Advertisement

ಬಯೋಮೆಟ್ರಿಕ್‌ ರದ್ದತಿಗೆ  ಆಗ್ರಹ

09:13 PM May 08, 2021 | Team Udayavani |

ಕೊರಟಗೆರೆ: ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ಮೆಟ್ರಿಕ್‌ ಪದ್ಧತಿ ಯಿಂದಕೊರೊನಾ ರೋಗ ಹರಡುವ ಭೀತಿ ಎದು ರಾಗಿದ್ದು, ಸರ್ಕಾರ ಬಯೊ ಮೆಟ್ರಿಕ್‌ ರದ್ದು ಪಡಿಸಿಒಟಿ ಪಿ ಅಥವಾ ಚೆಕ್‌ಲಿಸ್ಟ್‌ನ ಮೂಲಕ ಪಡಿತರಪದಾ ರ್ಥ ವಿತರಣೆಗೆ ಅವಕಾಶ ಕಲ್ಪಿಸು ವಂತೆಆಗ್ರ ಹಿಸಿ, ಕೊರಟಗೆರೆ ನ್ಯಾಯ ಬೆಲೆ ಅಂಗಡಿಮಾಲೀ ಕರ ಸಂಘ ಶುಕ್ರವಾರ ತಹಶೀಲ್ದಾರ್‌ ಗೋವಿಂದರಾ ಜು ರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ84 ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿವೆ.ಅಂತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ಸೇರಿ 40 ಸಾವಿರಕ್ಕೂ ಅಧಿಕ ಪಡಿತರ ಕಾರ್ಡ್‌ಗಳಿವೆ. ಜನರು ಪಡಿತರ ಪಡೆಯುವಾಗಕಡ್ಡಾಯ ವಾಗಿ ಬಯೋಮೆಟ್ರಿಕ್‌ ನೀಡ ಬೇಕಾಗಿದೆ. ಸಾಮಾಜಿಕ ಅಂತರ ಮತ್ತು ಕೊರೊನಾಹರಡುವಿಕೆ ತಡೆಯಲು ನಮಗೆ ಕಷ್ಟಸಾಧ್ಯವಾಗಿದೆ. ತಕ್ಷಣ ಬಯೋ ಮೆಟ್ರಿಕ್‌ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕೊರಟಗೆರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕೊರೊನಾಸೋಂಕಿನಿಂದ 83 ಜನ ನ್ಯಾಯಬೆಲೆ ಅಂಗಡಿಮಾಲೀಕರು ಮೃತಪಟ್ಟಿದ್ದಾರೆ ಎಂದರು.ದಾಸರಹಳ್ಳಿ ನ್ಯಾಯಬೆಲೆ ಅಂಗಡಿ ಮಾಲೀಕರಮೇಶ್‌ ಮಾತನಾಡಿ, ನ್ಯಾಯಬೆಲೆ ಅಂಗಡಿಮಾಲೀಕರಿಗೆ ಸರ್ಕಾರ ಯಾವುದೇ ಭದ್ರತೆಕಲ್ಪಿಸಿಲ್ಲ.

ತಾಲೂಕಿನ 84 ಪಡಿತರ ಕೇಂದ್ರದಲ್ಲಿಕನಿಷ್ಟ 700ರಿಂದ 800ಪಡಿತರ ಕಾರ್ಡ್‌ಗಳಿವೆ.ಗ್ರಾಮೀಣ ಜನತೆಯ ನೇರ ವಾಗಿ ಸಂಪರ್ಕನಮಗೆ ಇರುತ್ತದೆ. ನಮಗೆ ಆರೋಗ್ಯಭದ್ರತೆಯ ಜತೆ ಸರ್ಕಾರದ ವಿಶೇಷ ಸೌಲಭ್ಯಘೋಷಣೆ ಮಾಡಬೇಕು ಎಂದರು.ತಹಶೀಲ್ದಾರ್‌ ಗೋವಿಂದರಾಜು ಮಾತನಾಡಿ, ಸರ್ಕಾರಿ ನ್ಯಾಯಬೆಲೆ ಅಂಗಡಿಯಮಾಲೀಕರು ಸಲ್ಲಿಸಿರುವ ಮನವಿಯನ್ನುನಾನು ಕೊಡಲೇ ಡೀಸಿ ಮತ್ತು ಸರ್ಕಾ ರಕ್ಕೆ ಪತ್ರಬರೆಯುತ್ತೇನೆ ಎಂದರು. ಕೊರಟಗೆರೆನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದನಿರ್ದೇಶಕ ರಂಗರಾಜು, ನಾಗೇಶ್‌, ಆನಂದ್‌,ಸೋಮಶೇಖರ್‌, ರಾಮಚಂದ್ರಪ್ಪ, ಶಿವಣ್ಣ,ರಂಗಧಾಮಯ್ಯ, ನಂದೀಶ್‌ ಹಾಗೂಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next