Advertisement

ಅಗ್ನಿಪಥ್‌ ಯೋಜನೆ ಹಿಂಪಡೆಯಲು ಮನವಿ

01:18 PM Jun 25, 2022 | Team Udayavani |

ಬಸವಕಲ್ಯಾಣ: ಯುವಕರನ್ನು ನಾಲ್ಕು ವರ್ಷದ ನಂತರ ನಿರುದ್ಯೋಗಿಗಳನ್ನು ಸೃಷ್ಟಿಸುವ ಅಗ್ನಿಪಥ್‌ ಯೋಜನೆ ಬೇಕಾಗಿಲ್ಲ. ಜೀನವಪೂರ್ತಿ ಉದ್ಯೋಗ ದೊರಕುವಂತಹ ಯೋಜನೆ ರೂಪಿಸಬೇಕಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್‌ ಹೇಳಿದರು.

Advertisement

ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಅಗ್ನಿಪಥ್‌ ಯೋಜನೆ ವಿರುದ್ಧ ಕಾಂಗ್ರೆಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ನಮ್ಮ ಯೋಧರು ಸಶಕ್ತರಾಗಿದ್ದು, ಹಿಂದೆ ಅನೇಕ ಯುದ್ಧಗಳನ್ನು ಗೆದ್ದಿದ್ದಾರೆ. ಆದರೂ ಅಗ್ನಿಪಥ್‌ ಯೋಜನೆಯಿಂದ ನಾವಿನ್ಯತೆ ತಂದುಕೊಡುತ್ತೇನೆ ಎಂದು ಹೇಳಿ ಇತರೆ ಸೈನಿಕ ಮನೋಬಲ ಕುಗ್ಗಿಸಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಜನರು ಬದುಕು ದುರ್ಬಲವಾಗಿದೆ. ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ದೂರಿದರು.

ಮುಖಂಡ ಶಾಂತಪ್ಪ ಪಾಟೀಲ್‌, ಬಾಬು ಹೊನ್ನಾನಾಯಕ, ಮನೋಹರ ಮೈಸೆ, ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ನೀಲಕಂಠ ರಾಠೊಡ, ನಗರ ಘಟಕದ ಅಧ್ಯಕ್ಷ ಅಜರ ಅಲಿ ನವರಂಗ, ಕೇಶಪ್ಪ ಬಿರಾದಾರ್‌, ರೈಸೋದ್ಧಿನ್‌ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬೊಕ್ಕೆ, ರಾಮ ಜಾಧವ, ಯೋಗೇಶ ಗುತ್ತೆದಾರ, ಅಶೋಕ ಢಗಳೆ, ಡಿ.ಕೆ. ದಾವುದ್‌, ಆನಂದ ಹೊನ್ನನಾಯಕ, ಅಶೋಕ ಮದಾಳೆ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next