದುರು ತೆರೆದಿಟ್ಟರು. ಯಾಕೂಬರ ಜೊತೆ ಸಿನೆಮಾ ನಂತರ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡ ಬ್ರಿಸ್ಟಲ…ನ ಸ್ನೇಹಿತರು ಅನಿವಾಸಿ ಬದುಕಿನ ತಲ್ಲಣಗಳನ್ನು ಅವರಿಗೆ ತಿಳಿಸಿದರು. ಬ್ರಿಟನ್ನಿನ ಬದುಕೆಂದರೆ ಕರಣ್ ಜೋಹರನ ಸಿನೆಮಾದ ದೃಶ್ಯದಲ್ಲೋ, ಶಾರೂಖ್ ಖಾನ್ ಅಭಿನಯಿಸಿದ ಸೂಪರ್‌ಹಿಟ್ ಹಾಡಿನÇÉೋ ತೋರಿಸುವಂತೆ ಐಷಾರಾಮಿ ಬಂಗಲೆಗಳು, ವಾಯುವೇಗದ ದುಬಾರಿ ಕಾರುಗಳು, ಮಂಜಿನಮಳೆ, ಹಸಿರು ಪರ್ವತ, ಮರಸುತ್ತುವ ಪ್ರೇಮ ಖಂಡಿತ ಅಲ್ಲ , ಭಾರತದ ಬದುಕಿನಲ್ಲಿರುವಂತೆ ಬ್ರಿಟನ್‌ನಲ್ಲೂ ದುಃಖ-ಸುಖದ ಕತೆಗಳು, ಸಾಂಸಾರಿಕ ಜಂಜಾಟಗಳು, ಸಾಮಾಜಿಕ ಸವಾಲುಗಳು ಇವೆ ಎಂದು ಮನಸ್ಸನ್ನು ಬಿಚ್ಚಿಟ್ಟರು. ರಿಸರ್ವೇಶನ್ ಸಿನೆಮಾ ಪ್ರದರ್ಶನದ ನೆಪದಲ್ಲಿ ನಿರ್ಮಾಪಕ ಗುಲ್ವಾಡಿ ಮತ್ತು ಪ್ರೇಕ್ಷಕರ ನಡುವೆ ಅನುಭವ ಮತ್ತು ಅಭಿಪ್ರಾಯಗಳ ಕೊಡುಕೊಳ್ಳುವಿಕೆ ನಡೆಯಿತು. ಗಾಂಧಿನಗರದ ಮಾಯಾಲೋಕದಿಂದ ದೂರ ಇದ್ದೂ ಸಿನೆಮಾ ಮಾಡಬಹುದು, ಅತಿ ಕಡಿಮೆ ಹಣದಲ್ಲೂ ಚಲನಚಿತ್ರವೊಂದು ಸಿದ್ಧ ಆಗಬಹುದು ಎನ್ನುತ್ತ ತಮ್ಮ ಬದುಕಿನ ಪ್ರಯಾಣವನ್ನು ತೆರೆದಿಡುತ್ತ, ತಮ್ಮನ್ನೇ ತಾವು ತಮಾಷೆ ಮಾಡಿಕೊಳ್ಳುತ್ತ ಮಾತಾಡಿದ ನಿರ್ಮಾಪಕ ಗುಲ್ವಾಡಿ ಬ್ರಿಸ್ಟಲ… ಕನ್ನಡಿಗರ ಮನಗೆದ್ದರು.
ಭಾರತದಲ್ಲಿ ರಜತಕಮಲ ಪಡೆದ ಕನ್ನಡದ ಕಲಾತ್ಮಕ ಚಿತ್ರವೊಂದು ಅದರ ನಿರ್ಮಾಪಕರ ಜೊತೆಗೆ ಬ್ರಿಟನ್‌ನಲ್ಲಿ ಹೀಗೆ ಕನ್ನಡಿಗರ ಪ್ರಯತ್ನದಿಂದಲೇ ಪ್ರದರ್ಶನಗೊಂಡ ದಾಖಲೆಗಳು ಒಂದೋ ಕಡಿಮೆ ಅಥವಾ ಇಲ್ಲ. ಈ ಪ್ರದರ್ಶನದ ಹಿಂದೆ ಯಾವ ಸರಕಾರದ, ಸಂಸ್ಥೆಗಳ ಸಹಾಯವೂ ಇರಲಿಲ್ಲ, ಇಲ್ಲಿ ಕಂಡದ್ದು ರಿಸರ್ವೇಶನ್ ಚಿತ್ರತಂಡದ ಆಸಕ್ತಿ ಮತ್ತು ಬ್ರಿಸ್ಟಲ… ಕನ್ನಡಿಗರ ಪ್ರೀತಿ. ಸಿನೆಮಾವೊಂದು ಬ್ರಿಸ್ಟಲ…ನಲ್ಲಿ ಪ್ರದರ್ಶನಗೊಳ್ಳಬೇಕಿದ್ದರೆ ಅದಕ್ಕೆ ಇಲ್ಲಿನ ನಗರಸಭೆಯಿಂದ ಯಾವ ವಯಸ್ಸಿನ ಪ್ರೇಕ್ಷಕರಿಗೆ ಸೂಕ್ತ ಎನ್ನುವ ಪರವಾನಿಗೆ ಪಡೆಯಬೇಕು. ಭಾರತದ ಸೆನ್ಸಾರ್ ಮಂಡಳಿಯಿಂದ ಯಾವ ಪ್ರಾಯದ ಮಕ್ಕಳೂ ನೋಡಬಹುದೆನ್ನುವ ಯೋಗ್ಯತಾಪತ್ರ ಪಡೆದಿದ್ದ ಈ ಚಿತ್ರವನ್ನು