Advertisement
ರಸ್ತೆ ಪಕ್ಕ ಹಾಗೂ ಪೆಟ್ರೋಲ್ ಪಂಪ್‌ಗಳ ಬಳಿ ನಿಲುಗಡೆಗೊಳಿಸಿದ ವಾಹನಗಳಿಂದ ಬ್ಯಾಟರಿಗಳನ್ನು ಎಗರಿಸುತ್ತಿದ್ದ ಕಳ್ಳರ ಜಾಲ ಇದೀಗ ರಸ್ತೆ ಬದಿಯಲ್ಲಿ ಅಳವಡಿ ಸಲಾಗಿರುವ ಸೋಲಾರ್ ಬೀದಿ ದೀಪಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುತ್ತಿದೆ. ಜಿಲ್ಲೆ ಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳು ಅಳವಡಿಸಿದ್ದ ಸಾವಿರಕ್ಕೂ ಮಿಕ್ಕಿ ಸೋಲಾರ್ ಬೀದಿ ದೀಪಗಳ ಬ್ಯಾಟರಿಗಳು ಕಳವಾಗಿವೆ. 2 ವರ್ಷಗಳ ಹಿಂದೆ ಕಡಬ ತಾ|ನ ವ್ಯಾಪ್ತಿಯ ಪೆರಾಬೆ, ಆಲಂಕಾರು, ಕುಟ್ರಾ ಪಾಡಿ, ನೆಲ್ಯಾಡಿ ಗ್ರಾ.ಪಂ.ಗಳು ಅಳವಡಿಸಿದ್ದ ಸೋಲಾರ್ ಬೀದಿ ದೀಪಗಳ 50ಕ್ಕೂ ಹೆಚ್ಚು ಬ್ಯಾಟರಿಗಳನ್ನು ಒಂದೇ ದಿನ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಕೆಲವು ದಿನಗಳ ಹಿಂದೆ ಕುಟ್ರಾಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಲಾರ್ ಬೀದಿ ದೀಪಗಳಿಗೆ ಅಳವಡಿಸಿದ ಹಲವು ಬ್ಯಾಟರಿಗಳು ಮತ್ತೆ ಕಳ್ಳರ ಪಾಲಾಗಿವೆ.
Related Articles
Advertisement
ಸೂಕ್ತ ಕ್ರಮ ಕೈಗೊಳ್ಳ ಲಾಗುವುದು :
ಬ್ಯಾಟರಿ ಕಳವಿಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಜಿಲ್ಲೆಯ ಎಲ್ಲ ಠಾಣೆಗಳಿಂದ ಮಾಹಿತಿ ತರಿಸಿಕೊಂಡು ಕಳ್ಳರ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. –ರಿಷಿಕೇಶ್ ಭಗವಾನ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇನ್ನೂ ಪತ್ತೆಯಾಗಿಲ್ಲ :
ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೂ ಪತ್ತೆಯಾಗಿಲ್ಲ. ಪ್ರಸ್ತುತ ಪ್ರತ್ಯೇಕ ಬ್ಯಾಟರಿಯ ಬದಲು ಸೋಲಾರ್ ಪ್ಯಾನಲ್‌ಗೇ ಅಳವಡಿಸಲಾಗಿರುವ ಬ್ಯಾಟರಿಗಳು ಇರುವ ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ. –ನವೀನ್ ಭಂಡಾರಿ ಎಚ್., ಇಒ, ಕಡಬ-ಪುತ್ತೂರು ತಾ.ಪಂ.
– ನಾಗರಾಜ್ ಎನ್.ಕೆ.