Advertisement

ಜವಳಿ ವ್ಯಾಪಾರಕ್ಕೂ ಅನುಮತಿಸಲು ಮನವಿ

07:14 PM Jun 16, 2021 | Girisha |

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ ಸಡಿಲಿಕೆ ಸಂದರ್ಭದಲ್ಲಿ ಬಟ್ಟೆ ಅಂಗಡಿ ವ್ಯಾಪಾರಕ್ಕೆ ಅನುಮತಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವಿಜಯಪುರ ಜವಳಿ ವ್ಯಾಪಾರಸ್ಥರ ಸಂಘದಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜವಳಿ ವ್ಯಾಪಾರಿಗಳು, ಸರ್ಕಾರದ ಕೋವಿಡ್‌ ಮಾರ್ಗಸೂಚಿ ಪ್ರಕಾರ ಮಾರುಕಟ್ಟೆಯಲ್ಲಿ ಕೆಲವು ಅಂಗಡಿ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಆದರೆ ಬಟ್ಟೆ ಅಂಗಡಿ ಆರಂಭಕ್ಕೆ ಅನುಮತಿಸಿಲ್ಲ. ಕಳೆದ ವರ್ಷ 2020 ಅತಿ ಹೆಚ್ಚು ವ್ಯಾಪಾರ ವಿರುವ ಸಮಯ ಏಪ್ರಿಲ್‌, ಮೇ ತಿಂಗಳಲಿನಲ್ಲಿ ಲಾಕ್‌ಡೌನ್‌ ವಿ ಧಿಸಿದ್ದರಿಂದ ವ್ಯಾಪಾರ ಕಳೆದುಕೊಂಡಿದ್ದೆವೆ. ಪ್ರಸಕ್ತ ವರ್ಷವೂ ಅದೇ ರೀತಿಯಾಗಿ ನಾವು ವ್ಯಾಪಾರ ಕಳೆದುಕೊಂಡು ಜವಳಿ ವ್ಯಾಪಾರಿಗಳು ಕಷ್ಟದಲ್ಲಿದ್ದೇವೆ ಎಂದು ಸಮಸ್ಯೆ ನಿವೇದಿಸಿಕೊಂಡರು. ಕಷ್ಟದಲ್ಲಿರುವ ಜವಳಿ ವ್ಯಾಪಾರಿಗಳಿಗೆ ಸರಕಾರದಿಂದ ಯಾವುದೇ ಸಹಾಯವಾಗಿಲ್ಲ.

ಲಾಕ್‌ ಡೌನ್‌ ಆದರೂ ಅಂಗಡಿ ಬಾಡಿಗೆ, ಕರೆಂಟ್‌ ಬಿಲ್‌, ಮಹಾನಗರ ಪಾಲಿಕೆಯ ತೆರಿಗೆ, ನೀರಿನ ಕರ, ಬ್ಯಾಂಕ್‌ನ ಸಾಲ-ಬಡ್ಡಿ ಹೀಗೆ ಎಲ್ಲವನ್ನೂ ಪಾವತಿಸಿದ್ದೇವೆ. ಜವಳಿ ಸಂಘದಡಿ ದುಡಿಯುವವರಿಗೆ ಸರಕಾರ ಪ್ಯಾಕೇಜ್‌ ಘೋಷಿಸಿಲ್ಲ, ಯಾವುದೇ ಆರ್ಥಿಕವಾಗಿ ಅನುಕೂಲ ಕಲ್ಪಿಸದಿದ್ದರೂ ನಾವೇ ಸಂಬಳ ನೀಡಿದ್ದೇವೆ ಎಂದು ಕಷ್ಟಗಳನ್ನು ವಿವರಿಸಿದರು.

ಆದ್ದರಿಂದ ಸರ್ಕಾರ ಜವಳಿ ವ್ಯಾಪಾರಿಗಳಿಗೆ ವಾರದಲ್ಲಿ ಮೂರು ದಿನವಾದರೂ ವ್ಯಾಪಾರ ಮಾಡಲು ಅನುಮತಿ ನೀಡಬೇಕು. ದಿನಸಿ ಅಂಗಡಿಗಳಿಗೂ ಮೂರು ದಿನ ವ್ಯಾಪಾರಕ್ಕೆ ಅನುಮತಿ ನಿಗದಿ ಮಾಡಬೇಕು. ದಿನಸಿ ವ್ಯಾಪಾರಸ್ಥರಿಗೆ ಬೆಳಗ್ಗೆ 6ರಿಂದ 10ರವರೆಗೆ, ಹಾಗೆ ನಮಗೆ ಬಟ್ಟೆ ವ್ಯಾಪಾರಸ್ಥರಿಗೆ ಬೆಳಗ್ಗೆ 10ರಿಂದ 3ರವರೆಗೆ ಅನುಮತಿ ನೀಡಿ ಎಂದು ಮನವಿಯಲ್ಲಿ ಕೋರಿದರು. ಜವಳಿ ವ್ಯಾಪಾರಸ್ತರ ಸಂಘದ ಅಧ್ಯಕ್ಷ ಗೋಪಾಲ ಮಹೇಂದ್ರಕರ, ವಿಕಾರ ದರಬಾರ, ವಿಶ್ವನಾಥ ಬೀಳಗಿ, ಮಹೇಶ ಭಾವಿ, ಪ್ರದೀಪ ಮೊಗಲಿ, ಸಾಗರ ಮೊಗಲಿ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next