Advertisement

ಡಬಲ್ ಇಂಜಿನ್ ಸರಕಾರಕ್ಕೆ ಗುಂಡಿಗೆ ಜಾಸ್ತಿ;ಹಾಗಾಗಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ:ಶ್ರೀರಾಮುಲು

04:41 PM Mar 11, 2023 | Team Udayavani |

ಮಸ್ಕಿ: ಮೀಸಲಾತಿ ವಿಚಾರ ಅಂದ್ರೆ ಜೇನುಗೂಡಿಗೆ ಕೈ ಹಾಕಿದಂತೆ. ಈ ವಿಷಯದಲ್ಲಿ ಎಲ್ಲ ಪಕ್ಷಗಳೂ ಮೂಗಿಗೆ ತುಪ್ಪ ಸವರಿದರು. ಆದರೆ ಡಬಲ್ ಇಂಜಿನ್ ಸರಕಾರಕ್ಕೆ ಗುಂಡಿಗೆ ಇರೋದಕ್ಕೆ ಪರಿಶಿಷ್ಟರಿಗೆ ಮೀಸಲು ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಮಸ್ಕಿ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಮಸ್ಕಿ ನೆಲದಲ್ಲಿ ನಿಂತುಕೊಂಡೇ ಮೀಸಲಾತಿ ಜಾರಿಯನ್ನು ರಕ್ತದಲ್ಲಿ ಬರೆದುಕೊಡುವೆ ಎಂದು ಹೇಳಿದ್ದೆ. ಇದನ್ನು ಕೆಲವರು ಗೇಲಿ ಮಾಡಿದ್ದರು. ಅವರಿಗೆ ತಕ್ಕ ಕುತ್ತರ ಈಗ ಸಿಕ್ಕಿದೆ. ಶೇ.3 ರಷ್ಟಿದ್ದ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7ರಷ್ಟು ಮತ್ತು ಶೇ.15 ರಷ್ಟಿದ್ದ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚು ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಧೈರ್ಯ ಇರುವುದರಿಂದಲೇ ಇದು ಜಾರಿಯಾಗಿದೆ ಎಂದರು.

ಕಾಂಗ್ರೆಸ್‌ನವರು ಬರೀ ಸುಳ್ಳು ಆಶ್ವಾಸನೆ ನೀಡುತ್ತಾರೆ. ಗ್ಯಾರಂಟಿ ಪತ್ರ, ವಾರಂಟಿ ಪತ್ರ ಅಂತ ಈಗ ಬೂಟಾಟಿಕೆ ನಡೆಸಿದ್ದಾರೆ. ಎಲ್ಲ ಫ್ರೀ ಯೋಜನೆ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಜನರು ಈ ಯಾವ ಸುಳ್ಳು ಆಶ್ವಾಸನೆಗಳಿಗೆ ಬಲಿಯಾಗುವುದಿಲ್ಲ. 2023ರ ಚುನಾವಣೆಯಲ್ಲಿ ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಹೈಕ ಮೀಸಲಾತಿ ಅನ್ವಯ ಈ ಭಾಗದಲ್ಲಿ ಖಾಲಿ ಇದ್ದ 34 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ನಾನು ಸಬ್‌ಕಮಿಟಿ ಚೇರ್ಮನ್ ಆದಾಗಿಂದ ರಾಜ್ಯದಲ್ಲಿ ಎಲ್ಲ ಇಲಾಖೆಯಲ್ಲೂ ಖಾಲಿ ಇದ್ದ 86 ಸಾವಿರ ಹುದ್ದೆಗಳ ಪೈಕಿ60 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನು 26 ಸಾವಿರ ಹುದ್ದೆ ತುಂಬುವ ಕೆಲಸ ಮಾಡಲಾಗುತ್ತದೆ. ಮುಂಬಡ್ತಿ ವಿಚಾರದಲ್ಲೂ ಬಿಜೆಪಿ ದಿಟ್ಟತನ ಹೆಜ್ಜೆ ಇಟ್ಟಿದೆ ಎಂದರು.

ಕಾರ್ಮಿಕರಿಗೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ರೈತಾಪಿ ಜನರಿಗೆ3 ಲಕ್ಷ ರೂ.ವರೆಗೆ ಇದ್ದ ಬಡ್ಡಿ ರಹಿತ ಸಾಲವನ್ನು ಈಗ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next