ಬ್ರಿಸ್ಟಲ… ಪ್ರದರ್ಶನದ ಮೊದಲು ನೋಡಿದ್ದ ಆಂಗ್ಲ ನಗರಸಭೆ ತನ್ನ ಕಾನೂನಿನ ಪ್ರಕಾರ ಹದಿನೈದು ವರ್ಷಗಳ ಮೇಲ್ಪಟ್ಟವರಿಗೆ ಮಾತ್ರ ಇದು ಯೋಗ್ಯ ಎನ್ನುವ ಕಟು ನಿರ್ಣಯ ಪಡೆಯಿತು! ಈ ಸಿನೆಮಾದಲ್ಲಿ ಪಾತ್ರವೊಂದು ನೇಣು ಹಾಕಿಕೊಳ್ಳುವ ಸಣ್ಣ ಪ್ರಯತ್ನ ಹಾಗೂ ಅದನ್ನು ತಡೆಯುವಾಗಿನ ವಾದದ 20 ಸೆಕೆಂಡ್‌ಗಳ ಒಂದು ದೃಶ್ಯವನ್ನು ನೋಡಿ ಚಿತ್ರ ನೋಡಿದ ಸಣ್ಣ ಮಕ್ಕಳೂ ಅನುಕರಿಸಿಯಾರು ಎನ್ನುವ ವಾದದಲ್ಲಿ ನಗರಸಭೆ 15 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಎನ್ನುವ ಯೋಗ್ಯತಾಪತ್ರ ನೀಡಿತು. ಇಲ್ಲಿನ ಮಕ್ಕಳು ನೋಡುವ ಟಾಮ… ಆ್ಯಂಡ್ ಜೆರಿ ಕಾಟೂìನ್‌ನಲ್ಲಿ ಬೆಕ್ಕು, ಇಲಿಯ ಕಾಟ ತಾಳಲಾರದೆ ನೇಣು ಹಾಕಿಕೊಳ್ಳುವ ದೃಶ್ಯ ಇದೆ. ಅಲ್ಲದೆ ಹಿಂಸೆಯ ವೈಭವೀಕರಣದ ವಿಡಿಯೋಗೇಮ…ಗಳನ್ನು ಆಡುವುದು, ಯುದ್ಧದ ಹೊಡೆದಾಟದ ಚಲನಚಿತ್ರಗಳನ್ನು ಮಕ್ಕಳು ನೋಡುವುದು ಸಾಮಾನ್ಯ ಆದ ಈ ದೇಶದಲ್ಲಿ ಒಂದು ಸಣ್ಣ ಗಂಭೀರ ದೃಶ್ಯಕ್ಕೆ 15ರ ರೇಟಿಂಗ್ ಸಿಕ್ಕಿದ್ದು ಚಿತ್ರ ನೋಡಬೇಕೆಂದು ಬಯಸಿದ್ದ ಕೆಲವು ಕನ್ನಡ ಕುಟುಂಬಗಳಿಗೆ ಸಣ್ಣ ನಿರಾಸೆಯನ್ನೂ ಹುಟ್ಟಿಸಿತು. ಜೊತೆಗೆ ಇಲ್ಲಿನ ಪುಸ್ತಕಗಳಲ್ಲಿ ಬರೆದಿಟ್ಟ ಜಡ ಕಾನೂನುಗಳನ್ನು ಪಾಲಿಸುವ ಬ್ರಿಟನ್‌ನ ಅದಕ್ಷ ಆಡಳಿತಶಾಹಿಯ ಮುಖವನ್ನು ಬಹಿರಂಗಗೊಳಿಸಿತು.
ಹೊಸ ಅನುಭವಗಳು, ಮುಕ್ತ ಚರ್ಚೆಗಳು, ಕನ್ನಡದ ಮಾತುಗಳು, ಕೇಕೆಗಳು, ಗೇಲಿಗಳ ಜೊತೆ ಸಿನೆಮಾ ಪ್ರದರ್ಶನ ಮುಗಿದಿದೆ. ಭಾರತದಲ್ಲಿ ಮೀಸಲಾತಿ ಎತ್ತಬೇಕಾದ ಚರ್ಚೆಯನ್ನು ಮತ್ತು ಮೀಸಲಾತಿಯ ಬಗ್ಗೆ ನಡೆಯಬೇಕಾದ ಪುನರ್ ವಿಮರ್ಶೆಯನ್ನು ಮೆಲುಕು ಹಾಕುತ್ತ ಸಿನೆಮಾ ನೋಡಿದವರು ಮನೆಗೆ ಹೋಗಿ¨ªಾರೆ. ಸಿನೆಮಾ, ಕ್ರಿಕೆಟ್, ಸಾಮಾಜಿಕ ಕಳಕಳಿಯಂತಹ ಬೇರೆ ಬೇರೆ ಕಾರಣಗಳಿಗೆ ದೇಶ-ವಿದೇಶಗಳನ್ನು ಸುತ್ತಿದ ಯಾಕುಬ್ ಖಾದರ್ ಗುಲ್ವಾಡಿಯವರು ತಮ್ಮ ಅನುಭವಗಳ ಗುಜರಿಯ ಗಂಟಿಗೆ ಬ್ರಿಸ್ಟಲ…ನಿಂದ ಒಂದಿಷ್ಟು ಸಾಮಾನುಗಳನ್ನು ಸೇರಿಸಿಕೊಂಡು ಭಾರತಕ್ಕೆ ಮರಳಿ¨ªಾರೆ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್