Advertisement

ಶಿರಸಿ: ಬಸ್ ಸೌಲಭ್ಯ ಒದಗಿಸುವಂತೆ ಗ್ರಾ.ಪಂ.ಗೆ ಪೋಷಕರ ಮನವಿ

03:26 PM Jun 29, 2022 | Team Udayavani |

ಶಿರಸಿ: ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್‌ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಬಸ್ ಸೌಲಭ್ಯ ಒದಗಿಸಲು ಮನವಿ ಮಾಡುವಂತೆ ವಿದ್ಯಾರ್ಥಿಗಳ ಪೋಷಕರು ಇಂದು (ಜೂನ್ 29)‌ ಪಂಚಾಯತ್‌ ಗೆ ಭೇಟಿ ನೀಡಿ ವಿನಂತಿಸಿಕೊಂಡರು.

Advertisement

ಬಿಸಲಕೊಪ್ಪ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಬಿಸಲಕೊಪ್ಪದಿಂದ ಬಸ್ ನಲ್ಲಿ ನಗರಕ್ಕೆ ಬರುವ ಅನಿವಾರ್ಯತೆ ಇದೆ.

ಹಾವೇರಿ ಹಾಗೂ ಹುಬ್ಬಳ್ಳಿ ಮಾರ್ಗದಿಂದ ಬರುವ ಬಸ್ ಗಳು ಆ ಕಡೆಯಿಂದ ಬರುವಾಗಲೇ ಪುಲ್ ರಶ್ ಆಗಿ ಬರುವುದರಿಂದ ಮುಂದಿನ ನಿಲ್ದಾಣಗಳಲ್ಲಿ ಬಸ್‌ ನಲ್ಲಿ ಸ್ಥಳವಕಾಶ ಇಲ್ಲದೆ ಕೆಲವು ಬಸ್ ಗಳು ಸ್ಟಾಪ್ ನೀಡುತ್ತಿಲ್ಲ. ಶಾಲಾ- ಕಾಲೇಜುಗಳು ಮುಂಜಾನೆ 9.30ಕ್ಕೆ ಆರಂಭವಾಗುವುದರಿಂದ ವಿದ್ಯಾಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ  ಬಿಸಲಕೊಪ್ಪಕ್ಕೆ ಬೆಳಿಗ್ಗೆ 8.30 ಕ್ಕೆ ಪರ್ಯಾಯ ಬಸ್ ಸೌಲಭ್ಯ ಓದಗಿಸಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಪೋಷಕರು ಮನವಿಯಲ್ಲಿ ವಿನಂತಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುನೀಲ್ ನಾಯ್ಕ, ವಿ.ಎಮ್. ಬೈಂದೂರು, ಮಹಾಬಲೇಶ್ವರ ಹೆಬ್ಬಳ್ಳಿ, ಪ್ರಶಾಂತ ನಾಯ್ಕ, ಬಸ್ತಾಂವ್ ಲೊಪಿಸ್, ಮಂಜು ನಾಯ್ಕ, ಸದಾನಂದ ನಾಯ್ಕ ಸೇರಿದಂತೆ ಇನ್ನಿತರರು ಹಾಜರಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next