Advertisement
2013ರಲ್ಲಿ ತಾಲೂಕು ಘೋಷಣೆ2013ರ ಫೆ. 8ರಂದು ಅಂದಿನ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ ಬಜೆಟ್‌ನಲ್ಲಿ ಬ್ರಹ್ಮಾವರ ಸೇರಿ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ಆದರೆ ಅನುಷ್ಠಾನವಾಗದೆ ನನೆಗುದ್ದಿಗೆ ಬಿದ್ದಿತ್ತು. 2017ರಲ್ಲಿ ಮತ್ತೆ ಹೊಸ 6 ತಾಲೂಕುಗಳೊಂದಿಗೆ 49 ತಾಲೂಕುಗಳು ಘೋಷಣೆಗೊಂಡಿದ್ದು, ಅನುಷ್ಠಾನಗೊಂಡಿತ್ತು. ಆದರೆ ಈವರೆಗೂ ಪ್ರತ್ಯೇಕ ತಾ.ಪಂ. ಕಚೇರಿ ಪ್ರಾರಂಭಿಸಿಲ್ಲ. ಕೇವಲ ತಹಶೀಲ್ದಾರ್ ಹುದ್ದೆ ಮಾತ್ರ ಸೃಷ್ಟಿಸಲಾಗಿತ್ತು.
2020ನೇ ಜನವರಿಯಲ್ಲಿ ಬ್ರಹ್ಮಾವರ ಐಬಿ ಸಮೀಪದ ಮಿನಿ ವಿಧಾನಸೌಧ ಶಂಕು ಸ್ಥಾಪನೆಯನ್ನು ಮಾಡಲಾಗಿತ್ತು. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ತಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಯೋಜನೆ ರೂಪಿಸಲು ಶಾಸಕ ಕೆ. ರಘುಪತಿ ಭಟ್ ಆದೇಶ ನೀಡಿದ್ದಾರೆ. ತಾತ್ಕಾಲಿಕ ಕಚೇರಿಯನ್ನು ವಾರಂಬಳ್ಳಿ ಪಂಚಾಯತ್ ಕಟ್ಟಡದಲ್ಲಿ ತೆರೆಯಲು ಸಿದ್ಧಗೊಂಡಿತ್ತಾದರೂ, ಜನಪ್ರತಿನಿಧಿಗಳು ಸ್ಥಳಾವಕಾಶದ ಕೊರತೆ ಕಾರಣ ವೊಡ್ಡಿ ಬ್ರಹ್ಮಾವರದ ಹಳೆಯ ಸಮು ದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಪ್ರಾರಂಭಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ. ಹೊಸ ತಾ.ಪಂ.ಗೆ 14 ಹುದ್ದೆ
ಹೊಸ ಬ್ರಹ್ಮಾವರ ತಾ.ಪಂ.ಗೆ ಸರಕಾರದಿಂದ ತಾ.ಪಂ. ಆಡಳಿತಾಧಿಕಾರಿ-1, ಇಒ-1, ತಾಲೂಕು ಯೋಜನಾಧಿಕಾರಿ-1, ಸಹಾಯಕ ನಿರ್ದೇಶಕ-1, ಕಿರಿಯ ಎಂಜಿನಿಯರ್-1, ಪ್ರಥಮ ದರ್ಜೆ ಸಹಾಯಕರು-2, ದ್ವಿತೀಯ ದರ್ಜೆ ಸಹಾಯಕ-2, ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್- 2, ವಾಹನ ಚಾಲಕ-1, ಡಿ ಗ್ರೂಪ್‌ಗೆ- 2 ಹುದ್ದೆ ಸೇರಿ 14 ಹುದ್ದೆಗಳು ಮಂಜೂರಾಗಿವೆೆ. ಬ್ರಹ್ಮಾವರದ ಬಿಇಒ ಒಆರ್ ಪ್ರಕಾಶ ಅವರನ್ನು ಡೆಪ್ಯುಟೇಶನ್ ಮೇಲೆ ಕಾರ್ಯ ನಿರ್ವಹಣಾಧಿ ಕಾರಿಯಾಗಿ ನೇಮಕ ಮಾಡಲಾಗಿದೆ. ತಾ.ಪಂ. ಅಧ್ಯಕ್ಷ ಮೀಸಲಾತಿ ಪಟ್ಟಿ ಬಿಡುಗಡೆಯಾಗಿಲ್ಲ.
