Advertisement

ತೈಲ ಬೆಲೆ ಇಳಿಸಲು ಒತ್ತಾಯಿಸಿ ಮನವಿ

11:41 AM Jul 07, 2020 | Suhan S |

ಹುಣಸಗಿ: ಪೆಟ್ರೋಲ್‌-ಡೀಸೆಲ್‌ ಬೆಲೆ ಇಳಿಸುವಂತೆ ಒತ್ತಾಯಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ವಿನಯಕುಮಾರ ಪಾಟೀಲ ಅವರಿಗೆ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ನಾಗಣ್ಣ ಸಾಹುಕಾರ ದಂಡಿನ, ಕೇಂದ್ರ ಸರಕಾರದ ಪೆಟ್ರೋಲ್‌ -ಡೀಸೆಲ್‌ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಬರೆ ಬಿದ್ದಂತಾಗಿದೆ ಎಂದು ಹೇಳಿದರು. ಕಳೆದ ಆರು ತಿಂಗಳಿಂದ ಪೆಟ್ರೋಲ್‌ ಪ್ರತಿ ಲೀಟರ್‌ಗೆ 23.78 ಪೈಸೆ, ಡೀಸೆಲ್‌ 28.37 ಪೈಸೆ ಏರಿಕೆಯಾಗಿದೆ. ಇದು ಪ್ರತಿಶತದಲ್ಲಿ ಲೆಕ್ಕ ಹಾಕಿದರೆ ಶೇ. 258% ಪೆಟ್ರೋಲ್‌, ಶೇ. 820ರಷ್ಟು ಡೀಸೆಲ್‌ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಕೋವಿಡ್‌-19 ಇಂದಾಗಿ ಜನರು ತತ್ತರಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಪೆಟ್ರೋಲ್‌-ಡೀಸೆಲ್‌ ಬೆಲೆ ಜನಸಾಮಾನ್ಯರಿಗೆ ಹೊರೆಯಾಗಿದೆ. ತಕ್ಷಣವೇ ತೈಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದಿಗೌಡ(ಗೌಡಪ್ಪಗೌಡ) ಹಣಮರೆಡ್ಡಿ, ಸಿದ್ದಣ್ಣ ಮಲಗಲದಿನ್ನಿ, ಗುರುಲಿಂಗಪ್ಪ ಸಜ್ಜನ, ಚನ್ನಯ್ಯಸ್ವಾಮಿ ಹಿರೇಮಠ, ಈರಣ್ಣ ದೇಸಾಯಿ, ಪಪಂ ಸದಸ್ಯ ನಾಗಯ್ಯಸ್ವಾಮಿ ದೇಸಾಯಿಗುರು, ಖಾಜಾ ಪಟೇಲ್‌, ಶಾಂತಪ್ಪ ಬಾಕ್ಲಿ, ಭೀಮಣ್ಣ ನಾಟೇಕರ್‌, ಮಲ್ಲಣ್ಣ ಕಟ್ಟಿಮನಿ, ಕನಕಪ್ಪ ದೊರಿ, ತಿರುಪತಿ ನಾಯ್ಕ, ರವಿ ಮಲಗಲದಿನ್ನಿ, ಸಿದ್ದನಗೌಡ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next