Advertisement
ಮತದಾರರ ಪಟ್ಟಿ ದೋಷಪೂರಿತಬೆಳ್ತಂಗಡಿ ತಾಲೂಕಿನಲ್ಲಿ 2,500 ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಯಲ್ಲಿ ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗಾಗಲೇ ಸರಕಾರಿ ನೌಕರರ ಸಂಘಕ್ಕೆ ಚುನಾವಣೆ ಘೋಷಣೆಯಾಗಿ ಜೂ.3 ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಆದರೆ ಮತದಾರರ ಪಟ್ಟಿ ದೋಷಪೂರಿತವಾಗಿದ್ದು, ಎಲ್ಲ ಸರಕಾರಿ ನೌಕರರಿಗೆ ಮಾಹಿತಿ ನೀಡದೆ ಚುನಾ ವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಸರಿಪಡಿಸಿ ಎಲ್ಲ ಸರಕಾರಿ ನೌಕರರಿಗೆ ಚುನಾವಣೆ ಮಾಹಿತಿ ನೀಡುವಂತೆ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿಯಾಗಿ ನೇಮಕ ಗೊಂಡ ಬಾಲಸುಬ್ರಹ್ಮಣ್ಯ ಅವರಿಗೆ ನೌಕರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.