Advertisement

12 ಗಂಟೆ ವಿದ್ಯುತ್‌ ಸರಬರಾಜಿಗೆ ಆಗ್ರಹ

02:19 PM Mar 03, 2020 | Suhan S |

ಯಾದಗಿರಿ: ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಸರಬರಾಜು ಆಗುತ್ತಿಲ್ಲವೆಂದು ಆಕ್ರೋಶಗೊಂಡ ರೈತರು ವಡಗೇರಾ ಕ್ರಾಸ್‌ ರಸ್ತೆಯಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ರೈತರು ಭತ್ತ ಬೆಳೆದಿದ್ದು, ಸಮರ್ಪಕ ವಿದ್ಯುತ್‌ ಇಲ್ಲದೇ ಬೆಳೆ ಒಣಗುತ್ತಿದ್ದು, ರೈತರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೇವಲ 7 ಗಂಟೆ ವಿದ್ಯುತ್‌ ಸರಬರಾಜುಗೊಳ್ಳುತ್ತಿದ್ದು, ಇದರಲ್ಲಿ 2-3 ಗಂಟೆ ಲೈನ್‌ ಪಾಲ್ಟ್ ಎಂದು ಕಡಿತಗೊಳಿಸಲಾಗುತ್ತಿದೆ. ಭತ್ತ ನಾಟಿ ಮಾಡುವ ವೇಳೆ 18 ಗಂಟೆ ವಿದ್ಯುತ್‌ ನೀಡಲಾಗುತ್ತಿತ್ತು. ಈಗ ಏಕಾಏಕಿ 7 ಗಂಟೆಗೆ ಇಳಿಕೆಯಾಗಿದ್ದು, ಇದರಿಂದ ರೈತರು ಕಂಗಾಲಾಗುವಂತೆ ಮಾಡಿದೆ ಎಂದು ತಿಳಿಸಿದರು.

ಜಿಲ್ಲೆಯ ರೈತರ ಅನುಕೂಲಕ್ಕೆ 12 ಗಂಟೆ ವಿದ್ಯುತ್‌ ಸರಬರಾಜು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದ ರೈತರು, ಬೇಡಿಕೆ ಈಡೇರಿಸದಿದ್ದರೇ ಮಾರ್ಚ್‌ 10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸುವ ಎಚ್ಚರಿಕೆ ನೀಡಿದರು.

ನಂತರ ಸ್ಥಳಕ್ಕೆ ಆಗಮಿಸಿ ಜೆಸ್ಕಾಂ ಅಧಿಕಾರಿ ರಾಘವೇಂದ್ರ ರೈತರಿಂದ ಮನವಿ ಸ್ವೀಕರಿಸಿದರು. ನವ ಕರ್ನಾಟಕ ರೈತ ಸಂಘಟನೆ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಚಿಗಾನೂರ, ಮಹಾದೇವಪ್ಪ, ಮಹಾದೇವಪ್ಪ ಚನ್ನೂರ, ಅಶೋಕರೆಡ್ಡಿ ಕುರಿಹಾಳ, ಮಲ್ಲಣ್ಣಗೌಡ ಗಡ್ಡೆಸೂಗೂರ, ಹಣಮರೆಡ್ಡಿ ರೋಟ್ನಡಗಿ, ಗುರುಗೌಡ ಕದರಾಪುರ, ಅಂಬ್ರೇಶ ಗೌಡ, ಅಮೃತರೆಡ್ಡಿ ಕೊಂಕಲ್‌ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next