ಉಡುಪಿ: ಉದ್ಯಾವರ ಸಂಪಿಗೆನಗರದಲ್ಲಿ ಸುಮಾರು 35 ಅಡಿ ಆಳದ ಬಾವಿಗೆ ಬಿದ್ದಿದ್ದ ಸಂಪಿಗೆನಗರದ ಶಶೀಂದ್ರ(54) ಅವರನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ್ದಾರೆ.
ಕಾಲುಜಾರಿ ಬಿದ್ದಿದ್ದ ಅವರು ಮೂಳೆಮುರಿತಕ್ಕೊಳಗಾಗಿ ನರಳಾಡುತ್ತಿದ್ದರು. ಸ್ಥಳೀಯರ ಮಾಹಿತಿಯಂತೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಎನ್. ಅವರ ಮಾರ್ಗದರ್ಶನದಂತೆ ಸಿಬಂದಿ ರವಿನಾಯ್ಕ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಣೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಣಮುಖರಾಗಿದ್ದಾರೆ. ರಕ್ಷಣ ಕಾರ್ಯಾಚರಣೆಯಲ್ಲಿ ಸಿಬಂದಿ ರಾಘವೇಂದ್ರ ಆಚಾರಿ, ತೌಸಿಫ್ ಅಹ್ಮದ್, ಗಣೇಶ್ ಎ., ಸಿದ್ದಿಕ್ ಸಹಕರಿಸಿದ್ದಾರೆ.
Advertisement