Advertisement

ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಯಲ್ಲಿ ಕೊಂಚ ಇಳಿಕೆ

10:00 AM Jan 26, 2018 | Karthik A |

ಮುಂಬಯಿ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ವಿಶೇಷವಾಗಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸವಾಲಾಗಿ ಕಾಡುತ್ತಿರುವ ಅನುತ್ಪಾದಕ ಆಸ್ತಿಯಲ್ಲಿ ಕೊಂಚ ಇಳಿಕೆಯಾಗಿದೆ. 2017ರ ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ತೈಮಾಸಿಕದಲ್ಲಿ ಅನುತ್ಪಾದಕ ಆಸ್ತಿಯಲ್ಲಿ 0.4ರಷ್ಟು ಇಳಿಕೆಯಾಗಿದೆ. 2015ರಲ್ಲಿ ಬ್ಯಾಂಕ್‌ಗಳು ಹೊಂದಿರುವ ಸಮಸ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿತ್ತು. ಇದರಿಂದಾಗಿ ಕಳೆದ ವರ್ಷದ ಸೆಪ್ಟೆಂಬರ್‌ ಮುಕ್ತಾಯಕ್ಕೆ ಅನುತ್ಪಾದಕ ಆಸ್ತಿಯ ಪ್ರಮಾಣ 9.46 ಲಕ್ಷ ಕೋಟಿ ರೂಗೆ ಇಳಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 2017ರ ಜೂನ್‌ ವೇಳೆಗೆ ಅನುತ್ಪಾದಕ ಆಸ್ತಿ ಮೊತ್ತ 9.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next