Advertisement

ನೇಕಾರರಿಗೆ ವಿಶೇಷ ಪ್ಯಾಕೇಜ್‌ ನೀಡಲು ಆಗ್ರಹ

03:07 PM May 03, 2020 | Suhan S |

ರಾಮದುರ್ಗ: ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿಕೆಯಿಂದ ಸಾಂಪ್ರದಾಯಿಕ ನೇಕಾರಿಕೆ ವೃತ್ತಿ ಅವಲಂಬಿಸಿದ ನೇಕಾರರ ಸಂಕಷ್ಟಕ್ಕೆ ಸ್ಪಂದಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ನೇಕಾರ ವೇದಿಕೆಯಿಂದ ಮಂಗಳವಾರ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

Advertisement

ಕಳೆದ 40 ದಿನಗಳಿಂದ ರಾಜ್ಯದಲ್ಲಿ ಕೋವಿಡ್‌-19 ಲಾಕಡೌನ್‌ ಹೇರಲಾಗಿದೆ. ಇದರಿಂದ ತಾಲೂಕಿನಲ್ಲಿ ಸಾವಿರಾರು ಸಂಖ್ಯೆ ನೇಕಾರರು ಉದ್ಯೋಗ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಇತರರನ್ನು ಬೇಡುವ ಪರಿಸ್ಥಿತಿಗೆ ನೇಕಾರರು ಬಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಕಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಪರಿಹಾರ ನೀಡಬೇಕು. ಮಾರುಕಟ್ಟೆ ಶುರುವಾಗುವ ತನಕ ಸರ್ಕಾರವು ನೇಕಾರರು ಉತ್ಪಾದಿಸಿದ ಸೀರೆಗಳನ್ನು ಖರೀದಿಸಬೇಕು ಅಥವಾ ಶೇ. 80 ಹಣ ನೀಡಿ ಅಡವಿಟ್ಟು ಕೊಳ್ಳಬೇಕು. ಜವಳಿ ಇಲಾಖೆ ಮೂಲಕ ಪ್ರತಿ ತಿಂಗಳು 5000 ರೂ. ಧನ ಸಹಾಯ ನೀಡಬೇಕು. ಲಾಕಡೌನ್‌ ಸಮಯದಲ್ಲಿ ಆದ ನಷ್ಟಕ್ಕೆ ಪ್ರತಿಯಾಗಿ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ತಾಲೂಕು ನೇಕಾರ ವೇದಿಕೆ ಅಧ್ಯಕ್ಷ ಶಂಕ್ರಣ್ಣ ಮುರುಡಿ, ವಿಠಲ ಮುರುಡಿ, ಏಕನಾಥ ಕೊಣ್ಣೂರ, ಪುರಸಭೆ ಸದಸ್ಯರಾದ ಶಂಕರ ಬೆನ್ನೂರ, ಪ್ರಹ್ಲಾದ್‌ ಬಡಿಗೇರ, ರಾಮಚಂದ್ರ ಯಾದವಾಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next