Advertisement

ಡೊನೇಷನ್‌ ಹಾವಳಿಗೆ ಕಡಿವಾಣ ಹಾಕಲು ಮನವಿ

05:40 PM Jun 17, 2022 | Team Udayavani |

ದೇವದುರ್ಗ: ತಾಲೂಕಿನ ಖಾಸಗಿ ಶಾಲೆಯಲ್ಲಿ ಡೊನೇಷನ್‌ ಹಾವಳಿ ಹೆಚ್ಚಿದೆ. ಶಿಕ್ಷಣ ಇಲಾಖೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ತಾಲೂಕು ಸಮಿತಿ ಪದಾಧಿಕಾರಿಗಳು ಇಸಿಒ ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದರು.

Advertisement

4ನೇ ತರಗತಿ ಮತ್ತು 6ನೇ ತರಗತಿಗೆ 12ರಿಂದ 14 ಸಾವಿರ ರೂ. ಡೊನೇಷನ್‌ ಪಡೆಯಲಾಗುತ್ತಿದೆ. ಬಡಕುಟುಂಬದ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ನೀಡಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಡೊನೇಷನ್‌ ಹಾವಳಿ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ಎಡವಿದೆ ಎಂದು ದೂರಿದರು.

ಮನಬಂದಂತೆ ಡೊನೇಷನ್‌ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿ ಪಾಲಕರು ಪ್ರವೇಶ ಪಡೆಯಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಡೊನೇಷನ್‌ ಹಾವಳಿ ಕುರಿತು ಹಲವು ಪಾಲಕರು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೋವಿಡ್‌ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ತರಗತಿಗಳು ಆರಂಭವಾಗಿಲ್ಲ. ಮನಬಂದಂತೆ ಡೊನೇಷನ್‌ ಪಡೆಯುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ಭಾಷಸಾಬ, ಮಾಳಪ್ಪ, ಪಕರಣ್ಣ ಮದರಕಲ್‌, ಸತೀಶ, ಮೈಬೂಬ ಪಲಕನಮರಡಿ, ಹನುಮಂತ ಗಲಗ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next