Advertisement

ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಮನವಿ

11:42 AM Jan 08, 2019 | Team Udayavani |

ತುಮಕೂರು: ಬೆಂಗಳೂರಿನಿಂದ ತುಮಕೂರಿಗೆ ರಾತ್ರಿ 8 ಗಂಟೆಗೆ ಒಂದು ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಅನುವಾಗುವಂತೆ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತುಮಕೂರು ಸಂಸದ ಎಸ್‌.ಪಿ.ಮುದ್ದ ಹನುಮೇಗೌಡ ಅವರನ್ನು ರೈಲ್ವೆ ಪ್ರಯಾಣಿಕರ ವೇದಿಕೆ ಮನವಿ ಮಾಡಿದೆ. 

Advertisement

ಸಂಸದರ ಹೆಬ್ಬೂರು ನಿವಾಸದಲ್ಲಿ ಭೇಟಿ ಮಾಡಿದ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ರಾತ್ರಿ ರೈಲು ಆರಂಭದಿಂದ ತುಮಕೂರಿನ ಪ್ರಯಾಣಿಕರಿಗಷ್ಟೇ ಅಲ್ಲದೇ, ಬೆಂಗಳೂರು-ತುಮಕೂರು ನಡುವಿನ ಗ್ರಾಮಗಳ ಸಾವಿರಾರು ಜನರಿಗೆ ಅನುಕೂಲವಾಗ ಲಿದೆ ಎಂದು ಮನವರಿಕೆ ಮಾಡಿಕೊಟ್ಟರು. 

ಎಲ್ಲರಿಗೂ ಅನುಕೂಲ: ಸಂಜೆ 6.20 ರ ನಂತರ ಬೆಂಗಳೂರಿನಿಂದ ತುಮಕೂರಿಗೆ ಇರುವ ಪ್ಯಾಸೆಂಜರ್‌ ರೈಲು ಬಿಟ್ಟರೆ ಮತ್ತೆ ರಾತ್ರಿ 11 ಗಂಟೆ ಯವರೆಗೆ ಪ್ಯಾಸೆಂಜರ್‌ ರೈಲಿನ ಅನುಕೂಲವಿಲ್ಲ. ಇದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರಾತ್ರಿ ರೈಲು ಆರಂಭದಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು. 

ಮನವಿ: ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಮತ್ತು ವಾಣಿಜ್ಯ ವಹಿವಾಟು ನಗರವಾಗಿರುವ ತುಮಕೂರಿಗೆ ಉಪನಗರ ರೈಲು ಯೋಜನೆಯನ್ನು ಎರಡನೇ ಹಂತಕ್ಕೆ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮೊದಲ ಹಂತದಲ್ಲೇ ತುಮಕೂರು ನಗರವನ್ನು ಸೇರಿಸಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.
 
ಲಿಫ್ಟ್ ಅಳವಡಿಕೆಗೆ ಯೋಜನೆ: ತುಮಕೂರು ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಇದ್ದು, ಇದಕ್ಕೆ ರ್‍ಯಾಂಪ್‌ ಅಳವಡಿಸದೇ ನಿರ್ಲಕ್ಷಿಸಲಾಗಿದೆ. ಇದರಿಂದ ತೀವ್ರ ತೊಂದರೆಯಾಗಿದೆ.  ಪ್ರಸ್ತುತರ್‍ಯಾಂಪ್‌ ಅಳ ವಡಿಸಲು ಅವಕಾಶವಿಲ್ಲದಿ ರುವುದರಿಂದ ಎರಡು ಮತ್ತು 3-4ನೇ ಪ್ಲಾಟ್‌ ಫಾರಂಗಳಲ್ಲಿ ಲಿಫ್ಟ್ ಅಳವಡಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಸ್ಥೆಗಳು, ಸಾಮಾಜಿಕ ಕಾಳಜಿಯ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ದೇಣಿಗೆಯಿಂದ ಲಿಫ್ಟ್ ಅಳವಡಿಸಲು ವೇದಿಕೆ ಯೋಜನೆ ರೂಪಿಸುತ್ತಿದೆ. ಇದಕ್ಕೆ ಸಂಸದರ ನಿಧಿಯಿಂದ ಆರಂಭಿಕ ಕೊಡುಗೆ ನೀಡಬೇಕೆಂದು ಮನವಿ ಮಾಡಲಾಯಿತು.

ಭರವಸೆ: ವೇದಿಕೆಯ ಎಲ್ಲ ಬೇಡಿಕೆಗಳನ್ನು ಆಲಿಸಿದ ಸಂಸದ ಮುದ್ದಹನುಮೇಗೌಡ ಅವರು ಸಂಸತ್‌ ಅಧಿವೇಶನದ ನಂತರ ಎಲ್ಲ ಬೇಡಿಕೆಗಳ ಈಡೇರಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್‌, ಹಿರಿಯ ಉಪಾಧ್ಯಕ್ಷರಾದ ಪರಮೇಶ್ವರ್‌, ಖಜಾಂಚಿ ಆರ್‌.ಬಾಲಾಜಿ ಹಾಗೂ ನಿರ್ದೇಶಕರಾದ ಸಿ.ನಾಗರಾಜ್‌ ಮತ್ತು ಎಚ್‌.ಆರ್‌.ರಘು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next