ಪೆಟ್ರೋಲ್ ಲೀಟರ್‌ಗೆ 111.09 ರೂ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಿದ್ದು, ಮತ್ತೆ ತಲಾ 35 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ಗೆ 111.09 ರೂ., ಡೀಸೆಲ್‌ಗೆ 101.78 ರೂ. ಆಗಿದೆ. ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ಗೆ 108.80 ರೂ. ಆಗಿದ್ದು, ಡೀಸೆ ಲ್‌ಗೆ 99.63 ರೂ. ಆಗಿದೆ.
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ
ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 15,981 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಶುಕ್ರವಾರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಹೊಸ ಜನಸಂಖ್ಯಾ ನೀತಿ ಜಾರಿಯಾಗಲಿ: ಭಾಗವತ್
ಜನಸಂಖ್ಯೆ ಬೆಳವಣಿಗೆ ದರ ವ್ಯತ್ಯಾಸಗಳಿಂದಾಗಿ “ಜನಸಂಖ್ಯಾ ಅಸಮತೋಲನ’ ಹೆಚ್ಚುತ್ತಿದೆ. ಇದನ್ನು ಸರಿಪಡಿಸಬೇಕಾದರೆ ದೇಶದಲ್ಲಿ ಹೊಸ “ಜನಸಂಖ್ಯಾ ನಿಯಂತ್ರಣ ನೀತಿ’ ಜಾರಿಯಾಗಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ರೈಲು ನಿಲ್ದಾಣದಲ್ಲಿ ಸ್ಫೋಟ: ಆರು ಸಿಆರ್ ಪಿಎಫ್ ಸಿಬ್ಬಂದಿಗೆ ಗಾಯ
ರಾಯ್ ಪುರದ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ನಡೆದ ಸ್ಪೋಟದಲ್ಲಿ ಆರು ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಆರ್ ಪಿಎಫ್ ನ 211 ಬೆಟಾಲಿಯನ್ ನ ಯೋಧರು ಇಂದು ಬೆಳಗ್ಗೆ ಜಮ್ಮುವಿಗೆ ವಿಶೇಷ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ಬಾಕ್ಸ್ ನಲ್ಲಿರಿಸಿದ್ದ ಡಿಟೋನೇಟರ್ಸ್ ಸ್ಪೋಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದಲ್ಲಿ ಮುಂದುವರಿದ ಅಟ್ಟಹಾಸ: ಹಿಂದೂ ದೇವಾಲಯ ಧ್ವಂಸ, ಓರ್ವ ಭಕ್ತನ ಸಾವು
ಇತ್ತೀಚೆಗಷ್ಟೇ ಹಿಂದೂ ದೇವಾಲಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದ ನೊಖಾಲಿ ಜಿಲ್ಲೆಯಲ್ಲಿ ಇಸ್ಕಾನ್ ದೇವಾಲಯದ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಡಿಕೆಶಿ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ಗುಸು ಗುಸು ಮಾತಿನ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಶನಿವಾರ ಹೊಸ ಬಾಂಬ್ ಸಿಡಿಸಿದ್ದು, ‘ಇದು ಸಿದ್ದರಾಮಯ್ಯನವರ ವ್ಯವಸ್ಥಿತವಾದ ಷಡ್ಯಂತ್ರ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನುಸ್ರತ್ ಜಹಾನ್ ಗೆ ಮದುವೆ ಆಗಿದೆಯೇ?.
ಬಂಗಾಳಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು ವಿಜಯದಶಮಿಯಂದು ಇನ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನೂ ಹಾಕಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದು, ಅದರಲ್ಲಿ ಅವರು ಬಂಗಾಳಿ ವಿವಾಹಿತ ಮಹಿಳೆಯರು ಧರಿಸುವ ಶಾಖಾ ಫೋಲ (ಬಿಳಿ, ಕೆಂಪು ಬಳೆ) ಧರಿಸಿದ್ದು ಕಂಡುಬಂದಿದ್ದು. ಈಗ ಆ ಫೋಟೋ ಭಾರಿ ಚರ್ಚೆಯಾಗುವ ಮುಲಕ ಇವರಿಗೆ ವಿವಾಹವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ
ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವ ಸಮಯ ಬಂದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸತತ ಪ್ರಯತ್ನದ ಫಲವಾಗಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.