Related Articles
ಬ್ರಹ್ಮಾವರ ಹೊಸ ತಾ.ಪಂ. ಕಚೇರಿ ಜೂ. 1ರಿಂದ ಕಾರ್ಯಾರಂಭವಾಗಬೇಕಿತ್ತು. ಆದರೆ ತಾ.ಪಂ.ಗೆ ಹುದ್ದೆಗಳು ಮಂಜೂರಾಗಿದೆ ವಿನಾ ನೇಮಕಾತಿಯಾಗಿಲ್ಲ. ಪ್ರಸ್ತುತ ಪಿಡಿಒ, ಕಾರ್ಯದರ್ಶಿಗಳನ್ನು ಡೆಪ್ಯುಟೇಶನ್ ಮೇಲೆ ಕೆಲಸ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ ಅಧಿಕಾರಿ ಕೆಲಸ ಮಾಡಲು ಮುಂದೆ ಬಾರದೆ ಇರುವುದರಿಂದ ತಾ.ಪಂ. ಕಚೇರಿ ಕಾರ್ಯಾ ರಂಭಕ್ಕೆ ಹಿನ್ನಡೆಯಾಗಿದೆ.
Advertisement
1985ರಲ್ಲಿ ಶಿಫಾರಸ್ಸು!ಐತಿಹಾಸಿಕ ಹಿನ್ನೆಲೆಯುಳ್ಳ ಬ್ರಹ್ಮಾವರವನ್ನು ಪ್ರತ್ಯೇಕ ತಾಲೂಕು ಮಾಡಲು 1985-86ರಲ್ಲಿಯೇ ಶಿಫಾರಸ್ಸಾಗಿತ್ತು. ವಾಸುದೇವ ರಾವ್ ಸಮಿತಿ ಹಾಗೂ ಗದ್ದಿಗೌಡರ್, ಹುಂಡೇಕರ್ ಸಮಿತಿಯಲ್ಲಿ ಬ್ರಹ್ಮಾವರ ತಾಲೂಕಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ಪರಿಣಾಮ 2003ರ ಸೆ. 8ರಂದು ಬ್ರಹ್ಮಾವರಕ್ಕೆ ವಿಶೇಷ ತಹಶೀಲ್ದಾರ್ ನೇಮಕವಾಗಿತ್ತು. 2008ರ ಎಂ.ಬಿ. ಪ್ರಕಾಶ್ ಸಮಿತಿ ಬ್ರಹ್ಮಾವರವನ್ನು ಕೈಬಿಟ್ಟಿತ್ತು.
ವಾರಂಬಳ್ಳಿ ಗ್ರಾ.ಪಂ.ನಲ್ಲಿ ಸ್ಥಳಾವಕಾಶ ಕೊರತೆಯಿಂದಾಗಿ ಬ್ರಹ್ಮಾವರ ತಾ.ಪಂ. ಸದಸ್ಯರು ಕಚೇರಿಯನ್ನು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತೆರೆಯುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಡಿಎಚ್‌ಒಗೆ ಪತ್ರ ಬರೆಯಲಾಗಿದೆ. ಬ್ರಹ್ಮಾವರ ತಾ.ಪಂ. ಉಡುಪಿ ತಾ.ಪಂ.ನಿಂದ ವಿಂಗಡಣೆಯಾಗಿದೆ. ಅಗತ್ಯವಿರುವ ಹಣಕಾಸು ಬರುತ್ತಿದೆ. ಜೂನ್ ಅಂತ್ಯ ದಲ್ಲಿ ಕಚೇರಿ ಪ್ರಾರಂಭ ವಾಗಲಿದೆ.
-ಕೆ.ರಘುಪತಿ ಭಟ್, ಶಾಸಕ