Advertisement

ಗೋವಾ ಬೀಚ್: ಬಂಡೆಗಳ ನಡುವೆ ಕಾಲು ಸಿಕ್ಕಿಬಿದ್ದು ಒದ್ದಾಡಿದ ಕುಂದಾಪುರ ಮೂಲದ ಯುವಕ

04:34 PM May 13, 2023 | Team Udayavani |

ಪಣಜಿ: ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಮಾಡುವ ಕೆಲವೊಂದು ಕೆಲಸ ತಮ್ಮ ಜೇವಕ್ಕೆ ಅಪಾಯ ತರುವಂತಿರುತ್ತದೆ ಅಂತಹುದೇ ಒಂದು ಘಟನೆ ಗೋವಾದ ಅಂಜುಣಾ  ಬೀಚ್ ನಲ್ಲಿ ಬೆಳಕಿಗೆ ಬಂದಿದೆ.

Advertisement

ಗೋವಾದ ಅಂಜುಣಾ ಕಡಲತೀರದಲ್ಲಿ ಯುವಕನೊಬ್ಬ ಸಾಹಸ ಮಾಡಲು ಹೋಗಿ ಎರಡು ಬಂಡೆಗಳ ನಡುವೆ ಕಾಲು ಸಿಲುಕಿಸಿಕೊಂಡಿದ್ದಾನೆ ಅನೇಕ ಪ್ರಯತ್ನಗಳ ಹೊರತಾಗಿಯೂ, ಯುವಕ ತನ್ನ ಕಾಲುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಕಲ್ಲುಗಳನ್ನು ಒಡೆದು ಯುವಕನನ್ನು ರಕ್ಷಿಸಿದ್ದಾರೆ.

ಯುವಕನನ್ನು ಆಲ್ವಿನ್ ಡಿಸೋಜಾ, (33 ವರ್ಷ) ಎಂದು ಗುರುತಿಸಲಾಗಿದೆ. ಇವರು ಕರ್ನಾಟಕ ಮೂಲದ ಉಡುಪಿ ಜಿಲ್ಲೆಯ ಕುಂದಾಪುರದವರು ಎನ್ನಲಾಗಿದೆ.

ಅಲ್ವಿನ್ ತನ್ನ ಸಹದ್ಯೋಗಿಗಳ ಜೊತೆ ಗೋವಾದ ಸಮುದ್ರ ತೀರಕ್ಕೆ ಬಂದಿದ್ದಾರೆ ಈ ವೇಳೆ ಆಲ್ವಿನ್ ಸಮುದ್ರದಲ್ಲಿ ಈಜುತ್ತಾ ಪಕ್ಕದಲ್ಲಿರುವ ಬಂಡೆ ಕಲ್ಲಿನ ಮೇಲೆ ಹತ್ತಿದ್ದಾನೆ ಈ ವೇಳೆ ಆತನ ಕಾಲು ಎರಡು ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದೆ ಎಷ್ಟೇ ಪ್ರಯತ್ನ ಪಟ್ಟರೂ ಕಾಲು ತೆಗೆಯಲು ಸಾಧ್ಯವಾಗಿಲ್ಲ ಬಳಿಕ ಗೆಳೆಯರು ಬಳಿಗೆ ಹೋಗಿ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ ಕೊನೆಗೆ ಅಗ್ನಿಶಾಮಕ ದಳಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಶಾಹಿದ್ ಖಾನ್, ಪ್ರೇಮಾನಂದ ಕಂಬಳಿ, ದತ್ತರಾಜ್ ಚಾರಿ, ಸನಿಲ್ ಬಾನಾವಳಿಕರ್, ಚಂದ್ರಕಾಂತ ನಾಯ್ಕ್, ದಿಪ್ತೇಶ್ ಗಾವಡೆ ತಂಡ ಸ್ಥಳಕ್ಕೆ ಆಗಮಿಸಿ ಕಲ್ಲು ಒಡೆದು ಬಂಡೆಯ ನಡುವೆ ಸಿಲುಕಿಕೊಂಡಿದ್ದ ಆಲ್ಟಿನ್ ರವರ ಕಾಲನ್ನು ಹೊರತೆಗೆದರು.

ಇದನ್ನೂ ಓದಿ: ಜನರ ತೀರ್ಮಾನಕ್ಕೆ ಬದ್ಧ; ಚುನಾವಣೆ ಸೋಲಿನ ಬಳಿಕ ಜಗದೀಶ ಶೆಟ್ಟರ್ ಪ್ರತಿಕ್ರಿಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next