Advertisement

ಶೀಘ್ರದಲ್ಲಿ ಮೀಸಲಾತಿ ಗೊಂದಲ ಪರಿಹಾರ

03:18 PM May 22, 2022 | Team Udayavani |

ಸಂಡೂರು: ರಾಜ್ಯದಲ್ಲಿ ಹಲವಾರು ಸಮಾಜದವರು ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ, ಅದರೆ ನಮ್ಮ ಸಮಾಜದವರು ಬೀದಿಗಿಳಿದು ಹೋರಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Advertisement

ಅವರು ತಾಲೂಕಿನ ಚೋರನೂರು ಗ್ರಾಮದಲ್ಲಿ ಅರಕ್ಷಕ ಠಾಣೆ ಭೂಮಿ ನೆರವೇರಿಸಲು ಅಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಾಲ್ಮೀಕಿ ಗುರುಪೀಠದ ಸ್ವಾಮಿಗಳೂ ಸಹ 100 ದಿನಗಳ ಕಾಲ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟಮಾಡುತ್ತಿದ್ದು ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ, ಅದರೆ ನಾವು ಪ್ರತಿಭಟಿಸಿದ ತಕ್ಷಣವೇ ಮೀಸಲಾತಿ ಕೊಡಬೇಕು ಎಂದರೆ ಹೇಗೆ? ಅದಕ್ಕೆ ಪೂರಕವಾಗಿ ಶ್ರೀರಾಮುಲು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸ್ವಾಮೀಜಿಗಳಿಗೆ ತಿಳಿದಿದೆ. ಆದ್ದರಿಂದ ಶೀಘ್ರದಲ್ಲಿ ಮೀಸಲಾತಿ ಗೊಂದಲ ಪರಿಹಾರವಾಗುತ್ತದೆ ಎಂದರು.

ಯುವಕರು ಅವಸರ ಬಿದ್ದು ಹೋರಾಟಮಾಡಿದೆವು ಕೊಡಲಿಲ್ಲ ಎಂದು ಆಘಾತಕ್ಕೆ ಒಳಗಾಗುವುದು ಸರಿಯಲ್ಲ. ಮಸ್ಕಿಯಲ್ಲಿ ರಾಜಶೇಖರ ಪಾಟೀಲ್‌ ಎನ್ನುವವರು ಸಾವನ್ನಪ್ಪಿದ್ದು ನೋವಿನ ಸಂಗತಿಯಾಗಿದೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮಾಜವನ್ನು ಬೀದಿಗಿಳಿಸುವಂಥ ಕಾರ್ಯ ಮಾಡುತ್ತಿದೆ ಅದು ಸರಿಯಲ್ಲ.

ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದು ನಾಗಮೋಹನ್‌ದಾಸ್‌ ವರದಿಯನ್ನು ಜಾರಿ ಮಾಡಬೇಕು ಎನ್ನುವ ಸಂಡೂರು ಶಾಸಕರ ಮಾತು ಸತ್ಯ. ಆದರೆ ಸುಭಾಷ್‌ ಅಡಿಯವರ ವರದಿಯನ್ನು ವಿರೋಧಿಸುವ ಚಿಂತನೆಯಾಗಲಿ, ಕೈಬಿಡಲಿ ಎನ್ನುವುದು ಎಷ್ಟು ಸರಿ. ಪಪಂ ಮತ್ತು ಪ.ಜಾತಿಯಲ್ಲಿ 103 ಪಂಗಡಗಳಿದ್ದು ಶೇ. 15ರಿಂದ 17ಕ್ಕೆ ಹಾಗೂ 3ರಿಂದ 7ಕ್ಕೆ ಜಾರಿಗೆ ತಂದೆ ತರುತ್ತೇವೆ. ಸುಭಾಷ್‌ ಅಡಿಯವರ ವರದಿಯನ್ನು ಪಂಚಮಸಾಲಿ ಜನಾಂಗವನ್ನು ಒಳಗೊಂಡು ಬೇರೆ ಬೇರೆ ಜನಾಂದವರಿಗೆ ಮೀಸಲಾತಿ ನೀಡಿದರೆ ತಪ್ಪೇನು?.

ನಾಗಮೋಹನ್‌ದಾಸ್‌ ಹಾಗೂ ಸುಭಾಷ್‌ ಅಡಿಯಲ್ಲಿ ಎರಡೂ ಪಂಗಡದವರಿಗೆ ಸರ್ಕಾರ ಮೀಸಲಾತಿ ನೀಡಿದರೆ ತಪ್ಪೇನಿದೆ. ಇಬ್ಬರಿಗೂ ಸರ್ಕಾರ ನ್ಯಾಯ ಒದಗಿಸಲಿ. ಪ್ರಸನ್ನಾನಂದ ಪುರಿ ಸ್ವಾಮೀಜಿಗಳಿಗೆ ಶ್ರೀರಾಮುಲು ಮೀಸಲಾತಿ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎನ್ನುವುದು ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರವಿದ್ದಾಗ ಚಕಾರವೆತ್ತದವರು ಈಗ ಅಪಪ್ರಚಾರ ಮಾಡುವುದು ಸರಿಯಲ್ಲಎಂದರು.

Advertisement

ಕೇಳಿದಾಕ್ಷಣ ಮೀಸಲಾತಿ ಕೊಡಬೇಕು ಎನ್ನುವ ವಾದವನ್ನು ಯಾರೂ ಮಾಡಬಾರದು. ಶಾಂತಿಯಿಂದ ಸಮಾಜಕ್ಕೆ ಉಂಟಾಗುವ ಅನ್ಯಾಯವನ್ನು ಸರಿಪಡಿಸುತ್ತೇನೆ. ನಮ್ಮ ಸಮಾಜದವರು ತಾಳ್ಮೆ ಕಳೆದುಕೊಳ್ಳದೇ ಮೀಸಲಾತಿಗಾಗಿ ಶ್ರಮಪಡಬೇಕಾದುದು ಅತಿ ಅವಶ್ಯಕ ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಲವಾರು ಗಣ್ಯರು, ಸಂಸದರು, ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಟಿ. ಪಂಪಾಪತಿ, ದರೋಜಿ ರಮೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next