Advertisement

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಆಗ್ರಹ

05:51 PM Jan 05, 2022 | Shwetha M |

ಮುದ್ದೇಬಿಹಾಳ: ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಇಲ್ಲಿನ ಸಲಾಂ ಭಾರತ ಟ್ರಸ್ಟ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಗೆ ಸಲ್ಲಿಸಿದರು.

Advertisement

ಕರ್ನಾಟಕ ರಾಜ್ಯದಲ್ಲಿ ನೂರಾರು ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿದ್ದರ ಬಗ್ಗೆ ಗಮನ ಕೊಡದ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದೆ. ಡಾ| ಅಂಬೇಡ್ಕರ್‌ ಅವರ ಆಶಯದಂತೆ ಈ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬ ಪ್ರಜೆಗೂ ಅವನಿಗೆ ಇಷ್ಟ ಬಂದ ರೀತಿ ಸ್ವಾಭಿಮಾನದಿಂದ ಬದುಕುವ ಅವಕಾಶ ಕೊಟ್ಟು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವಂಥ ಶ್ರೇಷ್ಠ ಸಂವಿಧಾನ ಬರೆದು ದೇಶಕ್ಕೆ ಕೊಟ್ಟಿದ್ದಾರೆ.

ಬಿಜೆಪಿಯು ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದುರುದ್ದೇಶದಿಂದ ಕೆಲವ ಮೂಲಭೂತವಾಗಿ ಸಂಘಟನಗಳಾದ ಆರ್‌ಎಸ್‌ಎಸ್‌, ಭಜರಂಗದಳ, ಶ್ರೀರಾಮ ಸೇನೆ, ಹಿಂದೂ ಪರಿಷತ್‌, ಎಬಿವಿಪಿ ಮುಂತಾದವುಗಳನ್ನು ಒಂದೇ ಜಾತಿಯ ಮನುವಾದಿಗಳನ್ನು ಮಾಡಿಕೊಂಡು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಬ್ಟಾಳಿಕೆ ಮಾಡುತ್ತಿದೆ. ದೇಶಾದ್ಯಂತ ಹಲವು ಚರ್ಚ, ಮಸೀದಿ, ವಿದ್ಯಾಸಂಸ್ಥೆ, ಮದ್ರಸಾಗಳ ಮೇಲೆ ದಾಳಿ ಮಾಡಲಾಗಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದು ಸಂವಿಧಾನ ವಿರೋಧಿಯಾಗಿದೆ.

ಬಸವಣ್ಣನವರ ಕ್ರಾಂತಿ ನಡೆದು 800 ವರ್ಷಗಳಾಗಿದ್ದು ಬಸವಣ್ಣರವರು ಮನುವಾದಿ, ಬ್ರಾಹ್ಮಣವಾದಿಗಳಿಂದ ಬೇರ್ಪಡಿಸಿ ಲಿಂಗಾಯತ ಸಮುದಾಯ ಹುಟ್ಟು ಹಾಕಿದ್ದಾರೆ. ಸಚಿವ ಸಂಪುಟದಲ್ಲಿ ಎಲ್ಲರೂ ಮತಾಂತರ ಆಗಿರುವವರೇ ಇದ್ದಾರೆ. ಒಂದು ವೇಳೆ ಕಾಯ್ದೆ ಜಾರಿ ಮಾಡುವುದೇ ಆದರೆ ಈಗಿನ ಲಿಂಗಾಯತರು ಸಹ ಮನುವಾದಿ ಬ್ರಾಹ್ಮಣವಾದಿಗಳ ಜಾತಿಗೆ ಮತಾಂತರ ಆಗಬೇಕಾಗುತ್ತದೆ. ಆದ್ಧರಿಂದ ನಿಜವಾದ ಬಸವಣ್ಣನವರ ತತ್ವ ಸಿದ್ಧಾಂತ ಅರ್ಥ ಮಾಡಿಕೊಂಡು ಕಾಯ್ದೆ ಜಾರಿ ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕೆ.ಬಿ.ದೊಡಮನಿ ವಕೀಲರು, ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ವಾಜೀದ್‌ ಹಡಲಗೇರಿ, ಮಹೆಬೂಬ ಆರ್‌.ಕೆ, ಐ.ಕೆ. ಸಾಸನೂರ ವಕೀಲರು, ಮಾರುತಿ ಸಿದ್ದಾಪುರ, ಕಯ್ಯೂಂ ಚೌಧರಿ, ಸದ್ದಾಂ ನದಾಫ್‌, ಸೋಹೆಲ್‌ ನಾಲತವಾಡ, ಬುರಾನ್‌ ಬೆನ್ನಟ್ಟಿ ಮತ್ತಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next