Advertisement

ಕಾಡಾನೆ ಸ್ಥಳಾಂತರಕ್ಕೆ ಗ್ರಾಮಸ್ಥರ ಮನವಿ

02:27 PM May 11, 2022 | Team Udayavani |

ಬಾಳೆಹೊನ್ನೂರು: ಬಾಳೆಹೊನ್ನೂರು, ಸೀಕೆ, ಮುದುಗುಣಿ, ವಾಟುಕುಡಿಗೆ, ಕೆಸುವಿನಮನೆ ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಆನೆಯೊಂದು ದಾಳಿ ನಡೆಸಿ ಹಾನಿಯುಂಟು ಮಾಡುತ್ತಿದೆ. ಗ್ರಾಮಸ್ಥರು ತಿರುಗಾಡಲು ಭಯಪಡುತ್ತಿರುವ ಹಿನ್ನೆಲೆಯಲ್ಲಿ ಆನೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೆಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್‌ ಮಾತನಾಡಿ, ದಾಳಿ ನಡೆಸುತ್ತಿರುವ ಆನೆಯನ್ನು ಸಾಗರದಿಂದ ಹಿಡಿದು ತಂದು ಅದಕ್ಕೆ ಜಿಪಿಎಸ್‌ ಅಳವಡಿಸಿ ತಣಿಗೆಬೈಲು ವ್ಯಾಪ್ತಿಯಲ್ಲಿ ತಂದು ಬಿಟ್ಟಿದ್ದಾರೆ. ಈ ಆನೆ ಸುಮಾರು ನಾಲ್ಕೈದು ಜನರನ್ನು ತುಳಿದು ಸಾಯಿಸಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಹೊರಹೋಗಲು ಆತಂಕ ಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆನೆಯನ್ನು ಬೆರೆಡೆಗೆ ಸ್ಥಳಾಂತರ ಮಾಡಬೇಕೆಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷೆ ಅಂಬುಜಾ ಮಾತನಾಡಿ, ದಾಳಿ ನಡೆಸುತ್ತಿರುವ ಆನೆಯನ್ನು ಕೂಡಲೇ ಸ್ಥಳಾಂತರ ಮಾಡಬೇಕು, ಇಲ್ಲದಿದ್ದಲ್ಲಿ ಆನೆ ದಾಳಿಯಿಂದ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿಗೆ ನಷ್ಟ ಉಂಟಾದಲ್ಲಿ ಅರಣ್ಯ ಇಲಾಖೆಯವರೇ ನೇರ ಹೊಣೆಯಾಗಲಿದ್ದಾರೆ ಎಂದರು. ಆನೆ ದಾಳಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆ ಎದುರು ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಬಿ.ಕಣಬೂರು ಗ್ರಾಪಂ ಸದಸ್ಯರಾದ ಶ್ರೀನಿವಾಸ್‌, ಸದಾಶಿವ, ಇಬ್ರಾಹಿಂ ಶಾಫಿ, ಯು.ಅಶ್ರಫ್‌ ಸೇರಿದಂತೆ ಸೀಕೆ, ವಾಟುಕುಡಿಗೆ, ಮುದುಗುಣಿ, ಬಾಳೆಗದ್ದೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next