Advertisement

ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಆಗ್ರಹ

10:07 PM Sep 27, 2019 | Team Udayavani |

ಕೊಲ್ಲೂರು: ವಂಡ್ಸೆಯ ಸರಕಾರಿ ಜಾಗದಲ್ಲಿ ನಾಡ ಕಚೇರಿ ನಿರ್ಮಿಸಬೇಕೆಂಬ ಬಗ್ಗೆ ಸೆ.27ರಂದು ಗ್ರಾಮಸಭೆಯಲ್ಲಿ ನಡೆದ ಭಾರೀ ಚರ್ಚೆಯಲ್ಲಿ ಸರಕಾರಿ ಸಂಕೀರ್ಣದಲ್ಲಿ ಕಾದಿರಿಸಿದ 38 ಸೆಂಟ್ಸ್‌ ಜಾಗದಲ್ಲಿ ಪೂರ್ಣಪ್ರಮಾಣದ ನಾಡ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ನಾಡ ಕಚೇರಿಯ ದುಃಸ್ಥಿ ತಿ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿ ಪರ್ಯಾಯ ವ್ಯವಸ್ಥೆ ಒದಗಿಸುವಂತೆ ಬೆಳಕು ಚೆಲ್ಲಿತು. ವಂಡ್ಸೆ ಪೇಟೆಯಲ್ಲಿ ಅಮಿತ ವೇಗದಿಂದ ಸಾಗುವ ವಾಹನಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಸಂತೆ ಮಾರ್ಕೆಟ್‌ ತಿರುವು, ತೆಂಕೊಡಿಗೆ ಶಾಲಾ ವಠಾರ ಹಾಗೂ ಸರಕಾರಿ ಶಾಲೆಯ ತಿರುವಿನಲ್ಲಿ ಹಂಪ್‌ ನಿರ್ಮಿಸುವಂತೆ ಗ್ರಾಮಸ್ಥರ ಒತ್ತಾಯಿಸಿದರು.

ಲೋಕೊಪಯೋಗಿ ಇಲಾಖೆಯ ಮುಖ್ಯ ರಸ್ತೆಯ ಪಾರ್ಶ್ವದಲ್ಲಿರುವ ಒಳಚರಂಡಿಗೆ ಸಂಪೂರ್ಣ ಕಾಂಕ್ರಿಟೀಕರಣ ಮಾಡುವ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದು ಕೊಳಚೆ ಸಹಿತ ತ್ಯಾಜ್ಯವನ್ನು ಚರಂಡಿಗೆ ಎಸೆಯುವ ಪ್ರವೃತ್ತಿ ಸಾಂಕ್ರಾಮಿಕ ರೋಗಕ್ಕೆ ಎಡೆಮಾಡುವುದು ಎಂದರಲ್ಲದೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಪಂ. ಹಾಗೂ ಪೊಲೀಸರ ಗಮನಕ್ಕೆ ಬಾರದೇ ಅಲ್ಲದೇ ಊರವರು ನೇಮಕಾತಿ ಮಾಡದ ಗೂರ್ಕ ಮನೆಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರು ಸಹಿತ ದಾದಿ ಹಾಗೂ ಸಿಬಂದಿಗಳ ಕೊರತೆಯ ಬಗ್ಗೆ ಸಭೆಯ ಗಮನಕ್ಕೆ ತಂದ ಗ್ರಾಮಸ್ಥರು ತುರ್ತು ಚಿಕಿತ್ಸೆಗೆ ಅಲೆದಾಡುವ ಸನ್ನಿವೇಶ ಎದುರಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷ ಶಾರದಾ, ನೊಡೆಲ್‌ ಅಧಿಕಾರಿ ತುಳಸಿ, ತಾ.ಪಂ. ಸದಸ್ಯ ಉದಯ ಪೂಜಾರಿ, ಗ್ರಾ.ಪಂ. ಸದಸ್ಯರಾದ ಗುಂಡು ಪೂಜಾರಿ, ಉದಯ ಕೆ. ನಾಯ್ಕ, ಸಿಂಗಾರಿ, ಪಶುವೈದ್ಯ ಡಾ| ಬಾಬಣ್ಣ ಪೂಜಾರಿ, ವಿಎ ವಿಘ್ನೇಶ, ಮೆಸ್ಕಾಂ ಜೇಇ ಪ್ರಕಾಶ್‌, ಕಾರ್ಯದರ್ಶಿ ಶಂಕರ ಆಚಾರ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಬೇಬಿ, ಆರೋಗ್ಯ ಇಲಾಖೆಯ ಎಎನ್‌ಎಂ ಪಾರ್ವತಿ ಪಟಗಾರ್‌, ವಂಡ್ಸೆ ಶಾಲಾ ಮುಖ್ಯ ಶಿಕ್ಷಕಿ ಆಶಾ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಪಿಡಿಒ ರೂಪಾ ಗೋಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಶಂಕರ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next