Advertisement

ಸ್ಮಶಾನ ಭೂಮಿ ಮಂಜೂರಾತಿಗೆ ಆಗ್ರಹ

04:56 PM May 14, 2022 | Team Udayavani |

ಭಾಲ್ಕಿ: ಪಟ್ಟಣದಲ್ಲಿ ಮಾದಿಗ ಸಮಾಜಕ್ಕೆ 4 ಎಕರೆ ಸ್ಮಶಾನ ಭೂಮಿ ಮಂಜೂರಾತಿ ಮಾಡುವಂತೆ ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ತಾಲೂಕು ಘಟಕ ಒತ್ತಾಯಿಸಿದೆ.

Advertisement

ಈ ಕುರಿತು ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಮಾದಿಗ ದಂಡೋರ ಸಮಾಜದ ತಾಲೂಕು ಅಧ್ಯಕ್ಷ ದತ್ತಾತ್ರಿ ಜ್ಯೋತಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

ಮಾದಿಗ ಸಮಾಜದ ಜನ ಕಳೆದ ಸುಮಾರು 50-60 ವರ್ಷಗಳಿಂದ ಸರ್ವೇ ನಂ.411/*/1 ರ ಜಮೀನಿನಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಸುಮಾರು 2700 ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜಕ್ಕೆ ಕೇವಲ 1 ಎಕರೆ ಸ್ಮಶಾನ ಭೂಮಿ ಗುರುತಿಸಲಾಗಿದೆ. ಜತೆಗೆ ಇರುವ 1 ಎಕರೆ ಜಮೀನು ಕೂಡ ತಗ್ಗು ದಿನ್ನೆಗಳಿಂದ ಕೂಡಿದೆ. ಅಲ್ಲದೇ ಚರಂಡಿ ನೀರು ಸ್ಮಶಾನ ಭೂಮಿಗೆ ಸೇರುತ್ತಿರುವುದರಿಂದ ಶವ ಸಂಸ್ಕಾರ ಮಾಡಲು ಅನಾನುಕೂಲವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಮಾದಿಗ ಸಮಾಜದ ಜನಸಂಖ್ಯೆ ಆಧರಿಸಿ 4 ಎಕರೆ ಜಮೀನು ಮಾದಿಗ ಸಮಾಜದ ಸ್ಮಶಾನಕ್ಕೆ ಗುರುತಿಸಿ ಕೊಡಬೇಕು. ವಿಳಂಬ ಮಾಡಿದರೆ ಬರುವ ದಿನಗಳಲ್ಲಿ ತಹಶೀಲ್ದಾರ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ಬಿಜೆಪಿ ಚುನಾವಣಾ ರಣತಂತ್ರ: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ

ಈ ವೇಳೆ ದೇವಿದಾಸ ರೇಷ್ಮೆ, ಸಂಜುಕುಮಾರ ಮೇತ್ರೆ, ರಾಜಶೇಖರ ರೇಷ್ಮೆ, ರಾಹುಲ ಮೇತ್ರೆ, ಸಿಮನ್‌ ಹಾಲೇಪುರ್ಗೆ, ಅರುಣ ರೇಷ್ಮೆ, ಶಾಮರಾವ್‌ ಥಮಗ್ಯಾಳೆ, ಮಹೇಶ್‌, ಗುಂಡಮ್ಮ ದುಬಲಗುಂಡೆ ಸೇರಿದಂತೆ ಇತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next