Advertisement

ಇನಾಂದಾರ ವರ್ಗಾವಣೆ ರದ್ದುಪಡಿಸಲು ಆಗ್ರಹ

12:59 PM Jan 25, 2022 | Team Udayavani |

ಜೇವರ್ಗಿ: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ಅವರನ್ನು ಜೇವರ್ಗಿಯಿಂದ ಯಾದಗಿರಿ ಜಿಲ್ಲೆ ಡಯಟ್‌ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆ ಮಾಡಿರುವುದನ್ನು ತಕ್ಷಣ ರದ್ದುಗೊಳಿಸಬೇಕು. ಇನಾಂದಾರ ಅವರು ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವೂ ಪೂರ್ಣಗೊಂಡಿಲ್ಲ. ಇನಾಂದಾರ ಅಧಿಕಾರ ವಹಿಸಿಕೊಂಡ ನಂತರ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುವಂತೆ ನೋಡಿಕೊಂಡಿದ್ದಾರೆ. ಕೆಲವು ಜನ ಶಿಕ್ಷಕರು ಶಾಲೆಗಳಿಗೆ ತೆರಳದೇ ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿದ್ದಾರೆ ಎಂದರು.

ಶಿಕ್ಷಣ ಅದಾಲತ್‌ ಮೂಲಕ ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಕರ ನಡೆ ಮಕ್ಕಳ ಗುಣಾತ್ಮಕ ಶಿಕ್ಷಣದ ಕಡೆ ಎಂಬ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಶಿಕ್ಷಣ ಅದಾಲತ್‌ದಿಂದ ಶಿಕ್ಷಕರ ಸುಮಾರು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅನಗತ್ಯ ಶಿಕ್ಷಕರ ಅಲೆದಾಟ ತಪ್ಪಿಸಿದ್ದಾರೆ. ಆದ್ದರಿಂದ ಇಂತಹ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ಡಿಎಸ್‌ ಎಸ್‌ ತಾಲೂಕು ಘಟಕ ಖಂಡಿಸುತ್ತಿದ್ದು, ತಕ್ಷಣ ಅವರ ವರ್ಗಾವಣೆ ರದ್ದುಪಡಿಸಿ ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮುಂದುವರೆಸಬೇಕು ಎಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.

ಡಿಎಸ್‌ಎಸ್‌ ತಾಲೂಕು ಸಂಚಾಲಕ ಸಿದ್ರಾಮ ಕಟ್ಟಿ ಕೋಳಕೂರ, ಶಿವಕುಮಾರ ಹೆಗಡೆ, ಬಸವರಾಜ ಕಟ್ಟಿ, ಮರೆಪ್ಪ ಆಂದೋಲಾ, ಶ್ರೀನಾಥ ಕಟ್ಟಿಸಂಗಾವಿ, ದೇವರಾಜ ಕಟ್ಟಿಮನಿ, ಅಶೋಕ ಹರವಾಳ, ಕಲ್ಲಪ್ಪ ಪೂಜಾರಿ ರಾಸಣಗಿ, ಲಕ್ಷ್ಮಣ ಡೊಳ್ಳೆ, ನಿಂಗಣ್ಣ ಧರೇನ್‌ ಸೊನ್ನ, ಪ್ರಭುನಂದ ಕಟ್ಟಿಮನಿ, ದೇವರಾಜ ಬಣಮಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next