Advertisement

ಸೇವಾ ಭದ್ರತೆಗೆ ಒತ್ತಾಯಿಸಿ ಮನವಿ

05:53 PM Oct 10, 2020 | Suhan S |

ಸಂಡೂರು: 18 ವರ್ಷಗಳಿಂದ ಸರ್ಕಾರದ ಯಾವುದೇ ವೇತನ ಹಾಗೂ ಸೇವಾ ಭದ್ರತೆ ಇಲ್ಲದೆ ಪೋಡಿ ಮುಕ್ತ ಕೆರೆ ಹೀಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ.ಅದರೆ ನಮ್ಮನ್ನು ಸ್ವಾಮಿತ್ವ ಯೋಜನೆ ಅಡಿಯಲ್ಲಿ ಬಳಸಿಕೊಳ್ಳಲು ಆದೇಶಿಸಿದ್ದು ಅದನ್ನು ಕೈಬಿಟ್ಟು ನಮಗೆ ಸೇವಾ ಭದ್ರತೆಯನ್ನು ಕೊಡಬೇಕೆಂದು ಖಾಸಗಿ ಪರವಾನಿಗೆ ಪಡೆದ ಭೂಮಾಪಕರ ಮುಖಂಡಎನ್‌. ಹನುಮಂತಪ್ಪ ಮನವಿ ಮಾಡಿದರು.

Advertisement

ಅವರು ತಹಶೀಲ್ದಾರ್‌ ಎಚ್‌. ಜೆ. ರಶ್ಮಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಆಯುಕ್ತರು ಪರವಾನಗೆ ಪಡೆದ ಭೂಮಾಪಕರನ್ನು ಬಳಸಿಕೊಂಡು ಸ್ವಾಮಿತ್ಯಯೋಜನೆಯನ್ನು ನಿರ್ವಹಿಸಬೇಕು ಎಂದು ಅದೇಶಿಸಿದ್ದಾರೆ. ಆದರೆ ಇದರಲ್ಲಿ ಯಾವುದೇ ಸೇವಾ ಭದ್ರತೆಯಾಗಲಿ ವೇತನವಾಗಲಿ,ಸಲಕರಣೆಗಳಾಗಲಿ ಮತ್ತು ಜವಾನರನ್ನು ಕೊಡದೇ ಬಳಸಿಕೊಳ್ಳಲು ತಿಳಿಸಿದ್ದು ಇದರಿಂದ ಇಡಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಆದ್ದರಿಂದ ಸರ್ಕಾರದಿಂದ ಹಣಬಿಡುಗಡೆಯೂ ಅಗುವುದು ದುಸ್ತರವಾಗುತ್ತಿದೆ. ಆದ್ದರಿಂದ ಈ ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕೈಬಿಡಬೇಕು. 11 ಈ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಭೂಮಾಪಕರಿಗೆ ಸರಿಯಾದ ತರಬೇತಿ ಮತ್ತು ಸಲಕರಣೆ, ಜವಾನರನ್ನು ನೀಡುವ ಮೂಲಕ ಕೆಲಸಕ್ಕೆ ಸರಿಯಾದವೇತವನ್ನು ನೀಡಬೇಕು, ಇಲ್ಲವಾದಲ್ಲಿ ನಮ್ಮ ಕುಟುಂಬಗಳ ನಿರ್ವಹಣೆ ಈಗಾಗಲೇ ದುಸ್ತರವಾಗಿದೆ. ಆದರೆ ಈ ಯೋಜನೆಯಲ್ಲಿ ಮುಂದುವರೆದರೆ ಇನ್ನೂ ಕಷ್ಟವಾಗುತ್ತದೆ. ಆದ್ದರಿಂದ ಸ್ವಾಮಿತ್ಯ ಯೋಜನೆ ಅಡಯಲ್ಲಿಪರವಾನಗಿ ಭೂಮಾಪಕರನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪರವಾನಗಿ ಪಡೆದ ಭೂಮಾಪಕರಾದ ಎಚ್‌.ಎಂ. ಶಿವಮೂರ್ತಿ, ಯು. ರಾಘವೇಂದ್ರ, ಎ.ಎನ್‌. ಕೆಂಚಲಿಂಗಪ್ಪ, ಜಿ.ಎಂ.ಕುವೆಂಪು, ಕೆ. ಗಂಗಾಧರ ಹಾಗೂಎನ್‌. ಹನುಮಂತಪ್ಪ ಇವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next