ಮೂಡಲಗಿ: ಅರಭಾಂವಿ ಮತಕ್ಷೇತ್ರದ ಕಲ್ಲೋಳಿ ಪಪಂ ಚುನಾವಣೆ ಡಿ. 27 ರಂದು ನಡೆದ ನಂತರ ಮೂಡಲಗಿ ಶ್ರೀ ಶಿವಬೋಧರಂಗ ಕಾಲೇಜಿನ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾದ ಮತಯಂತ್ರಗಳು ಬದಲಾವಣೆಯಾಗಿವೆ. ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕಲ್ಲೋಳಿ ಪಪಂ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿ ಚುನಾವಣೆ ಅಕ್ರಮವಾಗಿದೆ ಎಂಬ ಸಂಶಯವಿದ್ದು, ಡಿ.27ರಿಂದ ಸಂಜೆ 6 ಗಂಟೆಯಿಂದ ಡಿ.30ರ ಮಧ್ಯಾಹ್ನ 12 ಗಂಟೆವರೆಗೆ ಸ್ಟ್ರಾಂಗ್ ರೂಮ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಫೂಟೇಜ್ ನೀಡುವಂತೆ ತಹಶೀಲ್ದಾರ್‌ಗೆ ಒತ್ತಾಯಿಸಿದರು.
ಮತದಾರರ ಹೆಸರು ಒಂದು ವಾರ್ಡ್‌ನಿಂದ ಮತ್ತೂಂದು ವಾರ್ಡ್ ಗೆ ಸೇರ್ಪಡೆ ಆಗಿದ್ದ ಬಗ್ಗೆ ಬಿಎಲ್‌ಒ ಗಮನ ಸೆಳೆದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಸಿಸಿ ಕ್ಯಾಮೆರಾ ಫೂಟೇಜ್ ಬಗ್ಗೆ ಬೇಗ ಮಾಹಿತಿ ಸಿಗಬೇಕು. ಇಲ್ಲದಿದ್ದರೆ ಮುಂದಿನ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಮುಖ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಅಜಿತ ಬೆಳಕೂಡ ಎಚ್ಚರಿಸಿದರು.
ಪ್ರಭು ಕಡಾಡಿ, ಅಶೋಕ ಮಕ್ಕಳಗೇರಿ, ಶಿವಪ್ಪ ಬಿ. ಪಾಟೀಲ, ಧರೇಪ್ಪ ಖಾನಗೌಡ, ಅಕ್ಷತಾ ಹೂಗಾರ, ಗೀತಾ ನೀಲಪ್ಪ ಮುಂಡಿಗನಾಳ, ಭಾಗ್ಯಶ್ರೀ ಆಡಿನವರ, ಪಾರ್ವತಿ ಚೌಗಲಾ, ಉಮೇಶ ಬಿ. ಪಾಟೀಲ, ಬಸವರಾಜ ಭಜಂತ್ರಿ, ರೇಣುಕಾ ಇಮ್ಮಡೇರ, ಹಣಮಂತ ಸಂಗಟಿ, ಈರಣ್ಣ ಮೂನೊಳಿಮಠ, ಭೀಮರಾಯ ಕಡಾಡಿ, ಶಿವಾನಂದ ಹೆಬ್ಟಾಳ, ಮಲ್ಲೇಶ ಗೋರೋಶಿ, ಶಿವಾನಂದ ಕಡಾಡಿ, ರಾಮಲಿಂಗ ಪಾಟೀಲ, ಕೃಷ್ಣಾ ಮುಂಡಿಗನಾಳ, ಗೂಳಪ್ಪ ವಿಜಯನಗರ ಇನ್ನಿತರರಿದ್ದರು.