Advertisement

ಮೈಕ್ರೋ ಪ್ಲಾಸ್ಟಿಕ್‌ ವಿರುದ್ಧ “ಯುದ್ಧ’ಅಗತ್ಯ

12:44 AM May 06, 2019 | Lakshmi GovindaRaj |

ಬೆಂಗಳೂರು: ನಮ್ಮ ಕಣ್ಣಿಗೇ ಕಾಣದ ಮೈಕ್ರೋ ಪ್ಲಾಸ್ಟಿಕ್‌ಕಣಗಳು ನಮ್ಮ ದೇಹವನ್ನು ಸೇರುತ್ತಿವೆ. ಇದನ್ನು ತಡೆಯಲು “ಯುದ್ಧ’ವೇ ನಡೆಸಬೇಕಿದೆ ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

Advertisement

ಅದಮ್ಯ ಚೇತನ ಸಂಸ್ಥೆ ಮೈಕ್ರೋ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ “ಅಗೋಚರ ಕೊಲೆಗಾರ- ಮೈಕ್ರೋ ಪ್ಲಾಸ್ಟಿಕ್‌ ವಿರುದ್ಧ ಹೋರಾಟ’ ಕಾರ್ಯಕ್ರಮದಲ್ಲಿ ಮತನಾಡಿದ ಅವರು, ಪ್ಲಾಸ್ಟಿಕ್‌ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪರಿಣಾಮವಾಗಿ 0.5 ಮಿ.ಮೀ ಗಿಂತ ಚಿಕ್ಕ ಪ್ಲಾಸ್ಟಿಕ್‌ಕಣಗಳು ದೇಹವನ್ನು ಸೇರುತ್ತಿವೆ ಎಂದರು.

ಇತ್ತೀಚೆಗೆ ಐಐಟಿ ನಡೆಸಿದ ಸಂಶೋಧನೆಯಲ್ಲಿ ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕ್‌ ಅಂಶವಿರುವುದು ಪತ್ತೆಯಾಗಿದೆ. ಮಿನರಲ್‌ ವಾಟರ್‌ ಬಾಟಲ್‌ಗ‌ಳಲ್ಲೂ ಮೈಕ್ರೋ ಪ್ಲಾಸ್ಟಿಕ್‌ ಇರುವುದು ಪತ್ತೆಯಾಗಿದೆ. ಹೀಗಾಗಿ, ಶುದ್ಧ ಕುಡಿಯುವ ನೀರು ಸಹ ಅಪಾಯಕಾರಿಯಾಗಿದೆ ಎಂದು ಹೇಳಿದರು. ಈ ಪ್ಲಾಸ್ಟಿಕ್‌ ರಾಕ್ಷಸನನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.

ಮೈಕ್ರೋ ಪ್ಲಾಸ್ಟಿಕ್‌ನ ಬಗ್ಗೆ ಯಾವುದೇ ಸಂಶೋಧನೆಗಳು ನಡೆದಿಲ್ಲ. ಇದರ ಮೇಲೆ ಸಂಶೋಧನೆಗಳು ನಡೆಯಬೇಕಿದೆ. ಇದರಿಂದ ಹೊರಬರುವ ಬಗ್ಗೆ ಚಿಂತಿಸಬೇಕಿದೆ. ಆಗ ಮಾತ್ರ ಸಾರ್ವಜನಿಕರಲ್ಲಿ ಅರಿವು ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಾಗೃತಿ ಕಾರ್ಯಕ್ರಮದ ನಂತರ ಅದಮ್ಯ ಚೇತನದ ಸದಸ್ಯರು ಲಾಲ್‌ಬಾಗ್‌ನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಶ್ರಮದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next