ಮಡಿಕೇರಿ : ಜಿಲ್ಲೆಯಲ್ಲಿ ರುವ ಮಸೀದಿಗಳ ಅಭಿವೃದ್ಧಿಗಾಗಿ ಎಲ್ಲ ಜಮಾಅತ್‌ಗಳು ಕಡ್ಡಾಯವಾಗಿ ವಕ್ಫ್ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಕೊಳ್ಳಬೇಕೆಂದು ವಕ್ಫ್ ಸಲಹಾ ಸಮಿತಿ ಮನವಿ ಮಾಡಿದೆ.
ಕೊಡಗು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಎ. ಯಾಕುಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಯಾಕುಬ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮೊದಲನೇ ಸಭೆ ಇದಾಗಿದ್ದು ಹಲವಾರು ಮಹತ್ವದ ತೀರ್ಮಾನಗಳನ್ನು ಸದಸ್ಯರ ಸಮ್ಮುಖ ದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಮಸೀದಿ ಗಳಿದ್ದರೂ 148 ಮಸೀದಿಗಳು ಮಾತ್ರ ವಕ್ಫ್ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿವೆ. ಆದ್ದರಿಂದ ಜಿಲ್ಲೆಯ ಲ್ಲಿರುವ ಮಸೀದಿಗಳು ಕಡ್ಡಾಯ ವಾಗಿ ವಕ್ಫ್ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಕೊಂಡು ಅಭಿವೃದ್ಧಿಗೆ ಪೂರಕವಾಗಿ ನಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಸೋಮವಾರಪೇಟೆಯ ರೇಂಜರ್ ಬ್ಲಾಕ್‌ನಲ್ಲಿ ಜಾಮೀಯಾ ಮಸೀದಿಯ ಅಧೀನದಲ್ಲಿದ್ದ ವಕ್ಫ್ ಆಸ್ತಿ ಒತ್ತುವರಿ ಯಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಸಿ ವಕ್ಫ್ ಆಸ್ತಿ ಯನ್ನು ಗುರುತಿಸಿ ನೀಡಿದ್ದಾರೆ. ಆ ಪ್ರದೇಶದಲ್ಲಿ ವಕ್ಫ್ ಇಲಾಖೆಯ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮಡಿಕೇರಿ ನಗರದ ಜಾಮೀಯಾ ಮಸೀದಿಗೆ ಒಳಪಟ್ಟ ಮುಸಲ್ಮಾನರ ಶ್ಮಶಾನ ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿದೆ. ತಡೆಗೋಡೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಕ್ಫ್ ಖಾತೆ ಸಚಿವರ ಬಳಿ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಯಾಕುಬ್ ತಿಳಿಸಿದರು.
ಮದರಸ ಹಾಗೂ ಜಮಾಅತ್‌ಗಳಿಗೆ ಅಲ್ಪಸಂಖ್ಯಾಕರ ಸೌಲಭ್ಯಗಳ ಕುರಿತು ಮಾಹಿತಿಯ ಕೊರತೆ ಇರುವುದರಿಂದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಸುಂಟಿಕೊಪ್ಪ ಮತ್ತು ವಿರಾಜಪೇಟೆಯಲ್ಲಿ ಸಭೆ ನಡೆಸಿ ಮಾಹಿತಿ ನೀಡಲಾಗುವುದು. ಸಚಿವರ ಸಮ್ಮುಖದಲ್ಲಿ ಬೃಹತ್ ಕಾರ್ಯಾಗಾರವನ್ನು ಆಗಸ್ಟ್ ನಲ್ಲಿ ನಡೆಸಲು ನಿರ್ಧರಿಸಲಾ ಗಿದೆ ಎಂದರು. ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಅಬ್ದುಲ್ ರೆಹಮಾನ್ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.