ಶಿವಮೊಗ್ಗ: ಮೀಸಲಾತಿ ಎಂಬುದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮಾಜ ಸಹಿತ ಎಲ್ಲ ಸಮಾಜದವರು ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಮೀಸಲಾತಿ ಯಾರಿಗೆ ಕೊಡಬೇಕು, ಯಾಕೆ ಕೊಡಬೇಕು ಎಂಬ ಪ್ರಶ್ನೆ ವರ್ತಮಾನದಲ್ಲಿ ಕೇಳಿ ಬರುತ್ತಿದೆ. ಡಾ| ಅಂಬೇಡ್ಕರ್ ಅವರು ಕೇವಲ ಹತ್ತು ವರ್ಷಕ್ಕೆ ಮೀಸಲಾತಿ ಕೊಡಬೇಕು ಎಂದಿದ್ದರು. ಆದರೆ 75 ವರ್ಷವಾದರೂ ಮೀಸಲಾತಿಗಾಗಿ ಎಲ್ಲ ಸಮಾಜದವರು ಬೇಡಿಕೆ ಇಡು ತ್ತಿರುವುದು ಸರಿಯಲ್ಲ ಎಂದರು.
ಇಂದು ಮೀಸಲಾತಿ ದುರುಪ ಯೋಗವಾಗು ತ್ತಿದೆ. ನಿಜವಾಗಿಯೂ ಪಂಚಮ ಸಾಲಿ ಸಮಾಜ ಹಾಗೂ ಕುರುಬರಿಗೆ ಮೀಸಲಾತಿಯ ಅಗತ್ಯ ಇದೆಯೇ ಎಂದು ಪ್ರಶ್ನಿಸಿದರು.
ಮೀಸಲಾತಿ ರಾಜಕೀಯ ಅಸ್ತ್ರ ವಾಗುತ್ತಿರುವುದು ದುರಂತ. ಮತ ಬ್ಯಾಂಕ್‌ನ್ನು ಗಮನದಲ್ಲಿಟ್ಟುಕೊಂಡು ಈ ಮೀಸಲಾತಿಯ ಪ್ರಶ್ನೆ ಏಳು ತ್ತಿದೆ. ಮೀಸಲಾತಿ ಎಂದಿಗೂ ಜಾತಿ ಸೂಚಕವಾಗಬಾರದು. ಮೀಸಲಾತಿ ಸಿಗಬೇಕಾಗಿರುವುದು ಬಡವರು, ದೀನ ದಲಿತರು ಹಾಗೂ ತುಳಿತಕ್ಕೆ ಒಳಗಾದವರಿಗೆ ಎಂದು ಅವರು ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶ ರಾಜಕೀಯ ಪ್ರೇರಿತ ಅಲ್ಲ. ಸಿದ್ದರಾಮಯ್ಯ ಇದು ಬಿಜೆಪಿಯ ರಾಜಕೀಯ ಪ್ರೇರಿತ ಸಮಾವೇಶ ಎಂದು ಆರೋಪಿಸಿದ್ದಾರೆ. ದಾವಣಗೆರೆಯಲ್ಲಿ 75 ಕೋಟಿ ರೂ. ಖರ್ಚು ಮಾಡಿ “ಸಿದ್ಧರಾಮಯ್ಯ ಅಮೃತ ಮಹೋತ್ಸವ’ ಮಾಡಿದ್ದು ರಾಜಕೀಯ ಪ್ರೇರಿತವಾಗಿದ್ದು, ಮೊದಲು ಅದರ ಲೆಕ್ಕ ಕೊಡಲಿ.
-ಕೆ.ಎಸ್. ಈಶ್ವರಪ್ಪ , ಶಾಸಕ