Advertisement

ಸಿಎಂಗೆ ಮನವಿಗಳ ಮಹಾಪೂರ

10:14 AM Dec 18, 2017 | Team Udayavani |

ಸೇಡಂ: ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಗಳ ಮಹಾಪೂರ ಹರಿದು ಬಂದಿದೆ. ಕೋಲಿ ಸಮಾಜ: ಕೋಲಿ ಸಮಾಜವನ್ನು ಕೂಡಲೇ ಎಸ್‌ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಭೀಮರಾವ ಅಳ್ಳೊಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

Advertisement

ಕರವೇ: ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಅಧ್ಯಕ್ಷ ಅಂಬರೀಶ ಊಡಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ತಾಲೂಕಿನ ಅನೇಕ ಹಳ್ಳಿಗಳ ಹೆಸರಿನ ಕೊನೆಯಲ್ಲಿ ತೆಲುಗು ಭಾಷೆಯ ಪಲ್ಲಿ ಎಂಬ ಶಬ್ದವಿದ್ದು, ಅದನ್ನು ತೆಗೆದು ಹಳ್ಳಿ ಎಂದು ಮರುನಾಮಕರಣ ಮಾಡಬೇಕು. ರಾಷ್ಟ್ರಕೂಟರ ಉತ್ಸವವನ್ನು ಹಂಪಿ ಮಾದರಿಯಲ್ಲಿ ಆಚರಿಸಬೇಕು. ಹಣಕಾಸು ಸಚಿವಾಲಯದಲ್ಲಿ ನನೆಗುದಿಗೆ ಬಿದ್ದಿರುವ ಆರ್‌ ಟಿಒ ಕಚೇರಿ ಆರಂಭಿಸಬೇಕು. ಸೇಡಂ ತಾಲೂಕನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಬಹುಜನ ಸಮಾಜ ಪಾರ್ಟಿ: ಬಹುಜನ ಸಮಾಜ ಪಾರ್ಟಿ ವತಿಯಿಂದ ಸಿಎಂಗೆ ಸಲ್ಲಿಸಿದ ಮನವಿಯಲ್ಲಿ ಕೋಡ್ಲಾ ಗ್ರಾಮದಲ್ಲಿ ಡಾ| ಅಂಬೇಡ್ಕರ್‌ ಪುತ್ಥಳಿ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಬೇಕು. ಕೋಡ್ಲಾದಲ್ಲಿ ನಡೆದ ನಡೆದ ಗಲಭೆಯಿಂದ ದಲಿತರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ಅನೇಕರ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು.

ಸಂಗಾವಿ (ಎಂ) ಗ್ರಾಮದಲ್ಲಿ ಕೊಲೆಯಾದ ಮಾರುತಿ ಎಂಬ ಯುವಕನ ಸಾವಿನ ಪ್ರಕರಣದ ಕಾರಣ ಕಂಡುಹಿಡಿದು ಪ್ರಕರಣವನ್ನು ಸಿಒಡಿಗೆ ಒಪ್ಪಿಸಬೇಕು. ರಾಜಶ್ರೀ ಸಿಮೆಂಟ್‌ ಕಾರ್ಖಾನೆ ವಿರುದ್ಧ ಸತತ ಎರಡು ವರ್ಷದಿಂದ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿರುವ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಪೋತಂಗಲ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ತಡೆಯಬೇಕು. ಸ್ಥಳೀಯ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು. ಭೂಮಿ ಇಲ್ಲದವರಿಗೆ 5 ಎಕರೆ ಭೂಮಿ ನೀಡಬೇಕು. ಚಿಂಚೋಳಿ ತಾಲೂಕಿನಲ್ಲಿ ಬಯೋ ಶುಗರ್‌ ಕಾರ್ಖಾನೆ ಪ್ರಾರಂಭಿಸಬೇಕು. ಚಿಂಚೋಳಿ ಪಟ್ಟಣದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ಸ್ಥಳ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ವಿದ್ಯಾಸಾಗರ ದುದ್ದೇಲಿ, ದೇವು ನಾಟೀಕಾರ, ಸಂಜಪ್ಪ ಮದನಾ, ಪುರಸಭೆ ಸದಸ್ಯ ರಾಜು ಕಾಳಗಿ, ಶಂಭುಲಿಂಗ ನಾಟೀಕಾರ, ಗೌತಮ ಬೊಮ್ನಳ್ಳಿ, ದಲಿತ ಮುಖಂಡ ವಿಲಾಸಗೌತಂ ನಿಡಗುಂದಾ, ಮಹಾವೀರ ಅಳ್ಳೊಳ್ಳಿ, ಪ್ರಶಾಂತ ಸೇಡಂಕರ್‌, ಸಿದ್ದು ಊಡಗಿ, ಗುರುನಾಥ ರಾತ್ರಿಕರ್‌, ಚಂದ್ರಕಾಂತ ತರನಳ್ಳಿ, ಶಿವಪುತ್ರಪ್ಪ ಮೋಘಾ, ಮಾರುತಿ ಗಂಜಗೇರಿ, ಮರೆಪ್ಪ ಹೊಸಳ್ಳಿ, ಸುರೇಶ ಚೌಹಾಣ, ಅರುಣ ಮುಡಬೂಳಕರ್‌, ಉಮೇಶ ಬೆಲ್ಲದ, ಗುಂಡಪ್ಪ ಕೋಡ್ಲಿ, ಶ್ರೀಕಾಂತ, ಹಣಮಂತ ನೇರಟ್ಟಿ, ಚಂದ್ರರೆಡ್ಡಿ, ಮಹಾದೇವ ನೇರಟ್ಟಿ, ಸೈಯ್ಯದ್‌ ಅಯುಬ್‌, ಮಹ್ಮದ್‌ ಖದೀರ್‌, ಟಿಪ್ಪು ಸುಲ್ತಾನ್‌, ಮೌನೇಶ ಕೊಡ್ಲಾ, ಶಿವಕುಮಾರ ಮಂತ್ರಿ, ಕಾಶಿರಾಯ ತೆಲ್ಕೂರ, ರವಿಕುಮಾರ ರಬ್ಬದ್‌, ಸಾಗರ ಕಲಕಮ್‌, ನಾಗರಾಜ ಕಲಬುರಗಿ, ಶಿವರುದ್ರ ದೇವನೂರ, ಭೀಮರಾಯ ಕೋಡ್ಲಾ, ಇಲಿಯಾಸ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next