Advertisement

ಸರ್ಕಾರದ ಭೂಮಿ ಉಳಿಸಲು ಮನವಿ

12:20 PM Aug 08, 2018 | |

ಮಹದೇವಪುರ: ಯುವ ಪೀಳಿಗೆಯ ಹಿತದೃಷ್ಟಿಯಿಂದ ಸರ್ಕಾರದ ಭೂಮಿಯನ್ನು ಉಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಗ್ರಾಪಂ ಅಧ್ಯಕ್ಷೆ ಜ್ಯೋತಿ ಹೇಳಿದರು. ಕ್ಷೇತ್ರದ ಅವಲಹಳ್ಳಿ ಗ್ರಾಪಂ ವತಿಯಿಂದ ವೀರೆನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ನಗರ ಪ್ರದೇಶ ವ್ಯಾಪ್ತಿಯಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ರುದ್ರಭೂಮಿಗಳಿಗೆ ಜಾಗದ ಕೊರತೆ ಉಂಟಾಗುತ್ತಿದೆ. ಹಾಗಾಗಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಸರ್ಕಾರ ಅಂಗ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಬದಲು ಸಾರ್ವಜನಿಕರ ಹಿತದೃಷ್ಟಿಯಿಂದ ರುದ್ರಭೂಮಿ ಇಲ್ಲವೆ ಕ್ರೀಡಾ ಮೈದಾನಗಳಿಗೆ ಮೀಸಲಿಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಬಹುದಿನಗಳ ಬೇಡಿಕೆಯಾಗಿರುವ ಚೀಮಸಂದ್ರ ಎಸ್ಸಿ ಮತ್ತು ಎಸ್ಟಿ ವರ್ಗದವರ ರುದ್ರಭೂಮಿಯನ್ನು ಬಿಎಂಟಿಸಿ ಗುತ್ತಿಗೆ ಪಡೆದಿದ್ದು ಅದನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಕವಿತಾ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ.

ಈ ಬಗ್ಗೆ ಸಾರ್ವಜನಿಕರು ಏಚ್ಚೇತ್ತುಕೊಳ್ಳಬೇಕು. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ 1098 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು. ತಾಪಂ ಸದಸ್ಯೆ ಶಶಿಕಲಾ, ಗ್ರಾಪಂ ಉಪಧ್ಯಕ್ಷೆ ಶಾಂತಮ್ಮ ಶಿವಣ್ಣ, ಸದ್ಯಸರಾದ ಜಬೀನಾ ಕೃಷ್ಣ, ಸಿದ್ದೇಶ್‌, ನಾಗಭೂಷಣ್‌,  ಪಿಡಿಒ ಮಮತಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next